ADVERTISEMENT

ಚಾಂಪಿಯನ್ನರಿಗೆ ಆರನೇ ಪಂದ್ಯದಲ್ಲೂ ನಿರಾಸೆ

ಪಿಟಿಐ
Published 3 ನವೆಂಬರ್ 2018, 19:04 IST
Last Updated 3 ನವೆಂಬರ್ 2018, 19:04 IST
ಮುಂಬೈ ತಂಡದ ಪರ ಗೋಲು ಗಳಿಸಿದ ಮೊಡೊ ಸುಗೊ ಸಂಭ್ರಮಿಸಿದ ರೀತಿ
ಮುಂಬೈ ತಂಡದ ಪರ ಗೋಲು ಗಳಿಸಿದ ಮೊಡೊ ಸುಗೊ ಸಂಭ್ರಮಿಸಿದ ರೀತಿ   

ಚೆನ್ನೈ: ಹಾಲಿ ಚಾಂಪಿಯನ್‌ ಚೆನ್ನೈಯಿನ್ ಎಫ್‌ಸಿ ತಂಡದ ಜಯ ಗಳಿಸುವ ಕನಸು ಸತತ ಆರನೇ ಬಾರಿಯೂ ನನಸಾಗಲಿಲ್ಲ. ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಈ ತಂಡ ಎಫ್‌ಸಿ ಮುಂಬೈ ಸಿಟಿ ತಂಡಕ್ಕೆ 0–1ರಿಂದ ಮಣಿಯಿತು.

ಈ ಮೂಲಕ ಐದನೇ ಆವೃತ್ತಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ ಐದು ಸೋಲು ಮತ್ತು ಒಂದು ಡ್ರಾದೊಂದಿಗೆ ಪಾಯಿಂಟ್ ಪಟ್ಟಿಯ ಕೊನೆಯಲ್ಲೇ ಉಳಿಯಿತು. ಮುಂಬೈ ತಂಡ ಆರು ಪಂದ್ಯಗಳಲ್ಲಿ ಮೂರನೇ ಜಯ ಗಳಿಸಿತು. ಪಾಯಿಂಟ್ ಪಟ್ಟಿಯಲ್ಲಿ ತಂಡ ಐದನೇ ಸ್ಥಾನದಲ್ಲಿದೆ.

ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಮುಂಬೈಗೆ ನಾಲ್ಕನೇ ನಿಮಿಷದಲ್ಲಿ ಫ್ರೀ ಕಿಕ್ ಅವಕಾಶ ಲಭಿಸಿತು. ಆದರೆ ಪೌಲೊ ಮಚಾದೊ ಒದ್ದ ಚೆಂಡನ್ನು ನಿಯಂತ್ರಿಸಿ ಗುರಿ ಮುಟ್ಟಿಸಲು ಅರ್ನಾಲ್ಡೊ ಇಸಾಕೊ ವಿಫಲರಾದರು. 18ನೇ ನಿಮಿಷದಲ್ಲಿ ಚೆನ್ನೈಯಿನ್‌ಗೂ ಫ್ರೀ ಕಿಕ್ ಅವಕಾಶ ಲಭಿಸಿತು. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಆ್ಯಂಡ್ರಿಯಾ ವಿಫಲರಾದರು.

ADVERTISEMENT

20ನೇ ನಿಮಿಷದಲ್ಲಿ ಮೌಡೊ ಸೊಗೊಡೊ ಗೋಲು ಗಳಿಸಿ ಮುಂಬೈ ಸಿಟಿಗೆ ಮುನ್ನಡೆ ತಂದುಕೊಟ್ಟರು. ನಂತರ ಚೆನ್ನೈಯಿನ್‌ ನಡೆಸಿದ ಪ್ರಯತ್ನವೆಲ್ಲವೂ ವ್ಯರ್ಥವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.