ADVERTISEMENT

ಸ್ಟೂಡೆಂಟ್ಸ್‌ ಯೂನಿಯನ್‌ಗೆ ಜಯ

ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 19:28 IST
Last Updated 3 ನವೆಂಬರ್ 2018, 19:28 IST
ಎಡಿಇ ಎಫ್‌ಸಿ ತಂಡದ ಲಿಜ್ಜಿತ್‌ (ಹಳದಿ ‍ಪೋಷಾಕು) ಮತ್ತು ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡದ ತರುಣ್‌ಕುಮಾರ್‌ ರೆಡ್ಡಿ ಚೆಂಡಿಗಾಗಿ ಪೈಪೋಟಿ ನಡೆಸಿದರು–ಪ್ರಜಾವಾಣಿ ಚಿತ್ರ
ಎಡಿಇ ಎಫ್‌ಸಿ ತಂಡದ ಲಿಜ್ಜಿತ್‌ (ಹಳದಿ ‍ಪೋಷಾಕು) ಮತ್ತು ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡದ ತರುಣ್‌ಕುಮಾರ್‌ ರೆಡ್ಡಿ ಚೆಂಡಿಗಾಗಿ ಪೈಪೋಟಿ ನಡೆಸಿದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ಉತ್ತಮ ಆಟ ಆಡಿದ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೋರಾಟದಲ್ಲಿ ಸ್ಟೂಡೆಂಟ್ಸ್‌ ಯೂನಿಯನ್‌ 3–2 ಗೋಲುಗಳಿಂದ ಎಡಿಇ ಎಫ್‌ಸಿ ತಂಡವನ್ನು ಸೋಲಿಸಿತು.

ಸ್ಟೂಡೆಂಟ್ಸ್‌ ಯೂನಿಯನ್‌ ತಂಡ ಮೊದಲ ನಿಮಿಷದಲ್ಲೇ ಖಾತೆ ತೆರೆಯಿತು. ಸುದೀರ್‌ ಚೆಂಡನ್ನು ಗುರಿ ತಲುಪಿಸಿ ಮಿಂಚಿದರು. ಮೂರನೇ ನಿಮಿಷದಲ್ಲಿ ಲಿಜ್ಜಿತ್‌ ಗೋಲು ಬಾರಿಸಿದ್ದರಿಂದ ಎಡಿಇ 1–1ರಲ್ಲಿ ಸಮಬಲ ಮಾಡಿಕೊಂಡಿತು. ಮರು ನಿಮಿಷದಲ್ಲಿ (4ನೇ) ಎಮಾನುಯೆಲ್‌ ಚೆಂಡನ್ನು ಗುರಿ ಮುಟ್ಟಿಸಿ ಸ್ಟೂಡೆಂಟ್ಸ್‌ ಯೂನಿಯನ್‌ಗೆ 2–1ರ ಮುನ್ನಡೆ ತಂದುಕೊಟ್ಟರು.

ADVERTISEMENT

90+1ನೇ ನಿಮಿಷದಲ್ಲಿ ಎಡಿಇ ತಂಡದ ಸ್ಟೀವನ್‌ ರಾಜ್‌ ಗೋಲು ಬಾರಿಸಿ 2–2ರ ಸಮಬಲಕ್ಕೆ ಕಾರಣರಾದರು. 90+2ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಪವನ್‌, ಸ್ಟೂಡೆಂಟ್ಸ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

ಡೆಕ್ಕನ್‌ಗೆ ಜಯ: ‘ಎ’ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ ಎಫ್‌ಸಿ ಡೆಕ್ಕನ್‌ ತಂಡ ಗೆದ್ದಿತು.ಡೆಕ್ಕನ್‌ 4–2 ಗೋಲುಗಳಿಂದ ಬಿಯುಎಫ್‌ಸಿ ತಂಡವನ್ನು ‍ಪರಾಭವಗೊಳಿಸಿತು.

ವಿಜಯೀ ತಂಡದ ಸೂರ್ಯ ‘ಹ್ಯಾಟ್ರಿಕ್‌’ ಗೋಲು ದಾಖಲಿಸಿದರು. ಅವರು 40, 60 ಮತ್ತು 78ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಶೆರ್ವಿನ್‌ (24ನೇ ನಿಮಿಷ) ಕೂಡಾ ಕಾಲ್ಚಳಕ ತೋರಿದರು.

ಬಿಯುಎಫ್‌ಸಿ ತಂಡದ ವ್ಯಾಲೆಂಟಿನ್‌ ಮತ್ತು ಸಿದ್ದಾರ್ಥ್‌ ಅವರು ಕ್ರಮವಾಗಿ 43 ಮತ್ತು 62ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.