ADVERTISEMENT

ಸಾರ್‌ಲೊರ್‌ಲಕ್ಷ್‌ ಓಪನ್‌ ಟೂರ್ನಿಯಿಂದ ಹಿಂದೆ ಸರಿದ ಲಕ್ಷ್ಯ ಸೇನ್‌

ತಂದೆಗೆ ಕೋವಿಡ್‌ ಕಾರಣ

ಪಿಟಿಐ
Published 28 ಅಕ್ಟೋಬರ್ 2020, 16:13 IST
Last Updated 28 ಅಕ್ಟೋಬರ್ 2020, 16:13 IST
ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌   

ಸಾರ್‌ಬ್ರೂಕನ್‌, ಜರ್ಮನಿ: ಭಾರತದ ಲಕ್ಷ್ಯ ಸೇನ್‌ ಅವರು ಸಾರ್‌ಲೊರ್‌ಲಕ್ಷ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹಾಲಿ ಚಾಂಪಿಯನ್‌ ಆಗಿದ್ದ ಅವರು, ತಮ್ಮ ತಂದೆ ಹಾಗೂ ಕೋಚ್‌ ಡಿ.ಕೆ.ಸೇನ್‌ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

19 ವರ್ಷದ ಲಕ್ಷ್ಯ ಸೇನ್‌ ಇತ್ತೀಚೆಗೆ ಕೊನೆಗೊಂಡ ಡೆನ್ಮಾರ್ಕ್‌ ಓಪನ್‌ ಟೂರ್ನಿಯಲ್ಲಿ, ಆರಂಭದಲ್ಲೇ ಸೋಲು ಅನುಭವಿಸಿದ್ದರು. ಈ ಟೂರ್ನಿಯಲ್ಲಿ ಲಯ ಕಂಡುಕೊಳ್ಳುವ ಹಂಬಲದಲ್ಲಿದ್ದರು.

’ಸೋಮವಾರ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು, ಮಂಗಳವಾರ ಸಂಜೆ ಫಲಿತಾಂಶ ಬಂದಿದೆ. ನನ್ನಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಟೂರ್ನಿಯಿಂದ ಲಕ್ಷ್ಯ ಹಿಂದೆ ಸರಿದಿದ್ದು ದುರದೃಷ್ಟಕರ. ಇದಕ್ಕಾಗಿ ಆತ ತುಂಬ ಕಠಿಣ ಅಭ್ಯಾಸ ನಡೆಸಿದ್ದ‘ ಎಂದು ಡಿ.ಕೆ.ಸೇನ್‌ ಹೇಳಿದ್ದಾರೆ.

ADVERTISEMENT

‘ನಾನು ಆರೋಗ್ಯವಾಗಿದ್ದು, ರೋಗದ ಯಾವುದೇ ಲಕ್ಷಣಗಳಿಲ್ಲ‘ ಎಂದು ಸೇನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.