ಬೆಂಗಳೂರು: ಭಾರತದ ಸತೀಶ್ ಕುಮಾರ್ ಕರುಣಾಕರನ್ ಮತ್ತು ಇಶಾರಾಣಿ ಬರುವಾ ಅವರು ಇನ್ಫೊಸಿಸ್ ಫೌಂಡೇಷನ್ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಭಾನುವಾರ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ 16ನೇ ಶ್ರೇಯಾಂಕದ ಸತೀಶ್ ಕುಮಾರ್ ಅವರು 21–14, 21–16ರಿಂದ ನಾಲ್ಕನೇ ಶ್ರೇಯಾಂಕದ ರವಿ (ಭಾರತ) ಅವರನ್ನು ಮಣಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಇಶಾರಾಣಿ ಅವರು 13–21, 21–19, 21–11ರಿಂದ 9ನೇ ಶ್ರೇಯಾಂಕದ ಆಟಗಾರ್ತಿ, ಭಾರತದ ಉನ್ನತಿ ಹೂಡಾ ವಿರುದ್ಧ ಗೆಲುವು ಸಾಧಿಸಿದರು.
ಪುರುಷರ ಡಬಲ್ಸ್‌ನಲ್ಲಿ ಭಾರತದ ಎ. ಹರಿಹರನ್ ಮತ್ತು ಆರ್. ರುಬನ್ ಕುಮಾರ್ ಜೋಡಿಯು 21–13, 21–14 ರಿಂದ ಸ್ವದೇಶದ ಶ್ಯಾಮ್‌ಪ್ರಸಾದ್ ಮತ್ತು ಸುಬ್ರಮಣಿಯನ್ ಸುಂಜಿತ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದಿತು.
ಮಹಿಳೆಯರ ಡಬಲ್ಸ್‌ನಲ್ಲಿ ಜಪಾನ್‌ನ ಮಿಕು ಶಿಗೇಟಾ ಮತ್ತು ಮಾಯಾ ಟಗುಚಿ ಜೋಡಿಯು 17–21, 21–18, 21–15ರಿಂದ ಪ್ರಿಯಾ ಕೊಂಜೆಂಗಮ್ ಮತ್ತು ಶ್ರುತಿ ಮಿಶ್ರಾ ಅವರನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಥಾಯ್ಲೆಂಡ್‌ನ ಫಥರಾಥಾರ್ನ್ ನಿಪೋರ್ನ್‌ರಾಮ್ ಮತ್ತು ನಟ್ಟಮೊನ್ ಲೈಸುವಾನ್ ಜೋಡಿಯು ಮಿಶ್ರ ಡಬಲ್ಸ್‌ನಲ್ಲಿ 21–23, 21–17, 22–20ರಿಂದ ಭಾರತದ ಸತೀಶ್ ಕುಮಾರ್ ಕರುಣಾಕರನ್ ಮತ್ತು ಆದ್ಯಾ ವರಿಯಾತ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.