ADVERTISEMENT

ಟೇಬಲ್ ಟೆನಿಸ್‌ ಟೂರ್ನಿ: ಆರ್ಣವ್‌, ಶಿವಾನಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 4:46 IST
Last Updated 24 ಆಗಸ್ಟ್ 2025, 4:46 IST
ಹೊಸಪೇಟೆಯಲ್ಲಿ ಶನಿವಾರ 17 ವರ್ಷದೊಳಗಿನವರ ಟೇಬಲ್ ಟೆನಿಸ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ಆರ್ಣವ್‌ ಮತ್ತು ಶಿವಾನಿ
ಹೊಸಪೇಟೆಯಲ್ಲಿ ಶನಿವಾರ 17 ವರ್ಷದೊಳಗಿನವರ ಟೇಬಲ್ ಟೆನಿಸ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ಆರ್ಣವ್‌ ಮತ್ತು ಶಿವಾನಿ    

ಹೊಸಪೇಟೆ: ಆರ್ಣವ್‌.ಎನ್‌ ಮತ್ತು ಶಿವಾನಿ ಮಹೇಂದ್ರನ್‌ ಅವರು ಶನಿವಾರ ಇಲ್ಲಿ ನಡೆದ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್‌ ಟೂರ್ನಿಯ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ವಿಜಯನಗರ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ತುಂಗಭದ್ರಾ ಬೋರ್ಡ್‌ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಬಾಲಕರ ಫೈನಲ್‌ನಲ್ಲಿ ಆರ್ಣವ್ ಅವರು 11-5, 8-11, 5-11, 11-6, 11-6 ರಿಂದ ಗೌರವ್ ಗೌಡ ಅವರನ್ನು ಸೋಲಿಸಿದರು.

ಸೆಮಿಫೈನಲ್‌ನಲ್ಲಿ ಆರ್ಣವ್‌ 11-8, 10-12, 11-2, 11-6 ರಿಂದ ಸಿದ್ಧಾರ್ಥ ಎಂ. ವಿರುದ್ಧ; ಗೌರವ್‌ 12-10, 9-11, 11-5, 11-6 ರಿಂದ ಸಿದ್ಧಾರ್ಥ್‌ ಧಾರಿವಾಲ್‌ ವಿರುದ್ಧ ಜಯ ಗಳಿಸಿದ್ದರು.

ADVERTISEMENT

ಬಾಲಕಿಯರ ಫೈನಲ್‌ನಲ್ಲಿ ಶಿವಾನಿ ಅವರು 12-10, 11-9, 11-8 ರಿಂದ ರಾಶಿ ವಿ.ರಾವ್ ಅವರನ್ನು ಸೋಲಿಸಿದರು.

ಸೆಮಿಫೈನಲ್‌ನಲ್ಲಿ ರಾಶಿ 11-7, 11-3, 11-6 ರಿಂದ ಹಿಯಾ ಸಿಂಗ್ ವಿರುದ್ಧ; ಶಿವಾನಿ 12-10, 12-10, 8-11, 11-6 ರಿಂದ ಕೈರಾ ಬಾಳಿಗಾ ವಿರುದ್ಧ ಜಯ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.