ADVERTISEMENT

‘ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 9:05 IST
Last Updated 28 ಜನವರಿ 2018, 9:05 IST

ಚಿಕ್ಕೋಡಿ: ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೋರಾಟ, ಶೌರ್ಯ, ದೇಶಭಕ್ತಿ ಇಂದಿಗೂ ಅಜರಾಮರವಾಗಿವೆ. ಅವರೊಬ್ಬ ಪ್ರತಿಮ ದೇಶಭಕ್ತ’ ಎಂದು ರಾಯಣ್ಣ ಯುವ ಘರ್ಜನೆ ಸಂಘಟನೆಯ ಸಂಚಾಲಕ ಶಿವರಾಜ ಜಿಡ್ಡಿಮನಿ ಹೇಳಿದರು. ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹಾಲುಮತ ಸಮಾಜ ಯಾರಿಗೂ ಕೇಡು ಬಯಸದ, ಶತ್ರುಗಳಿಗೂ ಸಹ ಹಾಲೆರೆಯುವ ಸಮಾಜವಾಗಿದ್ದು, ಆ ಸಮಾಜದಲ್ಲಿ ಜನಿಸಿ, ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ವೀರ ರಾಯಣ್ಣನನ್ನು ಜ. 26ರಂದು ಬ್ರಿಟಿಷರು ಗಲ್ಲಿಗೇರಿಸಿದ್ದರು. ಅವರ ಸ್ಮರಣಾರ್ಥ ಈ ದಿನ ಆಚರಿಸಲಾಗುತ್ತಿದೆ’ ಎಂದರು.

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ಪೂಜಾರಿ, ಯುವ ನಾಯಕ ರಾವ್ ಗುಡೆ, ಗ್ರಾಮ ಘಟಕ ಅಧ್ಯಕ್ಷ ನವಲಪ್ಪಾ ಡಂಗೇರ, ವಿಠ್ಠಲ ಯಡ್ರಾಂವಿ, ಪ್ರಕಾಶ ಪೂಜೇರಿ ಸಿದ್ರಾಮ ಹರಕೆ, ಮುತ್ತಪ್ಪ ನಾಗನೂರೆ, ಹಾಗೂ ಕೇರೂರಿನ ವಿನೋದ ಒಡೆಯರ, ಪುಂಡಲೀಕ ಬಾಡಕರ, ಚಿದು ಬೇಕ್ಕೆರಿ, ವಿಶ್ವನಾಥ ಪಾಟೀಲ, ಶ್ರೀಧರ ಬೇಕ್ಕೆರಿ, ವಿನಾಯಕ ಗಡದೆ, ಮಲ್ಲಿಕ ಬೇಕ್ಕೆರಿ, ಸುಜಿತ ತೋಡಸೆ, ಮಹಾಂತೇಶ, ಲಗಮಣ್ಣಾ ಯಡ್ರಾಂವಿ ಇದ್ದರು.

ADVERTISEMENT

‘ಬದುಕನ್ನೇ ತ್ಯಾಗ ಮಾಡಿದ ವೀರ’

ಬೆಟಗೇರಿ (ಗೋಕಾಕ): ‘ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶ ಭಕ್ತ’ ಎಂದು ಗೋಕಾಕ ತಾಲ್ಲೂಕಿನ ಬೆಟಗೇರಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಬಸವರಾಜ ಕುರಬೇಟ ಹೇಳಿದರು.

ಗ್ರಾಮದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರು ಶುಕ್ರವಾರ ಆಯೋಜಿಸಿದ್ದ ರಾಯಣ್ಣನ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮದ ಬೀರಸಿದ್ದೇಶ್ವರ ಮಹಾದ್ವಾರದಿಂದ ರಾಯಣ್ಣನ ವೃತ್ತದವರೆಗೆ ಸಕಲ ವಾದ್ಯ–ಮೇಳಗಳೊಂದಿಗೆ ಮೆರವಣಿಗೆ ನಡೆಯಿತು. ಗ್ರಾಮದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಹನುಮಂತ ವಡೇರ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯ ಲಕ್ಷ್ಮಣ ಚಂದರಗಿ, ಸುಭಾಸ್ ಕರೆಣ್ಣವರ, ಈರಣ್ಣ ಸಿದ್ನಾಳ, ಬಸವರಾಜ ಮಾಳೇದ, ರಮೇಶ ಹಾಲನ್ನವರ, ಮಹಾದೇವ ಹೊರಟ್ಟಿ, ವಿಠಲ ಕೋಣಿ, ಗುರಪ್ಪ ಮಾಕಾಳಿ, ಸುರೇಶ ಬಾಣಸಿ, ಮಲ್ಲಿಕಾರ್ಜುನ ಸೋಮನಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.