ADVERTISEMENT

ಮೊಬೈಲ್‌ನಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಬಳಕೆ

ಪೃಥ್ವಿರಾಜ್ ಎಂ ಎಚ್
Published 25 ಜುಲೈ 2017, 19:30 IST
Last Updated 25 ಜುಲೈ 2017, 19:30 IST
ಮೊಬೈಲ್‌ನಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಬಳಕೆ
ಮೊಬೈಲ್‌ನಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಬಳಕೆ   

ತಂತ್ರಾಂಶಗಳಿಗೆ ಬೀಗ

ಸ್ನೇಹಿತರು ಅಥವಾ ಮನೆಯವರು ನಿಮ್ಮ ಮೊಬೈಲ್‌ ಕೇಳಿದಾಗ ಅದರಲ್ಲಿರುವ ಮಾಹಿತಿಯನ್ನು ಎಲ್ಲಿ ನೋಡುತ್ತಾರೋ... ಎಂಬ ಭಯ ಕಾಡುವುದು ಸಹಜ. ಆದರೆ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೋಡದಂತೆ ನಿರ್ಬಂಧ ವಿಧಿಸಿ (ಲಾಕ್‌)  ಕೊಟ್ಟರೆ ಈ ಸಮಸ್ಯೆಯೇ ಎದುರಾಗುವುದಿಲ್ಲ.  ಇದಕ್ಕೆಂದೇ 'AppLock-Fingerprint Unlock ಎಂಬ ತಂತ್ರಾಂಶವೊಂದು ಲಭ್ಯವಿದೆ. ಇದನ್ನು ನಿಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡು, ಲಾಕ್‌ ಮಾಡಲು ಉದ್ದೇಶಿಸಿರುವ ತಂತ್ರಾಂಶಗಳನ್ನು ಆಯ್ಕೆಮಾಡಿಕೊಂಡು ರಹಸ್ಯಪದ ಮತ್ತು ನಿಮ್ಮ ಬೆರಳಚ್ಚನ್ನು ನೀಡಿದರೆ ಸಾಕು. ನಿಮ್ಮ ಬೆರಳಚ್ಚು ಇಲ್ಲದೆ ಕಿರು ತಂತ್ರಾಂಶಗಳು ತೆರೆದುಕೊಳ್ಳುವುದೇ ಇಲ್ಲ.

**

ADVERTISEMENT

ಚಿತ್ರಗಳನ್ನು ಬಚ್ಚಿಡಲು

ಸ್ನೇಹಿತರೊಂದಿಗೆ ಸೆರೆಹಿಡಿದ ಸ್ವಂತಿ, ಛಾಯಾಚಿತ್ರಗಳು ಇನ್ನೊಬ್ಬರ ಕಣ್ಣಿಗೆ ಬೀಳದಂತೆ ಫಿಂಗರ್‌ಪ್ರಿಂಟ್‌ ಮೂಲಕ ಸೂಕ್ತ ರಕ್ಷಣೆ ಕಲ್ಪಿಸಬಹುದು. Solo Photo ಎಂಬ ತಂತ್ರಾಂಶದ ಮೂಲಕ ಇದನ್ನು ಮಾಡಬಹುದು. ಇದು ಮೊಬೈಲ್‌ನಲ್ಲಿರುವ ಗ್ಯಾಲರಿ ತಂತ್ರಾಂಶದಂತೆಯೇ ಇರುತ್ತದೆ. ಇದನ್ನು ಅಳವಡಿಸಿಕೊಂಡು ನಿಮ್ಮ ಛಾಯಾಚಿತ್ರಗಳನ್ನು ಬಚ್ಚಿಡಬಹುದು. ಇದಕ್ಕೆ ರಕ್ಷಣೆಯಾಗಿ ನಿಮ್ಮ ಬೆರಳಚ್ಚನ್ನು ಉಪಯೋಗಿಸಿಕೊಳ್ಳಬಹುದು.

**

ಡೈರಿಗೆ ರಕ್ಷಣೆ

ಜೀವನದ ಅತಿ ಮುಖ್ಯ ಸಂಗತಿಗಳು, ಆಸಕ್ತಿಕರ ಘಟನೆಗಳನ್ನು ಮೊಬೈಲ್‌ ಡೈರಿಯಲ್ಲಿ ಬರೆಯುವ ಅಭ್ಯಾಸ ನಿಮಗೆ ಇದ್ದರೆ. ಅದು ಮತ್ತೊಬ್ಬರ ಕಣ್ಣಿಗೆ ಬೀಳದಂತೆ ಗೋಪ್ಯವಾಗಿ ಇಟ್ಟುಕೊಳ್ಳುವುದು ಅನಿವಾರ್ಯ. ಇದಕ್ಕೂ ಬೆರಳಚ್ಚಿನ ರಕ್ಷಣೆ ಒದಗಿಸಿದರೆ ಈ ಸಮಸ್ಯೆ ಇರುವುದಿಲ್ಲ. ಇದಕ್ಕೆಂದೇ ಜರ್ನಿ ಎಂಬ ವಿಶೇಷ ತಂತ್ರಾಂಶ ಲಭ್ಯವಿದೆ. ಇದರ ಮೂಲಕ ನಿಮ್ಮ ಡೈರಿಗೆ ಪ್ಯಾಟ್ರನ್‌, ಪಾಸ್‌ವರ್ಡ್‌, ಫಿಂಗರ್‌ಫ್ರಿಂಟ್‌ ರಕ್ಷಣೆ ಕಲ್ಪಿಸಬಹುದು. ಇದನ್ನು ಅಳವಡಿಸಿಕೊಂಡ ನಂತರ ಸೆಟ್ಟಿಂಗ್ಸ್‌ಗೆ ಹೋಗಿ ಫಿಂಗರ್‌ಪ್ರಿಂಟ್‌ ಸೌಲಭ್ಯಆಯ್ಕೆಮಾಡಿಕೊಳ್ಳಬಹುದು.

**

ಮುಟ್ಟಿದರೆ ತಂತ್ರಾಂಶ

ಫಿಂಗರ್‌ಪ್ರಿಂಟ್‌ ಸೆನ್ಸರ್‌ ಅನ್ನು ಒಮ್ಮೆ ಮುಟ್ಟಿದರೆ ಫೇಸ್‌ಬುಕ್‌ ತೆರೆದುಕೊಳ್ಳಬೇಕು, ಎರಡು ಬಾರಿ ಮುಟ್ಟಿದರೆ ವಾಟ್ಸ್‌ ಆಪ್‌ ತೆರೆದುಕೊಳ್ಳಬೇಕು. ಇಂತಹ ಆಸೆ ನಿಮಗೂ ಇದೆಯೇ? ಹಾಗಾದರೆ ನಿಮ್ಮ ಮೊಬೈಲ್‌ನಲ್ಲಿ Fingerprint Gestures ತಂತ್ರಾಂಶ ಅಳವಡಿಸಿಕೊಂಡರೆ ಸಾಕು. ಇದು ಸೆನ್ಸರ್‌ ಅನ್ನು ಸ್ಪರ್ಶಿಸಿದಾಗ ಯಾವ ತಂತ್ರಾಂಶ ತೆರೆದುಕೊಳ್ಳಬೇಕು ಎಂದು ಕೇಳುತ್ತದೆ. ಆಗ ನಿಮಗಿಷ್ಟದ ತಂತ್ರಾಂಶವನ್ನು ಆಯ್ಕೆಮಾಡಿಕೊಂಡು ಸಿಂಗಲ್‌ ಟಚ್‌, ಡಬಲ್‌ ಡಬಲ್‌ ಟಚ್‌, ಸ್ವೈಪ್‌  ಲಾಕ್‌ ಸೌಲಭ್ಯಗಳನ್ನು ಆಯ್ಕೆಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.