ADVERTISEMENT

ಸ್ವಿಸ್‌ ಒಪನ್ ಬ್ಯಾಡ್ಮಿಂಟನ್ ಟೂರ್ನಿ: ಎಂಟರ ಘಟ್ಟಕ್ಕೆ ಟ್ರೀಸಾ– ಗಾಯತ್ರಿ

ಪಿಟಿಐ
Published 21 ಮಾರ್ಚ್ 2024, 16:24 IST
Last Updated 21 ಮಾರ್ಚ್ 2024, 16:24 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಬಾಸೆಲ್‌ (ಸ್ವಿಜರ್ಲೆಂಡ್‌): ಭಾರತದ ಡಬಲ್ಸ್ ಆಟಗಾರ್ತಿಯರಾದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಸ್ವಿಸ್‌ ಒಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಈ ಜೋಡಿ ಗುರುವಾರ ನಡೆದ ಮಹಿಳಾ ಡಬಲ್ಸ್‌ ಎರಡನೇ ಸುತ್ತಿನಲ್ಲಿ ಸ್ವದೇಶದ ಪ್ರಿಯಾ ಕೊಂಜೆಂಗ್‌ಬಾಮ್ ಮತ್ತು ಶ್ರುತಿ ಮಿಶ್ರಾ ಜೋಡಿಯನ್ನು ಸೋಲಿಸಿತು.

ಎಂಟನೇ ಶ್ರೆಯಾಂಕದ ಟ್ರೀಸಾ–ಗಾಯತ್ರಿ ಅವರು 21–10, 21–12 ರಿಂದ 75ನೇ ಕ್ರಮಾಂಕದ ಜೋಡಿಯ ಮೇಲೆ ಗೆಲ್ಲಲು ಕೇವಲ 36 ನಿಮಿಷ ತೆಗೆದುಕೊಂಡಿತು. ಟ್ರೀಸಾ–ಗಾಯತ್ರಿ ಜೋಡಿ ವಿಶ್ವ ಕ್ರಮಾಂಕದಲ್ಲಿ 26ನೇ ಸ್ಥಾನದಲ್ಲಿದೆ.

ಆದರೆ, 20ನೇ ಕ್ರಮಾಂಕ ಹೊಂದಿರುವ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ನಿರ್ಗಮಿಸಿತು. ವಿಶ್ವದ 30ನೇ ಕ್ರಮಾಂಕದ ರುಯಿ ಹಿರೊಕಮಿ ಮತ್ತು ಯುನಾ ಕಟೊ ಜೋಡಿ 21–17, 21–16 ರಿಂದ ತನಿಶಾ– ಅಶ್ವಿನಿ ಜೋಡಿಯನ್ನು ಸೋಲಿಸಿತು. ಭಾರತದ ಈ ಆಟಗಾರ್ತಿಯರು ಪ್ಯಾರಿಸ್‌ ಒಲಿಂಪಿಕ್ಸ್‌ ರೇಸ್‌ನಲ್ಲಿದ್ದಾರೆ.

ADVERTISEMENT

ಏಪ್ರಿಲ್‌ ಕೊನೆಯಲ್ಲಿ ಪ್ರಕಟವಾಗುವ ವಿಶ್ವ ಕ್ರಮಾಂಕದಲ್ಲಿ ಮೊದಲ 16 ಸ್ಥಾನದಲ್ಲಿರುವ ಜೋಡಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.