ADVERTISEMENT

ಶ್ರೀಕಾಂತ್ – ಕಶ್ಯಪ್ ಮುಖಾಮುಖಿ

ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 20:28 IST
Last Updated 27 ನವೆಂಬರ್ 2019, 20:28 IST
ಕಿದಂಬಿ ಶ್ರೀಕಾಂತ್ –ಎಎಫ್‌ಪಿ ಚಿತ್ರ
ಕಿದಂಬಿ ಶ್ರೀಕಾಂತ್ –ಎಎಫ್‌ಪಿ ಚಿತ್ರ   

ಲಖನೌ (ಪಿಟಿಐ): ರಷ್ಯಾದ ವ್ಲಾದಿಮಿರ್ ಮಲ್ಕೋವ್ ಎದುರು ನೇರ ಗೇಮ್‌ಗಳ ಗೆಲುವು ಸಾಧಿಸಿದ ಭಾರತದ ಕಿದಂಬಿ ಶ್ರೀಕಾಂತ್ ಇಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಅಂತರರಾ‌ಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತು ಪ್ರವೇಶಿಸಿದರು.

ಬುಧವಾರ ಕೇವಲ 36 ನಿಮಿಷಗಳಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ ಶ್ರೀಕಾಂತ್ 21–12, 21–11ರಲ್ಲಿ ಜಯ ತಮ್ಮದಾಗಿಸಿಕೊಂಡರು. ಎರಡನೇ ಸುತ್ತಿನಲ್ಲಿ ಅವರಿಗೆ ಭಾರತದ ಪರುಪಳ್ಳಿ ಕಶ್ಯಪ್ ಎದುರಾಳಿ. ಮೊದಲ ಸುತ್ತಿನಲ್ಲಿ ಕಶ್ಯಪ್‌ಗೆ ಫ್ರಾನ್ಸ್‌ನ ಲೂಕಾಸ್ ಕೊರ್ವಿ ಎದುರು ವಾಕ್ ಓವರ್ ಲಭಿಸಿತು.

ಯುವ ಆಟಗಾರ ಲಕ್ಷ್ಯ ಸೇನ್‌ ಕೂಡ ಮೊದಲ ಸುತ್ತಿನಲ್ಲಿ ವಾಕ್ ಓವರ್ ಪಡೆದುಕೊಂಡರು. ಅವರ ವಿರುದ್ಧ ಸೆಣಸಬೇಕಾಗಿದ್ದ ಫ್ರಾನ್ಸ್‌ನ ಥಾಮಸ್ ರುಕ್ಸೆಲ್ ಕಣಕ್ಕೆ ಇಳಿದಿರಲಿಲ್ಲ.

ADVERTISEMENT

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಆಟಗಾರ್ತಿಯರಾದ ಅಶ್ಮಿತಾ ಚಾಹ್ಲಿಹಾ ಮತ್ತು ವೃಷಾಲಿ ಗುಮ್ಮಡಿ ನಡುವಿನ ಹಣಾಹಣಿ ಕುತೂಹಲ ಕೆರಳಿಸಿತ್ತು. ಪಂದ್ಯದಲ್ಲಿ ಅಶ್ಮಿತಾ 21–16, 21–16ರಲ್ಲಿ ವೃಷಾಲಿ ಅವರನ್ನು ಮಣಿಸಿದರು. ಪಂದ್ಯ 32 ನಿಮಿಷಗಳಲ್ಲಿ ಮುಕ್ತಾಯಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.