ADVERTISEMENT

ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಟೂರ್ನಿ: ಬಿಎಫ್‌ಸಿ ಜಯಭೇರಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 20:31 IST
Last Updated 29 ಸೆಪ್ಟೆಂಬರ್ 2022, 20:31 IST
ಬಿಎಫ್‌ಸಿಯ ಮೊನೀರುಲ್‌ ಮುಲ್ಲಾ (ಎಡ) ಮತ್ತು ಡೆಕ್ಕನ್‌ ಎಫ್‌ಸಿ ತಂಡದ ಅಮಲ್‌ ಜೇಕಬ್‌ ನಡುವಿನ ಪೈಪೋಟಿ –ಪ್ರಜಾವಾಣಿ ಚಿತ್ರ
ಬಿಎಫ್‌ಸಿಯ ಮೊನೀರುಲ್‌ ಮುಲ್ಲಾ (ಎಡ) ಮತ್ತು ಡೆಕ್ಕನ್‌ ಎಫ್‌ಸಿ ತಂಡದ ಅಮಲ್‌ ಜೇಕಬ್‌ ನಡುವಿನ ಪೈಪೋಟಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪಂದ್ಯ ಕೊನೆಗೊಳ್ಳಲು ಕೆಲವೇ ಸೆಕೆಂಡುಗಳಿರುವಾಗ ರಾಬಿನ್‌ ಯಾದವ್‌ ತಂದಿತ್ತ ಗೋಲಿನ ನೆರವಿನಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಜಯ ಗಳಿಸಿದರು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ 1–0 ರಲ್ಲಿ ಡೆಕ್ಕನ್‌ ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಮಣಿಸಿತು. ತುರುಸಿನ ಹೋರಾಟ ನಡೆದ ಪಂದ್ಯ ಇನ್ನೇನು ಡ್ರಾದಲ್ಲಿ ಕೊನೆಗೊಳ್ಳುತ್ತದೆ ಎನ್ನುವಷ್ಟರಲ್ಲಿ ಬಿಎಫ್‌ಸಿ ಗೆಲುವು ಸಾಧಿಸಿತು. ರಾಬಿನ್‌ (90+5) ಅವರು ಚೆಂಡನ್ನು ಗುರಿ ಸೇರಿಸಲು ಯಶಸ್ವಿಯಾದರು.

ಇನ್ನೊಂದು ಪಂದ್ಯದಲ್ಲಿ ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು 5–0 ಗೋಲುಗಳಿಂದ ಬಿಯುಎಫ್‌ಸಿ ಎದುರು ಗೆದ್ದಿತು. ಕೌಸಿ ಬರ್ನಾರ್ಡ್‌ ಯಾವೊ (9, 38 ಮತ್ತು 61ನೇ ನಿ.) ಮೂರು ಗೋಲುಗಳನ್ನು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಪ್ಪು (43) ಹಾಗೂ ದಮೆಕಿ ಕೊಂಗ್‌ಸ್ತಿಯಾ (48) ತಲಾ ಒಂದು ಗೋಲು ಗಳಿಸಿದರು.

ADVERTISEMENT

ಪಿಂಕ್‌ ಪ್ಯಾಂಥರ್ಸ್‌ಗೆ ಗೆಲುವು: ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಮಹಿಳಾ ಲೀಗ್‌ನಲ್ಲಿ ಪಿಂಕ್‌ ಪ್ಯಾಂಥರ್ಸ್‌ 3–0 ರಲ್ಲಿ ರೂಟ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ವಿ.ಅಭಿರಾಮಿ (1ನೇ ನಿ.) ಹಾಗೀ ಅಲೀನಾ ಟೋನಿ (6 ಮತ್ತು 85ನೇ ನಿ.) ಅವರು ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.