ADVERTISEMENT

Chandrayaan- 3 : ಚಂದ್ರನ ಮೇಲ್ಮೈಗೆ ಇನ್ನಷ್ಟು ಸನಿಹ ಬಂದ ಗಗನನೌಕೆ

ಪಿಟಿಐ
Published 9 ಆಗಸ್ಟ್ 2023, 10:36 IST
Last Updated 9 ಆಗಸ್ಟ್ 2023, 10:36 IST
ಚಂದ್ರಯಾನ–3 (Twitter/@isro)
ಚಂದ್ರಯಾನ–3 (Twitter/@isro)   

ಬೆಂಗಳೂರು: ಚಂದ್ರಯಾನ–3 ಗಗನನೌಕೆಯನ್ನು ಚಂದ್ರನ ಇನ್ನೊಂದು ಕಕ್ಷೆಗೆ ಇಳಿಸುವಲ್ಲಿ ಇಸ್ರೊ ವಿಜ್ಞಾನಿಗಳು ಇಂದು ಯಶಸ್ವಿಯಾಗಿದ್ದು, ನೌಕೆ ಚಂದ್ರನ ಮೇಲ್ಮೈಗೆ ಇನ್ನಷ್ಟು ಸನಿಹಕ್ಕೆ ಬಂದಿದೆ.

ಜುಲೈ 14ರಂದು ನೌಕೆಯನ್ನು ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಾಗಿದ್ದು, ಮೂರು ವಾರಗಳ ಕಾಲ ಯಶಸ್ವಿಯಾಗಿ ಪರಿಭ್ರಮಿಸಿದ ನಂತರ ಆಗಸ್ಟ್‌ 5ರಂದು ನೌಕೆ ಚಂದ್ರನ ಕಕ್ಷೆ ತಲುಪಿತ್ತು. ಚಂದ್ರನ ಕಕ್ಷೆ ತಲುಪಿದ ನಂತರ ನೌಕೆಯ ವೇಗವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬಂದಿರುವ ಇಸ್ರೊ, ಆಗಸ್ಟ್‌ 23ರ ವೇಳೆಗೆ ಚಂದ್ರನ ಮೇಲೆ ಸಾಫ್ಟ್‌ ಲ್ಯಾಡಿಂಗ್‌ ಮಾಡಲು ನಿರ್ಧರಿಸಿದೆ.

ಈ ಬಗ್ಗೆ ಎಕ್ಸ್‌ (ಟ್ವಿಟರ್‌)ನಲ್ಲಿ ಮಾಹಿತಿ ನೀಡಿರುವ ಇಸ್ರೊ, ಚಂದ್ರನ ಮೇಲ್ಮೈಗೆ ಇನ್ನಷ್ಟು ಸನಿಹ ಎಂದು ಬರೆದುಕೊಂಡಿದೆ. ‘ನೌಕೆಗೆ ಅಗತ್ಯ ನೂಕುಬಲ ಪ್ರಕ್ರಿಯೆ ಮೂಲಕ 174 ಕಿ.ಮೀ x 1437 ಕಿ.ಮೀ ಕೆಳಗಿನ ಕಕ್ಷೆಗೆ ಇಳಿಸಲಾಗಿದೆ. ಇದರಿಂದ ನೌಕೆ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಿದೆ’ ಎಂದು ಹೇಳಿದೆ.

ADVERTISEMENT

ಮುಂದಿನ ಕಾರ್ಯಾಚರಣೆ ಆಗಸ್ಟ್‌ 14ರ ಬೆಳಗ್ಗೆ 11.30ಕ್ಕೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.