ADVERTISEMENT

ಬ್ಯಾಡ್ಮಿಂಟನ್‌: ಮುಖ್ಯ ಸುತ್ತಿಗೆ ಶುಭಂಕರ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 16:59 IST
Last Updated 22 ಜನವರಿ 2019, 16:59 IST
ಶುಭಂಕರ್‌ ಡೇ
ಶುಭಂಕರ್‌ ಡೇ   

ಜಕಾರ್ತ: ಭಾರತದ ಶುಭಂಕರ್‌ ಡೇ, ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮುಖ್ಯ ಸುತ್ತು ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಅರ್ಹತಾ ಹಂತದ ಎರಡು ಪಂದ್ಯಗಳಲ್ಲಿ ಶುಭಂಕರ್‌ ಗೆದ್ದರು.

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಹೋರಾಟದಲ್ಲಿ ಭಾರತದ ಆಟಗಾರ 21–18, 21–18 ನೇರ ಗೇಮ್‌ಗಳಿಂದ ಇಂಡೊನೇಷ್ಯಾದ ಗಜ್ರಾ ಪಿಲಿಯಾಂಗ್‌ ಫಿಕಿಹಿಲಾಹಿ ಅವರನ್ನು ಸೋಲಿಸಿದರು.

ADVERTISEMENT

ನಂತರ ನಡೆದ ಮತ್ತೊಂದು ಹಣಾಹಣಿಯಲ್ಲಿ 21–11, 21–15ರಲ್ಲಿ ಆಸ್ಟ್ರೇಲಿಯಾದ ಡೇನಿಯಲ್‌ ಫ್ಯಾನ್‌ ಎದುರು ವಿಜಯಿಯಾದರು.

ಬುಧವಾರ ನಡೆಯುವ ಮುಖ್ಯ ಸುತ್ತಿನ ಪಂದ್ಯದಲ್ಲಿ ಶುಭಂಕರ್‌, ಡೆನ್ಮಾರ್ಕ್‌ನ ವಿಕ್ಟರ್‌ ಆ್ಯಕ್ಸಲ್‌ಸನ್‌ ಎದುರು ಸೆಣಸಲಿದ್ದಾರೆ.ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು ಅವರೂ ಬುಧವಾರ ಅಂಗಳಕ್ಕಿಳಿಯಲಿದ್ದಾರೆ.

ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಸಿಂಧು, ಚೀನಾದ ಲೀ ಕ್ಸುಯೆರುಯಿ ಎದುರು ಹೋರಾಡಲಿದ್ದಾರೆ.

ಸೈನಾಗೆ ಇಂಡೊನೇಷ್ಯಾದ ದಿನಾರ್‌ ದಿಯಾ ಅಯುಸ್ಟೀನ್‌ ಅವರ ಸವಾಲು ಎದುರಾಗಲಿದೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಕಿದಂಬಿ ಶ್ರೀಕಾಂತ್‌, ಮಲೇಷ್ಯಾದ ಚೊಂಗ್‌ ವೀ ಫೆಂಗ್‌ ಎದುರು ಆಡಲಿದ್ದಾರೆ.

ಪರುಪಳ್ಳಿ ಕಶ್ಯಪ್‌, ಅಂಥೋಣಿ ಸಿನಿಸುಕಾ ಎದುರೂ; ಬಿ.ಸಾಯಿ ಪ್ರಣೀತ್‌, ಚೆನ್‌ ಲಾಂಗ್‌ ವಿರುದ್ಧವೂ ಹೋರಾಡಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ‍ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರು ಜೊಂಗ್‌ಕೊಲ್ಫಾನ್‌ ಕಿಟಿತಾರಕುಲ್‌ ಮತ್ತು ರಾವಿಂದ ಪ್ರಾಜೋಂಗ್‌ಜಾಯ್‌ ಎದುರು ಪೈಪೋಟಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.