ADVERTISEMENT

ಮಂಗಳೂರು ವಿ.ವಿ. ‘ಹ್ಯಾಟ್ರಿಕ್‌’ ಡಬಲ್‌ ಸಾಧನೆ

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್‌ ಬ್ಯಾಡ್ಮಿಂಟನ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 19:59 IST
Last Updated 12 ಜನವರಿ 2020, 19:59 IST
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ ಮಂಗಳೂರು ವಿಶ್ವವಿದ್ಯಾಲಯ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು. (ಎಡದಿಂದ) ಚಂದನ, ಕವನ, ಪಲ್ಲವಿ, ತೇಜಶ್ರೀ, ಗಾಯತ್ರಿ, ಜಯಲಕ್ಷ್ಮಿ, ದಿವ್ಯಾ, ಮೇಘನಾ, ಲಾವಣ್ಯ (ನಾಯಕಿ) ಮತ್ತು ಸ್ನೇಹಾ
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ ಮಂಗಳೂರು ವಿಶ್ವವಿದ್ಯಾಲಯ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು. (ಎಡದಿಂದ) ಚಂದನ, ಕವನ, ಪಲ್ಲವಿ, ತೇಜಶ್ರೀ, ಗಾಯತ್ರಿ, ಜಯಲಕ್ಷ್ಮಿ, ದಿವ್ಯಾ, ಮೇಘನಾ, ಲಾವಣ್ಯ (ನಾಯಕಿ) ಮತ್ತು ಸ್ನೇಹಾ   

ಬೆಂಗಳೂರು: ಅಪೂರ್ವ ಆಟ ಆಡಿದ ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ತಂಡದವರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಫೈನಲ್‌ನಲ್ಲಿ ಲಾವಣ್ಯ ಮುಂದಾಳತ್ವದ ಮಂಗಳೂರು ವಿ.ವಿ. ತಂಡವು 32–35, 35–26, 35–27ರಲ್ಲಿ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯ ವಿರುದ್ಧ ಗೆದ್ದಿತು. ಇದರೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಸತತ ಆರು ಮತ್ತು ಒಟ್ಟಾರೆ 10ನೇ ಪ್ರಶಸ್ತಿ ಜಯಿಸಿದ ಹಿರಿಮೆಗೆ ಭಾಜನವಾಯಿತು.

ಅಂತಿಮ ಘಟ್ಟದ ಪೈಪೋಟಿಯ ಮೊದಲ ಸೆಟ್‌ನಲ್ಲಿ ದಿಟ್ಟ ಹೋರಾಟ ನಡೆಸಿಯೂ ನಿರಾಸೆ ಕಂಡ ಲಾವಣ್ಯ ಬಳಗವು ನಂತರದ ಎರಡು ಸೆಟ್‌ಗಳಲ್ಲೂ ಮೋಡಿ ಮಾಡಿತು.

ADVERTISEMENT

ಕ್ವಾರ್ಟರ್‌ ಫೈನಲ್‌ನಲ್ಲಿ ಮಧುರೈನ ಕಾಮರಾಜ ವಿ.ವಿ. ತಂಡದ ವಿರುದ್ಧ ನೇರ ಸೆಟ್‌ಗಳಿಂದ ಗೆದ್ದು ಸತತ 17ನೇ ಬಾರಿ ಸೆಮಿಫೈನಲ್‌ ಲೀಗ್‌ಗೆ ಲಗ್ಗೆ ಇಟ್ಟ ದಾಖಲೆ ಬರೆದಿದ್ದ ಮಂಗಳೂರು ವಿ.ವಿ. ತಂಡವು ನಂತರ ಕೋಯಮತ್ತೂರಿನ ಭಾರತೀಯಾರ್‌ ವಿ.ವಿ. ಮತ್ತು ಆತಿಥೇಯ ಆಂಧ್ರ ವಿ.ವಿ.ತಂಡಗಳನ್ನು ಮಣಿಸಿ ಫೈನಲ್‌ ಪ್ರವೇಶಿಸಿತ್ತು.

ಚಾಂಪಿಯನ್‌ಷಿಪ್‌ನಲ್ಲಿ ದೇಶದ ವಿವಿಧ ಭಾಗಗಳಿಂದ ಒಟ್ಟು 80 ತಂಡಗಳು ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.