ADVERTISEMENT

ದಕ್ಷಿಣ ಹಾಗೂ ಪಶ್ಚಿಮ ವಲಯದ ಅಂಧರ ಫುಟ್‌ಬಾಲ್‌: ಚೆನ್ನೈ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 18:48 IST
Last Updated 31 ಆಗಸ್ಟ್ 2018, 18:48 IST

ಬೆಂಗಳೂರು: ಗೇಬ್ರಿಯಲ್‌ ಅವರ ಅಮೋಘ ಆಟದ ನೆರವಿನಿಂದ ಚೆನ್ನೈ ಫುಟ್‌ಬಾಲ್‌ ತಂಡವು ದಕ್ಷಿಣ ಹಾಗೂ ಪಶ್ಚಿಮ ವಲಯದ ಅಂಧರ ಫುಟ್‌ಬಾಲ್‌ ಟೂರ್ನಿಯ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಗೆದ್ದಿದೆ.

ಶುಕ್ರವಾರ ಇಲ್ಲಿನ ಫೀವರ್‌ ಪಿಚ್‌ ಟರ್ಫ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ, 3–0ಯಿಂದ ಸ್ಥಳೀಯ ತಂಡವನ್ನು ಮಣಿಸಿತು. ವಿಜಯೀ ತಂಡದ ಪರವಾಗಿ ಗೇಬ್ರಿಯಲ್‌ ಮೂರು ಗೋಲು ದಾಖಲಿಸಿದರು.

ಇನ್ನೊಂದು ಪಂದ್ಯದಲ್ಲಿ ಗುಜರಾತ್‌ ತಂಡವು 3–1 ಗೋಲುಗಳಿಂದ ಕೇರಳ ತಂಡದ ಎದುರು ಜಯಿಸಿತು. ಗುಜರಾತ್‌ ತಂಡದ ನೀರವ್‌ ಅವರು ಮೂರು ಗೋಲು ಗಳಿಸಿದರು.

ADVERTISEMENT

ಮತ್ತೊಂದು ಪಂದ್ಯದಲ್ಲಿ ನ್ಯೂಬೀಸ್‌ ಒನ್‌ ಹಾಗೂ ತಬ್ಸಾ ಮದುರಾ ತಂಡಗಳು ನಿಗದಿತ ಸಮಯದಲ್ಲಿ ಚೆಂಡನ್ನು ಗುರಿ ಮುಟ್ಟಿಸಲು ವಿಫಲವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.