ADVERTISEMENT

ವಾಟರ್‌ಪೋಲೊ: ಗ್ಲೋಬಲ್‌ ತಂಡಕ್ಕೆ ಚಿನ್ನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 21:23 IST
Last Updated 15 ಆಗಸ್ಟ್ 2022, 21:23 IST

ಬೆಂಗಳೂರು: ಗ್ಲೋಬಲ್‌ ಮತ್ತು ಬಸವನಗುಡಿ ಈಜು ಕೇಂದ್ರದ ತಂಡಗಳು ರಾಜ್ಯ ಸೀನಿಯರ್‌ ವಾಟರ್‌ಪೋಲೊ ಚಾಂಪಿಯನ್‌ಷಿಪ್‌ನ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ತಂಡ ವಿಭಾಗಗಳಲ್ಲಿ ಪ್ರಶಸ್ತಿಜಯಿಸಿದವು.

ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ (ಎನ್‌ಎಸಿ) ಭಾನುವಾರ ಕೊನೆಗೊಂಡಚಾಂಪಿಯನ್‌ಷಿಪ್‌ನಲ್ಲಿ ಗ್ಲೋಬಲ್‌ ಈಜು ಕೇಂದ್ರದ ಪುರುಷರ ತಂಡವು ಅಗ್ರಸ್ಥಾನ ಗಳಿಸಿತು. ಬಸವನಗುಡಿ ಈಜು ಕೇಂದ್ರ (ಬಿಎಸಿ) ಬೆಳ್ಳಿ ಮತ್ತು ಎನ್‌ಎಸಿ ತಂಡ ಕಂಚಿನ ಪದಕ ಜಯಿಸಿದವು.

ಮಹಿಳೆಯರ ವಿಭಾಗದಲ್ಲಿ ಬಿಎಸಿ ಚಿನ್ನ ಮತ್ತು ಎನ್‌ಎಸಿ ಬೆಳ್ಳಿ ಪದಕ ಗೆದ್ದುಕೊಂಡವು.

ADVERTISEMENT

ಬಿಎಸಿ ತಂಡದ ಧನುಷ್ ಕೆ. ಮೂರ್ತಿ ಮತ್ತು ಕಂಕಣಾ ಆರ್‌. ಭಿಂದೆ ಅವರು ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಶ್ರೇಷ್ಠ ಅಥ್ಲೀಟ್‌ಗಳಾಗಿ ಹೊರಹೊಮ್ಮಿದರು.

ಡೈವಿಂಗ್‌ನಲ್ಲಿ ಜಾನ್ಸನ್‌ ಮಿಂಚು: ಪುರುಷರ ವಿಭಾಗದ ಡೈವಿಂಗ್‌ನಲ್ಲಿ ಎಂಇಜಿ ತಂಡದ ಟಿ. ಜಾನ್ಸನ್‌ ಎರಡು ಚಿನ್ನ ಗೆದ್ದರು. ಒಂದು ಮೀಟರ್ ಸ್ಪ್ರಿಂಗ್‌ಬೋರ್ಡ್‌ ಮತ್ತು ಮೂರು ಮೀ. ಸ್ಪ್ರಿಂಗ್‌ಬೋರ್ಡ್‌ ವಿಭಾಗಗಳಲ್ಲಿ ಅವರು ಅಗ್ರಸ್ಥಾನ ಗಳಿಸಿದರು.

ಒಂದು ಮೀ. ಸ್ಪ್ರಿಂಗ್‌ಬೋರ್ಡ್‌ ಮತ್ತು ಮೂರು ಮೀ. ಸ್ಪ್ರಿಂಗ್‌ಬೋರ್ಡ್‌ ಎರಡೂ ವಿಭಾಗಗಳಲ್ಲಿ ಡಾಲ್ಫಿನ್ ಈಜುಕೇಂದ್ರದ ವರುಣ್‌ ಸತೀಶ್ ಪೈ ಮತ್ತು ಎಬಿಬಿಎ ಸ್ಪೋರ್ಟ್ಸ್ ಕ್ಲಬ್‌ನ ಓಂ ಹೊಂಗೇಕರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಹೈ ಬೋರ್ಡ್‌ನಲ್ಲಿ ಎಂಇಜಿಯ ರಾಜ್‌ದ್ವೀಪ ದಾಸ್ ಚಿನ್ನ, ಡಾಲ್ಫಿನ್‌ನ ಸಂದೀಪ್‌ಕುಮಾರ್ ಪ್ರಜಾಪತಿ ಬೆಳ್ಳಿ ಜಯಿಸಿದರು.

ಡಾಲ್ಫಿನ್‌ ತಂಡದ ಶಕಿನಾ ಜೆ. ರಾವ್‌ ಮಹಿಳೆಯರ ಒಂದು ಮೀ. ಮತ್ತು ಮೂರು ಮೀಟರ್‌ ಸ್ಪ್ರಿಂಗ್‌ಬೋರ್ಡ್‌ ವಿಭಾಗಗಳಲ್ಲಿ ಚಿನ್ನ ಜಯಿಸಿದರು.ಒಂದು ಮೀ. ಸ್ಪ್ರಿಂಗ್‌ಬೋರ್ಡ್‌ನಲ್ಲಿ ಎಬಿಬಿಎ ತಂಡದ ರುತುಜಾ ಪವಾರ್ ಬೆಳ್ಳಿ ಮತ್ತು ಡಾಲ್ಫಿನ್‌ನ ನಯನಾ ಪಿ. ಕಂಚು ಗೆದ್ದರೆ. ಮೂರು ಮೀ. ವಿಭಾಗದಲ್ಲಿ ಡಾಲ್ಫಿನ್‌ನ ಪೂರ್ವಿಕಾ ವೆಂಕಟೇಶ್ ಮತ್ತು ನಯನಾ ಪಿ. ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.