ADVERTISEMENT

ಶ್ರೀಕಾಂತ್‌, ಸಮೀರ್‌ಗೆ ಸೋಲು; ಭಾರತದ ಸವಾಲು ಅಂತ್ಯ

ಕೊರಿಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ

ಪಿಟಿಐ
Published 21 ನವೆಂಬರ್ 2019, 20:15 IST
Last Updated 21 ನವೆಂಬರ್ 2019, 20:15 IST
ಅಖಿಲೇಶ್ ದಾಸ್ ಗುಪ್ತ
ಅಖಿಲೇಶ್ ದಾಸ್ ಗುಪ್ತ   

ಗ್ವಾಂಗ್‌ಜು (ಕೊರಿಯಾ): ಕಿದಂಬಿ ಶ್ರೀಕಾಂತ್‌ ಮತ್ತು ಸಮೀರ್‌ ವರ್ಮಾ ಎದುರಾಳಿಗಳಿಗೆ ಶರಣಾಗುವ ಮೂಲಕ ಗುವಾಂಗ್‌ಜು ಕೊರಿಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಗುರುವಾರ ಭಾರತದ ಸವಾಲು ಅಂತ್ಯಗೊಂಡಿತು.

ಜಪಾನ್‌ನ ಕಂತ ಸುನೆಯಾಮಾ ಪುರುಷರ ಸಿಂಗಲ್ಸ್‌ ಎರಡನೇ ಸುತ್ತಿನಲ್ಲಿ 21–14, 21–19 ರಿಂದ ಆರನೇ ಶ್ರೇಯಾಂಕದ ಶ್ರೀಕಾಂತ್‌ ಅವರನ್ನು ಸೋಲಿಸಿದರು. ಕಳೆದ ವಾರ ಹಾಂಗ್‌ಕಾಂಗ್‌ ಓಪನ್‌ ಟೂರ್ನಿಯ ಸೆಮಿಫೈನಲ್‌ ತಲುಪುವ ಮೂಲಕ ಶ್ರೀಕಾಂತ್‌ ಲಯಕ್ಕೆ ಮರಳಿದಂತೆ ಕಂಡಿದ್ದರು. ಆದರೆ ಇಲ್ಲಿ ಗೇಮ್‌ಗಳಲ್ಲಿ ಮಣಿದರು.

40 ನಿಮಿಷಗಳ ಕಾಲ ನಡೆದ ಇನ್ನೊಂದು ಪಂದ್ಯದಲ್ಲಿ ಸಮೀರ್‌ 19–21, 12–21ರಲ್ಲಿ ಸ್ಥಳೀಯ ಆಟಗಾರ ಕಿಮ್‌ ದೊಂಗುನ್‌ ಅವರಿಗೆ ಮಣಿದರು.ಕಿಮ್‌, ವಿಶ್ವ ಕ್ರಮಾಂಕದಲ್ಲಿ 112ನೇ ಕ್ರಮಾಂಕ ಹೊಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.