ADVERTISEMENT

ಕಂಠೀರವದಲ್ಲಿ ಐಎಸ್‌ಎಲ್‌ಗೆ ವಿರೋಧ

ಕೆಎಎ ಪ್ರತಿಭಟನೆ ಇಂದು: ರಾಂಚಿಗೆ ಸ್ಥಳಾಂತರವಾದ ಓಪನ್ ಅಥ್ಲೆಟಿಕ್ಸ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 19:48 IST
Last Updated 5 ಸೆಪ್ಟೆಂಬರ್ 2019, 19:48 IST
ಕಂಠೀರವ ಕ್ರೀಡಾಂಗಣ
ಕಂಠೀರವ ಕ್ರೀಡಾಂಗಣ   

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಐಎಸ್‌ಎಸ್‌ ಫುಟ್‌ಬಾಲ್ ಪಂದ್ಯಗಳನ್ನು ಆಯೋಜಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ಅಥ್ಲೆ ಟಿಕ್ಸ್‌ ಸಂಸ್ಥೆ (ಕೆಎಎ) ಶುಕ್ರವಾರ ಪ್ರತಿಭಟನೆ ನಡೆಸಲಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಎ ಪ್ರಧಾನ ಕಾರ್ಯದರ್ಶಿ ರಾಜವೇಲು, ‘ಇಲ್ಲಿ ಬ್ಯಾರಿಕೇಡ್ ಹಾಕಿ ಅಥ್ಲೀಟ್‌ಗಳನ್ನು ನಿರ್ಬಂಧಿಸುತ್ತಾರೆ. ಸಿಂಥೆಟಿಕ್‌ ಟ್ರ್ಯಾಕ್ ಹಾಳು ಮಾಡಿದ್ದಾರೆ. ಅದರಿಂದಾಗಿ ಇಲ್ಲಿ ನಡೆಯಬೇಕಿದ್ದ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ರಾಂಚಿಗೆ ಸ್ಥಳಾಂತರವಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜೆಎಸ್‌ಡಬ್ಲ್ಯ ಸಂಸ್ಥೆಗೆ ಎಲ್ಲ ಅನುಕೂಲಗಳನ್ನೂ ಮಾಡಿ ಕೊಡುತ್ತಿದೆ. ಆದರೆ, ಅಥ್ಲೆಟಿಕ್ಸ್‌ಗಾಗಿಯೇ ಇರುವ ಕ್ರೀಡಾಂಗಣದ ಅಭಿವೃದ್ಧಿ ಯನ್ನು ನಿರ್ಲಕ್ಷಿಸಿದೆ’ ಎಂದರು.

‘ಸಿಂಥೆಟಿಕ್ ಟ್ರ್ಯಾಕ್ ಹಾಳಾಗಿದೆ. ಅಥ್ಲೀಟ್‌ಗಳು ಗಾಯಗೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಕೂಟವನ್ನು ಸ್ಥಳಾಂತರಿಸಲಾಗಿದೆ. ಹೊಸ ಟ್ರ್ಯಾಕ್ ಅಳವಡಿಕೆಗಾಗಿ ಟೆಂಡರ್ ಪ್ರಕ್ರಿಯೆ ಮಾಡುತ್ತಿರುವುದಾಗಿ ಇಲಾಖೆ ಹೇಳು ತ್ತಲೇ ಇದೆ. ಆದರೆ ಕೆಲಸ ಮಾತ್ರ ಆಗುತ್ತಿಲ್ಲ. ಜಿಲ್ಲಾಕೇಂದ್ರಗಳಲ್ಲಿ ಕೂಟ ನಡೆಸಲು ಮೂಲ ಸೌಕರ್ಯಗಳ ಕೊರತೆ ಇದೆ’ ಎಂದು ರಾಜವೇಲು ಹೇಳಿದರು.

ADVERTISEMENT

ಕೆಎಎ ಮುಖ್ಯ ಕಾರ್ಯನಿರ್ವ ಹಣಾ ಅಧಿಕಾರಿ ಎಲ್ವಿಸ್ ಜೋಸೆಫ್, ‘ಫುಟ್‌ಬಾಲ್‌ಗಾಗಿಯೇ ಸರ್ಕಾರ ನೀಡಿರುವ ಕ್ರೀಡಾಂಗಣಇದೆ. ಅಲ್ಲಿ ಐಎಸ್‌ಎಲ್ ಪಂದ್ಯ ಆಯೋಜಿಸಿಕೊಳ್ಳಲಿ. ಕಂಠೀರವ ಕ್ರೀಡಾಂಗಣವನ್ನು ಅಥ್ಲೆಟಿಕ್ಸ್‌ಗಾಗಿ ಮಾತ್ರ ಉಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.