ADVERTISEMENT

ಸಿರಿಲ್‌, ಹರ್ಷಿಲ್‌ಗೆ ಗೆಲುವು

ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 19:50 IST
Last Updated 20 ನವೆಂಬರ್ 2018, 19:50 IST
ಹರ್ಷಿಲ್‌ ದಾನಿ
ಹರ್ಷಿಲ್‌ ದಾನಿ   

ಲಖನೌ: ಭಾರತದ ಸಿರಿಲ್‌ ವರ್ಮಾ ಮತ್ತು ಹರ್ಷಿಲ್‌ ದಾನಿ ಅವರು ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಅರ್ಹತಾ ಹಂತದ ಪಂದ್ಯಗಳಲ್ಲಿ ಗೆದ್ದಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಪಂದ್ಯದಲ್ಲಿ ಸಿರಿಲ್‌ 24–22, 21–18ರಲ್ಲಿ ಚಿರಾಗ್‌ ಸೇನ್‌ ಅವರನ್ನು ಸೋಲಿಸಿದರು. ಈ ಹೋರಾಟ 45 ನಿಮಿಷ ನಡೆಯಿತು.

ಎರಡನೇ ಸುತ್ತಿನ ಹಣಾಹಣಿಯಲ್ಲಿ ಸಿರಿಲ್‌ 21–16, 21–13ರಲ್ಲಿ ಕೆವಿನ್‌ ಅರೋಕಿಯಾ ವಾಲ್ಟರ್‌ ವಿರುದ್ಧ ಗೆದ್ದರು.

ADVERTISEMENT

ಹರ್ಷಿಲ್‌ ಅವರು ಮೊದಲ ಸುತ್ತಿನ ಪೈಪೋಟಿಯಲ್ಲಿ 21–10, 21–7ರಲ್ಲಿ ಹಾರ್ದಿಕ್‌ ಮಾಕರ್‌ ಎದುರು ಗೆದ್ದರು. ನಂತರದ ಹಣಾಹಣಿಯಲ್ಲಿ 22–20, 21–11ರಲ್ಲಿ ಕಂಟಾವತ್‌ ಲೀಲಾವೆಚಾಬುಟರ್‌ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಬೋದಿತ್‌ ಜೋಷಿ 21–5, 21–8ರಲ್ಲಿ ಪ್ಯಾವೆಲ್‌ ಕೊಟ್ಸಾರೆಂಕೊ ಎದುರೂ, ಜಿಯಾ ವೀ ತಾನ್‌ 22–20, 21–11ರಲ್ಲಿ ಸಿದ್ದಾರ್ಥ್‌ ಮೇಲೂ, ವಿಕಿ ಸಪುತ್ರ 21–11, 21–8ರಲ್ಲಿ ಹೇಮಂತ್‌ ಎಂ.ಗೌಡ ವಿರುದ್ಧವೂ, ಪ್ರತುಲ್‌ ಜೋಷಿ 21–18, 21–14ರಲ್ಲಿ ಅಭಯಾನ್ಸ್‌ ಸಿಂಗ್‌ ಮೇಲೂ ಗೆದ್ದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಅರ್ಹತಾ ಹಂತದ ಹಣಾಹಣಿಗಳಲ್ಲಿ ಅಮೋಲಿಕಾ ಸಿಂಗ್‌ ಸಿಸೋಡಿಯಾ 21–13, 21–15ರಲ್ಲಿ ಕನಿಕಾ ಕನ್ವಾಲ್‌ ಮೇಲೂ, ತಾನಿಷ್ಕ್‌ ಮಮಿಲ್ಲಾ ಪಲ್ಲಿ 21–18, 21–10ರಲ್ಲಿ ವೈಷ್ಣವಿ ಕಾರಿ ಎದುರೂ, ರಿತಿಕಾ ಠಾಕರ್‌ 21–14, 21–16ರಲ್ಲಿ ಸಿಮ್ರನ್‌ ಸಿಂಘಿ ಮೇಲೂ, ಶ್ರುತಿ ಮುಂಡಾದ 21–8, 21–5ರಲ್ಲಿ ಶುಕ್ಲಾ ಶಾಲಿನಿ ಸೂರ್ಯಕರಣ್‌ ಎದುರೂ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.