ADVERTISEMENT

Asia Championships: ಕಪಿಲ– ಕ್ರಾಸ್ಟೊ ಜೋಡಿಗೆ ಸೋಲು, ಭಾರತದ ಸವಾಲು ಅಂತ್ಯ

ಪಿಟಿಐ
Published 11 ಏಪ್ರಿಲ್ 2025, 13:05 IST
Last Updated 11 ಏಪ್ರಿಲ್ 2025, 13:05 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ನಿಂಗ್ಬೊ (ಚೀನಾ): ಭಾರತದ ಧ್ರುವ್‌ ಕಪಿಲ– ತನಿಶಾ ಕ್ರಾಸ್ಟೊ ಜೋಡಿ, ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌ನ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಹಾಂಗ್‌ಕಾಂಗ್‌ನ ತಾಂತ್‌ ಚುನ್‌ ಮನ್– ತ್ಸೆ ಯಿಂಗ್ ಸುಯೆತ್ ಜೋಡಿಯೆದುರು ಶುಕ್ರವಾರ ಸೋಲನುಭವಿಸಿದರು.

ಐದನೇ ಶ್ರೇಯಾಂಕದ ಚುನ್‌– ಯಿಂಗ್ ಜೋಡಿ 22–20, 21–13 ರಿಂದ ಕಪಿಲ–ತನಿಶಾ ಜೋಡಿಯನ್ನು ಸೋಲಿಸಿತು. ತನ್ಮೂಲಕ ಈ ಪ್ರತಿಷ್ಠಿತ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಂತೆ ಆಯಿತು.

ಇದಕ್ಕೆ ಮೊದಲು ಪಿ.ವಿ.ಸಿಂಧು (ಮಹಿಳಾ ಸಿಂಗಲ್ಸ್‌), ಕಿರಣ್ ಜಾರ್ಜ್, ಪ್ರಿಯಾಂಶು ರಾಜಾವತ್ (ಪುರುಷರ ಸಿಂಗಲ್ಸ್‌), ಹರಿಹರನ್‌ ಅಮ್ಸಕರುಣನ್/ ರುಬನ್ ಕುಮಾರ್‌ ರೆತಿನಸಭಾಪತಿ (ಪುರುಷರ ಡಬಲ್ಸ್‌) ಅವರು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಹೊರಬಿದ್ದಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.