ADVERTISEMENT

ಗಾಲ್ಫ್‌: 49ನೇ ಸ್ಥಾನಕ್ಕೆ ಕುಸಿದ ಅದಿತಿ

ಪಿಟಿಐ
Published 20 ಅಕ್ಟೋಬರ್ 2018, 13:49 IST
Last Updated 20 ಅಕ್ಟೋಬರ್ 2018, 13:49 IST

ಶಾಂಘೈ: ಭಾರತದ ಅದಿತಿ ಅಶೋಕ್‌, ಬುಯಿಕ್‌ ಎಲ್‌ಪಿಜಿಎ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಜಂಟಿ 49ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಶನಿವಾರ ನಡೆದ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಅದಿತಿ ಉತ್ತಮ ಸಾಮರ್ಥ್ಯ ತೋರಲು ವಿಫಲರಾದರು. ಅವರ ಖಾತೆಯಲ್ಲಿ ಒಟ್ಟು 219 ಸ್ಕೋರ್‌ಗಳಿವೆ.

ಸ್ಪೇನ್‌ನ ಕಾರ್ಲೊಟಾ ಸಿಗಾಂಡ ಮತ್ತು ಸಿಯೆ ಯಂಗ್‌ ಕಿಮ್‌ ಅವರು ಜಂಟಿ ಅಗ್ರಸ್ಥಾನ ಹೊಂದಿದ್ದಾರೆ. ಇವರು 205 ಸ್ಕೋರ್‌ ಗಳಿಸಿದ್ದಾರೆ.

ADVERTISEMENT

ಅರಿಯಾ ಜುಟಾನುಗರ್ನ್‌ ಸೇರಿದಂತೆ ಒಟ್ಟು ನಾಲ್ಕು ಮಂದಿ ಜಂಟಿ ಮೂರನೇ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.