ADVERTISEMENT

ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 20:36 IST
Last Updated 26 ಜುಲೈ 2025, 20:36 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಮಂಗಳೂರು: ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಆಯೋಜಿಸಿರುವ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿ ಇದೇ 27ರಿಂದ ಆಗಸ್ಟ್‌ 2ರ ವರೆಗೆ ನಗರದ ಉರ್ವಸ್ಟೋರ್‌ನ ಹೊಸ ಕ್ರೀಡಾ ಸಂಕಿರ್ಣದಲ್ಲಿ ನಡೆಯಲಿದೆ. ಮುಕ್ತ ಹಾಗೂ 19 ವರ್ಷದೊಳಗಿನವರ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.

ಪುರುಷರ ವಿಭಾಗದಲ್ಲಿ ಬೆಂಗಳೂರಿನ ಅಭಿನವ್ ಗರ್ಗ್‌ ಅಗ್ರ ಶ್ರೇಯಾಂಕ ನೀಡಿದ್ದು ಬೆಂಗಳೂರಿನ ಅಶ್ವತಿ ವರ್ಗೀಸ್ ಅವರಿಗೆ ಮಹಿಳೆಯರ ವಿಭಾಗದಲ್ಲಿ ಮೊದಲ ಶ್ರೇಯಾಂಕ ನೀಡಲಾಗಿದೆ. ಮಹಿಳೆಯರ 19 ವರ್ಷದೊಳಗಿನವರ ವಿಭಾಗ ದಲ್ಲಿ ದಿವ್ಯಾ ಭೀಮಯ್ಯ ಮೊದಲ ಶ್ರೇಯಾಂಕ ಹೊಂದಿದ್ದಾರೆ.

19 ವರ್ಷದೊಳಗಿನ ಮಹಿಳೆಯರ ವಿಭಾಗದಲ್ಲಿ ಲಕ್ಷ್ಯ ರಾಜೇಶ್ ಮತ್ತು ದಿವ್ಯಾ ಗಮನ ಸೆಳೆಯಲಿದ್ದಾರೆ. ಮುಕ್ತ ಪುರುಷರ ವಿಭಾಗದಲ್ಲಿ ರುದ್ರ ಶಾಹಿ, 19 ವರ್ಷದೊಳಗಿನವರ ವಿಭಾಗದಲ್ಲಿ ಹಾರ್ದಿಕ್‌ ದಿವ್ಯಾಂಶ್‌ ಕೂಡ ಸ್ಪರ್ಧೆಯಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.