ADVERTISEMENT

ಮಡಗಾಸ್ಕರ್‌ ಎಂಟರ ಘಟ್ಟಕ್ಕೆ

ಏಜೆನ್ಸೀಸ್
Published 10 ಜುಲೈ 2019, 19:24 IST
Last Updated 10 ಜುಲೈ 2019, 19:24 IST

ಕೈರೊ: ಮೊದಲ ಯತ್ನದಲ್ಲೇ ಮಡಗಾಸ್ಕರ್‌ ತಂಡ ಎಲ್ಲರ ನಿರೀಕ್ಷೆ ಮೀರಿ ಆಫ್ರಿಕ ಕಪ್‌ ನೇಷನ್ಸ್‌ ಫುಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ತಲುಪಿತು. ಗುರುವಾರ ನಡೆಯುವ ಪಂದ್ಯದಲ್ಲಿ ಟ್ಯುನೀಷಿಯಾವನ್ನು ಎದುರಿಸಲಿದೆ.

ಮೊದಲ ಬಾರಿ ಆಡಿದ ಬುರುಂಡಿ ಮತ್ತು ಮೌರಿಟಾನಿಯಾ ತಂಡಗಳು ಗ್ರೂಪ್‌ ಹಂತದಲ್ಲಿ ಆಡಿದ ಮೂರರಲ್ಲಿ ಒಂದೂ ಪಂದ್ಯ ಗೆಲ್ಲಲಾಗದೇ ಹೊರಬಿದ್ದಿದ್ದವು.

ಆಫ್ರಿಕಾ ರಾಷ್ಟ್ರಗಳಲ್ಲಿ ಸಾರ್ವಭೌಮ ತಂಡವನ್ನು ನಿರ್ಧರಿಸುವ ಈ ಟೂರ್ನಿಯಲ್ಲಿ ಈ ಹಿಂದೆ ಮೂರು ತಂಡಗಳು ಮಾತ್ರ– ಈಜಿಪ್ಟ್‌, ಘಾನಾ ಮತ್ತು ದಕ್ಷಿಣ ಆಫ್ರಿಕ– ಮೊದಲ ಯತ್ನದಲ್ಲೇ ಟ್ರೋಫಿ ಎತ್ತಿಹಿಡಿದಿವೆ.

ADVERTISEMENT

ಆಫ್ರಿಕ ರಾಷ್ಟ್ರಗಳ ನಡುವಣ ಈ ಟೂರ್ನಿ 62 ವರ್ಷಗಳ ಹಿಂದೆ ಸುಡಾನ್‌ನಲ್ಲಿ ಆರಂಭವಾಗಿತ್ತು. ಈ ಬಾರಿ 12 ಹೊಸ ರಾಷ್ಟ್ರಗಳ ತಂಡಗಳು ಅರ್ಹತಾ ಸುತ್ತಿನಲ್ಲೇ ಹೊರಬಿದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.