ADVERTISEMENT

ವಿಶ್ವಕಪ್ ನಂತರ ಧೋನಿ ಏನು ಮಾಡುವರು?

ಸಿಎಸ್‌ಕೆ ಕೋಚ್‌ ಫ್ಲೆಮಿಂಗ್ ಅವರನ್ನು ಕಾಡಿದ ಸಂದೇಹ

ಪಿಟಿಐ
Published 25 ಮಾರ್ಚ್ 2019, 17:48 IST
Last Updated 25 ಮಾರ್ಚ್ 2019, 17:48 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ನವದೆಹಲಿ: ಈ ಬಾರಿಯ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಆಡುವುದು ಖಚಿತ ಎಂಬುದು ಈಗಾಗಲೇ ತಿಳಿದಿರುವ ವಿಷಯ.

ಆದರೆ ವಿಶ್ವಕಪ್ ಟೂರ್ನಿಯ ನಂತರ ಅವರು ಏನು ಮಾಡುವರು ಎಂಬ ಸಂದೇಹ ಮೂಡದವರು ಇಲ್ಲ. ಇದೇ ಸಂದೇಹ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್‌ ಸ್ಟೀಫನ್ ಫ್ಲೆಮಿಂಗ್ ಅವರನ್ನೂ ಕಾಡಿದೆ.

ವಿಶ್ವಕಪ್ ಟೂರ್ನಿಯ ನಂತರ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವರೇ ಎಂಬ ಸಂದೇಹ ವನ್ನು ಅವರು ವ್ಯಕ್ತಪಡಿಸಿದ್ದಾರೆ.

ADVERTISEMENT

‘ವಿಶ್ವಕಪ್‌ನಲ್ಲಿ ಆಡಿ ಪ್ರಶಸ್ತಿ ಗೆಲ್ಲಬೇಕು ಎಂಬ ಹಂಬಲ ಧೋನಿಗೆ ಇದೆ. ನಂತರ ಏನು ಎಂದು ನನಗೂ ಗೊತ್ತಿಲ್ಲ. ಆ ಬಗ್ಗೆ ನನ್ನೊಂದಿಗೆ ಅವರು ಚರ್ಚಿಸಿಲ್ಲ. ನಮ್ಮ ಚರ್ಚೆಯಲ್ಲಿ ವಿಶ್ವಕಪ್‌ ವಿಷಯ ಮಾತ್ರ ಬಂದಿತ್ತು. ಆ ಬಗ್ಗೆ ಕೇಳಿದ ಪ್ರಶ್ನೆಗಳಿಗೆಲ್ಲ ಅವರು ನಗು ನಗುತ್ತಲೇ ಉತ್ತರಿಸಿದ್ದಾರೆ’ ಎಂದು ಫ್ಲೆಮಿಂಗ್ ಹೇಳಿದರು.

ಧೋನಿ ಅವರ ನಾಯಕತ್ವದಲ್ಲಿ ಭಾರತ ತಂಡ ಏಕದಿನ ವಿಶ್ವಕಪ್‌ ಮತ್ತು ವಿಶ್ವ ಟ್ವೆಂಟಿ–20 ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.