ADVERTISEMENT

ಥಾಯ್ಲೆಂಡ್ ಓಪನ್: ಅಶ್ವಿನಿ–ಸಾತ್ವಿಕ್ ಜೋಡಿ ಮುನ್ನಡೆ

ಪಿಟಿಐ
Published 10 ಜುಲೈ 2018, 16:42 IST
Last Updated 10 ಜುಲೈ 2018, 16:42 IST
ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ (ಸಂಗ್ರಹ ಚಿತ್ರ)
ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ (ಸಂಗ್ರಹ ಚಿತ್ರ)   

ಬ್ಯಾಂಕಾಕ್: ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಜೋಡಿಯು ಮಂಗಳವಾರ ಆರಂಭವಾದ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಿಶ್ರ ಡಬಲ್ಸ್‌ನ ಎರಡನೇ ಸುತ್ತಿಗೆ ಪ್ರವೇಶಿಸಿತು.

ಮೊದಲ ಸುತ್ತಿನ ಪಂದ್ಯದಲ್ಲಿ ಬೆಂಗಳೂರಿನ ಅಶ್ವಿನಿ ಮತ್ತು ಹೈದರಾಬಾದಿನ ಸಾತ್ವಿಕ್ ಅವರು 19–21, 21–14, 21–17 ಗೇಮ್‌ಗಳಿಂದ ಇಂಡೋನೆಷ್ಯಾದ ಅಕ್ಬರ್ ಬಿಂಟಾಂಗ್ ಕಯೊನೊ ಮತ್ತು ವಿನ್ನಿ ಆಕ್ಟಾವಿನಾ ಕೆಂಡೊ ಅವರನ್ನು ಸೋಲಿಸಿದರು.

ಇದೇ ವಿಭಾಗದ ಇನ್ನೊಂದು ಸುತ್ತಿನದಲ್ಲಿ ವೆಂಕಟ್ ಗೌರವ್ ಪ್ರಸಾದ್ ಮತ್ತು ಜೂಹಿ ದೇವಾಂಗನ್ ಅವರು 10–21, 12–21ರಿಂದ ಇಂಡೋನೆಷ್ಯಾದ ಇರ್ಫಾನ್ ಪಿಯಾ, ಝೆಬಾದಿಯಾ ಬರ್ನಾಡೆಟ್ ಜೋಡಿಯ ಎದುರು ಸೋತಿತು.

ADVERTISEMENT

ಮಹಿಳೆಯರ ಸಿಂಗಲ್ಸ್‌ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ್ದ ಭಾರತದ ಏಕೈಕ ಆಟಗಾರ್ತಿ ಸಾಯಿ ಉತ್ತೇಜಿತಾ ರಾವ್ ಚುಕ್ಕಾ 18–21, 9–21ರಿಂದ ಇಂಡೋನೆಷ್ಯಾದ ಯೂಲಿಯಾ ಯೊಸೆಫಿನ್ ಸುಸ್ತಾನೊ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.