ADVERTISEMENT

ಫುಟ್‌ಬಾಲ್‌: ಬಿಎಫ್‌ಸಿ ‘ಬಿ’ ಜಯಭೇರಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 18:07 IST
Last Updated 14 ಡಿಸೆಂಬರ್ 2018, 18:07 IST

ಬೆಂಗಳೂರು: ಅಲ್ತಮಶ್‌ ಸೈಯದ್ ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರು ಎಫ್‌ಸಿ ‘ಬಿ’ ತಂಡ ಬಿಡಿಎಫ್‌ಎ ಸೂಪರ್ ಡಿವಿಷನ್ ಟೂರ್ನಿಯ ಪಂದ್ಯದಲ್ಲಿ 2–0ಯಿಂದ ಗೆದ್ದಿತು.

ಶುಕ್ರವಾರದ ಪಂದ್ಯದಲ್ಲಿ ಈ ತಂಡ ಎಡಿಇ ಎಫ್‌ಸಿಯನ್ನು ಮಣಿಸಿತು. ಅಲ್ತಮಶ್‌ 21ನೇ ನಿಮಿಷ ಮತ್ತು 47ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.

‘ಎ’ ಡಿವಿಷನ್‌ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್‌ ತಂಡ 1–0ಯಿಂದ ಅಂಚೆ ಇಲಾಖೆ ತಂಡವನ್ನು ಸೋಲಿಸಿತು. ದೀಪಕ್‌ 55ನೇ ನಿಮಿಷದಲ್ಲಿ ಗೋಲು ಗಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.