ADVERTISEMENT

Redmi 10: ದೇಶದ ಮಾರುಕಟ್ಟೆಗೆ ಶೀಘ್ರದಲ್ಲಿ ಹೊಸ ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜೂನ್ 2021, 12:40 IST
Last Updated 29 ಜೂನ್ 2021, 12:40 IST
ಶಿಯೋಮಿ ರೆಡ್ಮಿ
ಶಿಯೋಮಿ ರೆಡ್ಮಿ    

ಬೆಂಗಳೂರು: ಶಿಯೋಮಿ ಹೊಸ ಸರಣಿಯಲ್ಲಿ ರೆಡ್ಮಿ 10 ಸ್ಮಾರ್ಟ್‌ಫೋನ್ ಅನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.

ಈಗಾಗಲೇ ರೆಡ್ಮಿ 9 ಸರಣಿಯಲ್ಲಿ ಐದು ವಿವಿಧ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿ ದೊರೆಯುತ್ತಿವೆ. ಮುಂದೆ ರೆಡ್ಮಿ 10 ಸ್ಮಾರ್ಟ್‌ಫೋನ್ ಮಾದರಿ ಬಿಡುಗಡೆಯಾಗುತ್ತಿದೆ.

ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತು ಶಿಯೋಮಿ ಇಂಡಿಯಾದ ಮನು ಕುಮಾರ್ ಜೈನ್ ಟ್ವೀಟ್ ಮೂಲಕ ಸುಳಿವು ನೀಡಿದ್ದಾರೆ.

ADVERTISEMENT

ರೆಡ್ಮಿ ರೆವೊಲ್ಯೂಶನ್ ಎಂಬ ಬಗ್ಗೆ ಮನು ಕುಮಾರ್ ಟ್ವೀಟ್ ಮಾಡಿದ್ದು, ಹೊಸ ಸರಣಿ ರೆಡ್ಮಿ 10 ಆಗಿರುತ್ತದೆ ಎಂದಿದ್ದಾರೆ.

ಆದರೆ ಹೊಸ ಸ್ಮಾರ್ಟ್‌ಫೋನ್ ತಾಂತ್ರಿಕ ವೈಶಿಷ್ಟ್ಯಗಳಾಗಲೀ ಅಥವಾ ಬೆಲೆ ವಿವರ ಕುರಿತು ಶಿಯೋಮಿ ಮತ್ತು ಮನು ಕುಮಾರ್ ಜೈನ್ ಯಾವುದೇ ವಿವರ ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.