ADVERTISEMENT

ಅಶ್ವಿನಿ ಪೊನ್ನಪ್ಪಗೆ ₹33 ಲಕ್ಷದ ಚೆಕ್‌ ವಿತರಣೆ

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ₹5 ಕೋಟಿ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 14:20 IST
Last Updated 26 ಜುಲೈ 2018, 14:20 IST
ಅಶ್ವಿನಿ ಪೊನ್ನಪ್ಪ ಅವರಿಗೆ ಜಿ.ಪರಮೇಶ್ವರ ಚೆಕ್‌ ನೀಡಿದರು. ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾ‌ಯದರ್ಶಿ ರಜನೀಶ್‌ ಗೋಯಲ್‌ ಇದ್ದರು.
ಅಶ್ವಿನಿ ಪೊನ್ನಪ್ಪ ಅವರಿಗೆ ಜಿ.ಪರಮೇಶ್ವರ ಚೆಕ್‌ ನೀಡಿದರು. ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾ‌ಯದರ್ಶಿ ರಜನೀಶ್‌ ಗೋಯಲ್‌ ಇದ್ದರು.   

ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಈಚೆಗೆ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್‌ನ ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಹಾಗೂ ಮಹಿಳೆಯರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅಶ್ವಿನಿ ಪೊನ್ನಪ್ಪ ಅವರಿಗೆ ಯುವಜನ ಮತ್ತು ಕ್ರೀಡಾ ಸಚಿವ ಜಿ.ಪರಮೇಶ್ವರ ಅವರು ₹33 ಲಕ್ಷದ ಚೆಕ್ ವಿತರಿಸಿದರು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಅಶ್ವಿನಿ‌ ಪೊನ್ನಪ್ಪ ಅವರನ್ನು ಗುರುವಾರ ಸನ್ಮಾನಿಸಿ, ‘ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದವರಿಗೆ ₹25 ಲಕ್ಷ, ಬೆಳ್ಳಿ ಗೆದ್ದವರಿಗೆ ₹15 ಲಕ್ಷ ಹಾಗೂ ಕಂಚು ಗೆದ್ದವರಿಗೆ ₹8 ಲಕ್ಷ ನೀಡಲಾಗುತ್ತದೆ. ಒಲಿಂಪಿಕ್ಸ್‌ಗಾಗಿ ತಯಾರಿ ನಡೆಸುತ್ತಿರುವ ಅಶ್ವಿನಿ, ಚಿನ್ನ‌ ಗೆಲ್ಲುವ‌ ಮೂಲಕ ರಾಜ್ಯಕ್ಕೆ ಕೀರ್ತಿ ತರಲಿ‌’ ಎಂದು ಆಶಿಸಿದರು.

ರಾಜ್ಯದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ ₹ 5 ಕೋಟಿ, ಬೆಳ್ಳಿ ಗೆದ್ದರೆ ₹3 ಕೋಟಿ ಹಾಗೂ ಕಂಚು ಗೆದ್ದರೆ ₹2 ಕೋಟಿ‌ ನೀಡಲಾಗುತ್ತದೆ ಎಂದರು.

ADVERTISEMENT

‘ಕ್ರೀಡಾಪಟುಗಳನ್ನು ಪೊಲೀಸ್‌ ಇಲಾಖೆಯಲ್ಲಿ‌ ನೇರ ನೇಮಕಾತಿ ಮಾಡಿಕೊಳ್ಳುವ‌ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮದಲ್ಲಿ‌ ಬದಲಾವಣೆ ತಂದು‌ ಹಿಂದಿನ‌ ಪದ್ಧತಿ‌ ಮುಂದುವರಿಸುತ್ತೇವೆ. ಈ ಮೊದಲು ಕ್ರೀಡಾಪಟುಗಳನ್ನು‌ ನೇರ ನೇಮಕಾತಿ‌ ಮಾಡಿಕೊಳ್ಳಲಾಗುತ್ತಿತ್ತು. ಈಗ ಈ ನೇರ ನೇಮಕಾತಿ ಇಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.