ADVERTISEMENT

ಪ್ರೊ ವಾಲಿಬಾಲ್‌ ಕ್ಯಾಲಿಕಟ್‌ಗೆ ಜಯ

ಪಿಟಿಐ
Published 10 ಫೆಬ್ರುವರಿ 2019, 18:38 IST
Last Updated 10 ಫೆಬ್ರುವರಿ 2019, 18:38 IST
ಪಾಯಿಂಟ್ ಗಳಿಸಿ ಕ್ಯಾಲಿಕಟ್‌ ಹೀರೊಸ್ ತಂಡದ ಆಟಗಾರರು ಸಂಭ್ರಮಿಸಿದರು
ಪಾಯಿಂಟ್ ಗಳಿಸಿ ಕ್ಯಾಲಿಕಟ್‌ ಹೀರೊಸ್ ತಂಡದ ಆಟಗಾರರು ಸಂಭ್ರಮಿಸಿದರು   

ಕೊಚ್ಚಿ: ಕ್ಯಾಲಿಕಟ್ ಹೀರೊಸ್ ತಂಡ ಪ್ರೊ ವಾಲಿಬಾಲ್ ಲೀಗ್‌ನ ಭಾನುವಾರದ ಪಂದ್ಯದಲ್ಲಿ ಬ್ಲ್ಯಾಕ್‌ಹಾಕ್ಸ್‌ ಹೈದರಾಬಾದ್‌ ತಂಡವನ್ನು ಸುಲಭವಾಗಿ ಮಣಿಸಿತು.

ಇಲ್ಲಿನ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಜಿತ್ ಲಾಲ್ ಸಿ ಮತ್ತು ಜೆರೋಮ್‌ ವಿನೀತ್‌ ಕ್ಯಾಲಿಕಟ್‌ ಪರ ಮಿಂಚಿದರು. ಇವರಿಬ್ಬರ ಆಟದ ಬಲದಿಂದ ತಂಡ 15–11, 15–11, 15–7, 12–15, 11–15ರಿಂದ ಗೆದ್ದಿತು.

ಮೊದಲ ಎರಡು ಸೆಟ್‌ನಲ್ಲಿ ಆಧಿ ಪತ್ಯ ಸ್ಥಾಪಿಸಿ ಮುನ್ನಡೆದ ಕ್ಯಾಲಿಕಟ್ ಮೂರನೇ ಸೆಟ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿತು. ಈ ಮೂಲಕ ಗೆಲುವು ತನ್ನದಾಗಿಸಿಕೊಂಡಿತು. ಕೊನೆಯ ಎರಡು ಸೆಟ್‌ಗಳಲ್ಲಿ ಹೈದರಾಬಾದ್ ತಂಡ ಗೆದ್ದಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.