ADVERTISEMENT

ವಿದೇಶದಲ್ಲಿ ತರಬೇತಿಗೆ ಬಜರಂಗ್‌ ಪೂನಿಯಾಗೆ ಅನುಮತಿ

ಪಿಟಿಐ
Published 22 ಆಗಸ್ಟ್ 2023, 19:39 IST
Last Updated 22 ಆಗಸ್ಟ್ 2023, 19:39 IST
ಬಜರಂಗ್‌ ಪೂನಿಯಾ
ಬಜರಂಗ್‌ ಪೂನಿಯಾ   

ನವದೆಹಲಿ: ಏಷ್ಯನ್‌ ಗೇಮ್ಸ್‌ ಸಿದ್ಧತೆಗಾಗಿ ವಿದೇಶದಲ್ಲಿ ತರಬೇತಿ ನಡೆಸಲು ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ ಮತ್ತು ದೀಪಕ್‌ ಪೂನಿಯಾ ಅವರಿಗೆ ಕ್ರೀಡಾ ಸಚಿವಾಲಯದ ‘ಮಿಷನ್‌ ಒಲಿಂಪಿಕ್‌ ಸೆಲ್’ ಅನುಮತಿ ನೀಡಿದೆ.

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ಗಾಗಿ ಭಾರತ ತಂಡದ ಆಯ್ಕೆಗೆ ಆ.25 ಮತ್ತು 26 ರಂದು ನಡೆಯಲಿರುವ ಟ್ರಯಲ್ಸ್‌ನಲ್ಲಿ ತಾವು ಪಾಲ್ಗೊಳ್ಳುತ್ತಿಲ್ಲ. ಅದರ ಬದಲು ವಿದೇಶದಲ್ಲಿ ತರಬೇತಿಗೆ ಅವಕಾಶ ನೀಡಬೇಕು ಎಂದು ಇವರಿಬ್ಬರು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT