ADVERTISEMENT

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಸೈನಾ, ಶ್ರೀಕಾಂತ್‌ ಎರಡನೇ ಸುತ್ತಿಗೆ

ಪ್ರಣವ್‌ – ಸಿಕ್ಕಿರೆಡ್ಡಿ ಸವಾಲು ಅಂತ್ಯ

ಪಿಟಿಐ
Published 16 ಜನವರಿ 2019, 18:09 IST
Last Updated 16 ಜನವರಿ 2019, 18:09 IST
ಕಿದಂಬಿ ಶ್ರೀಕಾಂತ್‌
ಕಿದಂಬಿ ಶ್ರೀಕಾಂತ್‌   

ಕೌಲಾಲಂಪುರ: ಭಾರತದ ಸೈನಾ ನೆಹ್ವಾಲ್‌, ಪರುಪಳ್ಳಿ ಕಶ್ಯಪ್‌ ಮತ್ತು ಕಿದಂಬಿ ಶ್ರೀಕಾಂತ್‌ ಅವರು ಮಲೇಷ್ಯಾ ಮಾಸ್ಟರ್ಸ್‌ ವಿಶ್ವ ಟೂರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಏಳನೇ ಶ್ರೇಯಾಂಕಿತ ಆಟಗಾರ್ತಿ ಸೈನಾ 14–21, 21–18, 21–18ರಲ್ಲಿ ಹಾಂಕಾಂಗ್‌ನ ಡೆಂಗ್‌ ಜಾಯ್‌ ಕ್ಸುವಾನ್‌ ಅವರನ್ನು ಮಣಿಸಿದರು.

ಪಂದ್ಯ ಒಂದು ತಾಸು ಐದು ನಿಮಿಷ ನಡೆಯಿತು.

ADVERTISEMENT

ಎರಡನೇ ಸುತ್ತಿನಲ್ಲಿಸೈನಾ, ಹಾಂಕಾಂಗ್‌ನ ಪುಯಿ ಯಿಪ್‌ ಯಿನ್‌ ಅವರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಪರುಪಳ್ಳಿ ಕಶ್ಯಪ್‌ ಮತ್ತು ರಾಸ್‌ಮಸ್‌ ಗೆಮ್ಕೆ ಅವರ ನಡುವೆ ತೀವ್ರ ಪೈಪೋಟಿ ನಡೆಯಿತು. ಕೊನೆಯಲ್ಲಿ ಡೆನ್ಮಾರ್ಕ್‌ ಆಟಗಾರನನ್ನು ಕಶ್ಯಪ್‌ 19–21, 21–19, 21–10ರಲ್ಲಿ ಸೋಲಿಸಿದರು.

ಕಿದಂಬಿ ಶ್ರೀಕಾಂತ್‌ 21–17, 21–11ರಲ್ಲಿ ಹಾಂಕಾಂಗ್‌ನ ನಾಂಗ್‌ ಕಾ ಲಾಂಗ್‌ ಆಂಗಸ್‌ ಅವರನ್ನು ಮಣಿಸಿದರು.

ಅಶ್ವಿನಿ–ಸಿಕ್ಕಿ ಜೋಡಿಗೆ ಗೆಲುವು: ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ–ಎನ್‌ ಸಿಕ್ಕಿ ರೆಡ್ಡಿ ಜೋಡಿ 21–16, 22–20ರಲ್ಲಿ ಹಾಂಕಾಂಗ್‌ನ ನಾಂಗ್‌ ತ್ಸಜ್‌ ಯುವು–ಯುಯೆ ಸಿಂಗ್‌ ಯೆನ್‌ ಅವರನ್ನು ಮಣಿಸಿತು.

ಪ್ರಣವ್‌–ಸಿಕ್ಕಿ ರೆಡ್ಡಿ ಸವಾಲು ಅಂತ್ಯ: ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಭಾರತದ ಪ್ರಣವ್‌ ಜೆರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ ಜೋಡಿ 19–21, 17–21ರಲ್ಲಿ ನೆದರ್ಲೆಂಡ್ಸ್‌ನ ರಾಬಿನ್‌ ತಬಲಿಂಗ್‌ ಮತ್ತು ಸೆಲೆನಾ ಪಿಯೆಕ್‌ ಎದುರು ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.