ADVERTISEMENT

ಮಾರ್ಚ್‌ 19ರಿಂದ ಅಖಿಲ ಭಾರತ ಓಪನ್ ಚೆಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 14:33 IST
Last Updated 11 ಮಾರ್ಚ್ 2022, 14:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಅಖಿಲ ಭಾರತ ಓಪನ್ ಫಿಡೆ ರೇಟೆಡ್ ಚೆಸ್ ಓಪನ್ ಟೂರ್ನಿಯು ಬೆಂಗಳೂರು ಗ್ರಾಮೀಣ ಜಿಲ್ಲಾ ಚೆಸ್‌ ಸಂಸ್ಥೆಯ (ಬಿಆರ್‌ಡಿಸಿಎ) ಆಶ್ರಯದಲ್ಲಿ ಮಾರ್ಚ್‌ 19ರಿಂದ 20ರವರೆಗೆ ಇಲ್ಲಿ ನಡೆಯಲಿದೆ.

ಆರ್‌. ಹನುಮಂತ ಅವರ ಸ್ಮರಣಾರ್ಥ, ಅಖಿಲ ಭಾರತ ಚೆಸ್‌ ಫೆಡರೇಷನ್‌ (ಎಐಸಿಎಫ್), ಕರ್ನಾಟಕ ರಾಜ್ಯ ಚೆಸ್‌ ಸಂಸ್ಥೆಗಳ (ಕೆಎಸ್‌ಸಿಎ) ಸಹಯೋಗದಲ್ಲಿ ಹೊಸಕೋಟೆಯ ಸಾಯಿ ಪ್ಯಾಲೇಸ್‌ ಹಾಲ್‌ನಲ್ಲಿ ನಡೆಯಲಿದೆ.

ಒಟ್ಟು ₹ 2 ಲಕ್ಷ ಬಹುಮಾನ ಮೊತ್ತದ ಟೂರ್ನಿಯಲ್ಲಿ ಕರ್ನಾಟಕದ ಮೊದಲ ಗ್ರ್ಯಾಂಡ್‌ಮಾಸ್ಟರ್‌ ತೇಜ್‌ಕುಮಾರ್ ಎಂ.ಎಸ್‌., ಅಂತರರಾಷ್ಟ್ರೀಯ ಮಾಸ್ಟರ್‌, ಉತ್ತರಾಖಂಡದ ಅರ್ಘ್ಯದೀಪ್ ದಾಸ್‌, ಇಂಡಿಯನ್ ಮಾಸ್ಟರ್‌ ರಾಮನಾಥನ್‌ ಬಾಲಸುಬ್ರಮಣಿಯನ್‌ ಮತ್ತು ಮಹಿಳಾ ಮಾಸ್ಟರ್‌‌, ತಮಿಳುನಾಡಿದ ಸಾವಿತ್ರಿಶ್ರೀ ಭಾಗವಹಿಸಲಿದ್ದಾರೆ. 400ಕ್ಕಿಂತ ಹೆಚ್ಚು ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಬಿಆರ್‌ಡಿಸಿಎ ಪ್ರಕಟಣೆ ತಿಳಿಸಿದೆ.

ADVERTISEMENT

ಹೆಸರು ನೋಂದಾಯಿಸಲು ಇದೇ 16 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ www.karnatakachess.com. ಅಥವಾ ಬಿಆರ್‌ಡಿಸಿಎ ಕಾರ್ಯದರ್ಶಿ ಚಿದಾನಂದ (ಮೊಬೈಲ್ ಸಂಖ್ಯೆ 9663405589) ಅವರನ್ನು ಸಂಪರ್ಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.