ADVERTISEMENT

ಶಿಕ್ಷಕರಿಗೆ ತರಬೇತಿ ಮತ್ತು ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST
ಶಿಕ್ಷಕರಿಗೆ ತರಬೇತಿ ಮತ್ತು ಪ್ರಮಾಣಪತ್ರ
ಶಿಕ್ಷಕರಿಗೆ ತರಬೇತಿ ಮತ್ತು ಪ್ರಮಾಣಪತ್ರ   

ಅಬಾಕಸ್ ಶಿಕ್ಷಕರಿಗೆ ನೆಚ್ಚಿನ ಆಯ್ಕೆಯಾಗಿದೆ. ಅದರಲ್ಲೂ ದಿನಪೂರ್ತಿ ಮನೆ-ಸಂಸಾರದ ಕಡೆ ಗಮನ ಹರಿಸಿ ದಿನದ 2-3 ಗಂಟೆ ಮಾತ್ರ ಕೆಲಸ ಮಾಡಬಹುದಾದ ಈ ಆಯ್ಕೆ ವಿದ್ಯಾವಂತ ಗೃಹಿಣಿಯರಿಗೆ ಹೆಚ್ಚು ಪ್ರಿಯವಾಗಿದೆ.

ಅಂತೆಯೇ ಶಿಕ್ಷಕರಿಗೆ ವಿಶೇಷ ತರಬೇತಿಯನ್ನೂ ನೀಡಿ ನೇಮಿಸಿಕೊಳ್ಳುವ ಅಬಾಕಸ್ ಕೇಂದ್ರಗಳ ಪ್ರಕ್ರಿಯೆ ಇತ್ತೀಚೆಗೆ ಜನಪ್ರಿಯತೆ ಪಡೆಯುತ್ತಿದೆ.

ಅಬಾಕಸ್ ಶಿಕ್ಷಕರ ಆಯ್ಕೆ ಶಾಲಾ ಶಿಕ್ಷಕರ ಆಯ್ಕೆಗಿಂತಲೂ ತುಸು ಭಿನ್ನವೆಂದೇ ಹೇಳಬಹುದು. ಇಲ್ಲಿ ಅವರ ಆಲೋಚನಾ ಕ್ರಮ, ಏಕಾಗ್ರತೆಯ ಮಟ್ಟ, ವಿಷಯವನ್ನು ಮನವರಿಕೆ ಮಾಡಿಸುವ ಸಾಮರ್ಥ್ಯ, ಶಿಸ್ತು, ಸರಳತೆ, ತಾಳ್ಮೆ ಇದೆಲ್ಲವನ್ನೂ ಪರೀಕ್ಷಿಸಿ, ಅಳೆದು-ತೂಗಿ ನೋಡಲಾಗುತ್ತದೆ. 

ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ನಂತರ ಪ್ರಮಾಣ ಪತ್ರ ನೀಡಲಾಗುವುದು. ಈ ಪ್ರಮಾಣ ಪತ್ರವನ್ನು ಹೊಂದಿದ ಶಿಕ್ಷಕರು ಯಾವುದೇ ಕೇಂದ್ರದಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಬಹುದು..
ಹೆಚ್ಚಿನ ಮಾಹಿತಿಗೆ: 9880770961
www.whizkidz.in

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.