ADVERTISEMENT

ದೀಪಕ್ ಕುಸ್ತಿ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 20:00 IST
Last Updated 15 ಆಗಸ್ಟ್ 2019, 20:00 IST
ದೀಪಕ್ ಪೂನಿಯಾ  –ಟ್ವಿಟರ್ ಚಿತ್ರ
ದೀಪಕ್ ಪೂನಿಯಾ  –ಟ್ವಿಟರ್ ಚಿತ್ರ   

ನವದೆಹಲಿ (ಪಿಟಿಐ): ಭಾರತದ ದೀಪಕ್ ಪೂನಿಯಾ ಬುಧವಾರ ಜೂನಿಯರ್ ವಿಭಾಗದ ಕುಸ್ತಿಯಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಎಸ್ತೋನಿಯಾದ ಟ್ಯಾಲ್ಲಿನ್‌ ನಲ್ಲಿ ನಡೆದ 18 ವರ್ಷದೊಳಗಿನವರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಅವರು 86 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಚಿನ್ನ ಗೆದ್ದರು. ಫೈನಲ್‌ ಬೌಟ್‌ನಲ್ಲಿ ದೀಪಕ್ ಅವರು ರಷ್ಯಾದ ಅಲಿಕ್ ಶಿಬುಜುಕೋವ್ ಅವರ ವಿರುದ್ಧ ಮೇಲುಗೈ ಸಾಧಿಸಿದರು. ಬೌಟ್‌ 2–2ರಿಂದ ಸಮಬಲವಾಯಿತು. ಆದರೆ, ಕೊನೆಯ ಪಾಯಿಂಟ್‌ ಗಳಿಕೆಯ ಆಧಾರದಲ್ಲಿ ದೀಪಕ್ ಅವರನ್ನು ವಿಜಯೀ ಎಂದು ಘೋಷಿಸಲಾಯಿತು.

18 ವರ್ಷಗಳ ನಂತರ ಈ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿದೆ. 2001ರಲ್ಲಿ ರಮೇಶ್ ಕುಮಾರ್ (69 ಕೆ.ಜಿ) ಮತ್ತು ಪಲ್ವಿಂದರ್ ಸಿಂಗ್ ಚೀಮಾ (130 ಕೆ.ಜಿ) ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ದೀಪಕ್ 2016ರಲ್ಲಿ ಕೆಡೆಟ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.