ADVERTISEMENT

ಫೋಟೊ- ವಿಡಿಯೊ ಬ್ಯಾಕ್‌ಅಪ್ ಹೇಗೆ?

ರಶ್ಮಿ ಕಾಸರಗೋಡು
Published 7 ಆಗಸ್ಟ್ 2019, 8:35 IST
Last Updated 7 ಆಗಸ್ಟ್ 2019, 8:35 IST

ಫೋಟೊ- ವಿಡಿಯೊ ಬ್ಯಾಕ್‌ಅಪ್ ಹೇಗೆ?

ಅಂಡ್ರಾಯ್ಡ್ ಫೋನ್‌ನಲ್ಲಿರುವ ಫೋಟೊಗಳು/ ವಿಡಿಯೊಗಳು ಗೂಗಲ್ ಫೋಟೊಸ್ ಲೈಬ್ರರಿಯಲ್ಲಿ ಸೇವ್ ಆಗಿರುತ್ತವೆ. ಈ ಫೋಟೊಗಳು ಪ್ರೈವೇಟ್ ಆಗಿಯೇ ಇದ್ದು, ಶೇರ್ ಮಾಡಿದರೆ ಮಾತ್ರ ಪಬ್ಲಿಕ್ ಆಗುತ್ತದೆ. ಮೊಬೈಲ್‌ನಲ್ಲಿರುವ ಫೋಟೊಗಳನ್ನು ಬ್ಯಾಕ್‌ಅಪ್ ಮಾಡಿದರೆ ಅವು ಸುರಕ್ಷಿತವಾಗಿರುತ್ತವೆ.

ಸಿಂಕ್ ಮತ್ತು ಬ್ಯಾಕ್‌ಅಪ್ ಆನ್ ಹೇಗೆ?

ADVERTISEMENT

ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಖಾತೆಗೆ ಸೈನ್ ಇನ್ ಆಗಿರಬೇಕು ಅಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ Google Photos app ಓಪನ್ ಮಾಡಿ ಗೂಗಲ್ ಫೋಟೋಸ್‌ನ ಮೆನುವಿನಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ Back up & Sync ಎನೇಬಲ್ ಮಾಡಿ ಬ್ಯಾಕ್‌ಅಪ್ ಅಕೌಂಟ್‌ನಲ್ಲಿ ನಿಮ್ಮ ಜಿಮೇಲ್ ಅಡ್ರೆಸ್ ಇರುತ್ತದೆ. ಬ್ಯಾಕ್‌ಅಪ್ ಡಿವೈಸ್ ಫೋಲ್ಡರ್ ಕ್ಲಿಕ್ ಮಾಡಿ. ನೀವು ಫೋನ್ ಕ್ಯಾಮೆರಾದಲ್ಲಿ ಕ್ಲಿಕ್ ಮಾಡಿದ ಎಲ್ಲ ಫೋಟೊಗಳು ಬ್ಯಾಕ್‌ಆಪ್ ಆಗಿರುತ್ತವೆ. ಆದರೆ ಇತರ ಫೋಲ್ಡರ್ ಅಂದರೆ ವಾಟ್ಸ್ಆ್ಯಪ್, ಇನ್‍ಸ್ಟಾಗ್ರಾಂ, ಮೆಸೆಂಜರ್ ಮತ್ತು ಡೌನ್‍ಲೋಡ್ ಮಾಡಿದ ಫೋಟೊಗಳು ಬ್ಯಾಕ್‌ಅಪ್ ಆಗಬೇಕಾದರೆ ಆಯಾ ಫೋಲ್ಡರ್ ಬ್ಯಾಕ್ ಅಪ್ ಎನೇಬಲ್ ಮಾಡಬೇಕು.

ಅಪ್‌ಲೋಡ್ ಸೈಜ್

ಉತ್ತಮ ಗುಣಮಟ್ಟದ ಫೋಟೊಗಳು ಮಾತ್ರ ಬ್ಯಾಕ್ ಅಪ್ ಆಗುತ್ತವೆ.

ಮೊಬೈಲ್ ಡೇಟಾ ಬ್ಯಾಕ್‌ಅಪ್

ಇಲ್ಲಿ ಫೋಟೊ ಮತ್ತು ವಿಡಿಯೊಗಳು ಮೊಬೈಲ್ ಡೇಟಾ ಬಳಸುವಾಗ ಬ್ಯಾಕ್‌ಅಪ್ ಆಗಬೇಕೋ ಬೇಡವೋ ಎಂಬುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.

ರೋಮಿಂಗ್ ಇರುವಾಗಲೂ ಬ್ಯಾಕ್‌ಅಪ್ ಬೇಕು ಎಂದರೆ When to Back up ಎಂಬಲ್ಲಿ ರೋಮಿಂಗ್ ಎನೇಬಲ್ ಮಾಡಿ.

Free up Device Storage

ನಿಮ್ಮ ಡಿವೈಸ್‍ನಲ್ಲಿರುವ ಫೋಟೊಗಳು ಈಗಾಗಲೇ ಬ್ಯಾಕ್ ಅಪ್ ಆಗಿದ್ದರೆಡಿವೈಸ್‍ನಲ್ಲಿರುವ ಒರಿಜಿನಲ್ ಫೋಟೋ/ ವಿಡಿಯೊ ಡಿಲೀಟ್ ಮಾಡುವ ಮೂಲಕ Storage space ಉಳಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.