ADVERTISEMENT

ಅಡುಗೆ ತ್ಯಾಜ್ಯದಿಂದ ಮಾಡಿ ಗೊಬ್ಬರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಅಡುಗೆ ತ್ಯಾಜ್ಯದಿಂದ ಮಾಡಿ ಗೊಬ್ಬರ
ಅಡುಗೆ ತ್ಯಾಜ್ಯದಿಂದ ಮಾಡಿ ಗೊಬ್ಬರ   

1) ಮೊದಲಿಗೆ 2–3 ದಿನ ತರಕಾರಿ ಸಿಪ್ಪೆ, ಹಣ್ಣುಗಳ ಸಿಪ್ಪೆಗಳನ್ನು ಶೇಖರಿಸಿ ಇಡಿ. ಪೂಜೆಗೆ ಬಳಸಿದ ಹೂವುಗಳನ್ನೂ ಇಡಬಹುದು. ಪ್ಲಾಸ್ಟಿಕ್‌, ಗ್ಲಾಸ್‌ಗಳಿದ್ದರೆ ಅದನ್ನು ಪ್ರತ್ಯೇಕ ಮಾಡಿ.

2) ಟೆರಕೋಟಾದ ಮೂರು ಕುಂಡಗಳನ್ನು ತೆಗೆದುಕೊಳ್ಳಿ. ಪ್ಲಾಸ್ಟಿಕ್‌ ಕುಂಡವಾದರೂ ಪರವಾಗಿಲ್ಲ. ಆದರೆ ಅವುಗಳಲ್ಲಿ ರಂಧ್ರ ಇರಬೇಕು. ಮೂರೂ ಕುಂಡಗಳನ್ನು ಒಂದರ ಮೇಲೊಂದು ಇಡಿ

3) ಮೊದಲು ಖಾಲಿ ಕುಂಡವನ್ನು ತೆಗೆದುಕೊಳ್ಳಿ. ಕುಂಡದ ಕೆಳಭಾಗದಲ್ಲಿ ಪೇಪರ್‌ ಹಾಕಿ. ಅದರಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ತರಕಾರಿ ಹಾಗೂ ಹಣ್ಣುಗಳ ಸಿಪ್ಪೆಗಳನ್ನು ಹಾಕಿ. ಮೊಟ್ಟೆ ಸಿಪ್ಪೆ ಇದ್ದಲ್ಲಿ ಅದನ್ನು ಚೆನ್ನಾಗಿ ಪುಡಿ ಮಾಡಿ ಹಾಕಿ. ಮೇಲಿನಿಂದ ಒಂದಿಷ್ಟು ಯಾವುದೇ ಮರದ ಒಣಗಿದ ಎಲೆಗಳನ್ನು ಹಾಕಿ. ಒಂದು ಕೋಲಿನಿಂದ ಚೆನ್ನಾಗಿ ಮಿಕ್ಸ್‌ ಮಾಡಿ.

ADVERTISEMENT

4) ಒಂದು ಉಂಡೆಯಷ್ಟು ಸೆಗಣಿಗೆ ನೀರು ಹಾಕಿ ಕದಡಿ. ಅದನ್ನು ಈ ತ್ಯಾಜ್ಯದ ಮೇಲೆ ಸಿಂಪಡಿಸಿ. ಸೆಗಣಿ ಸಿಗದೇ ಹೋದರೆ ಒಂದು ಚಮಚ ಹುಳಿ ಮಜ್ಜಿಗೆ ಹಾಕಿದರೂ ಆದೀತು.  ಅದರ ಮೇಲೆ ಮತ್ತಷ್ಟು ಒಣಗಿದ ಎಲೆಗಳನ್ನು ಹಾಕಿ ಚೆನ್ನಾಗಿ ತಿರುವಿ. ಕ್ರಿಮಿ–ಕೀಟಗಳು ಬರದಂತೆ ಚೆನ್ನಾಗಿ ಮುಚ್ಚಿ. ಇಲ್ಲಿಗೆ ಒಂದು ಹಂತ ಮುಗಿಯುತ್ತದೆ.

5) ಹೀಗೆ, ದಿನವೂ ತ್ಯಾಜ್ಯ, ಒಣಗಿದ ಎಲೆ, ಮೇಲೆ ಹೇಳಿದ ಪುಡಿ ಅಥವಾ ಮಜ್ಜಿಗೆ ಹಾಕುತ್ತಾ ಬನ್ನಿ.

6) ಒಂದು ಕುಂಡ ಭರ್ತಿಯಾಗುವವರೆಗೆ ಹೀಗೇ ಮುಂದುವರಿಸಿ. ಚೆನ್ನಾಗಿ ಮಿಕ್ಸ್‌ ಮಾಡುವುದು ಕಡ್ಡಾಯ. ಆದ್ದರಿಂದ ಕುಂಡ ಮುಕ್ಕಾಲು ಭಾಗ ತುಂಬುವವರೆಗೆ ಮಾತ್ರ ಆ ಕುಂಡ ಬಳಸಿ

7) ನಂತರ ಮಧ್ಯದಲ್ಲಿ ಇರುವ ಕುಂಡದಲ್ಲಿ, ನಂತರ ಕೊನೆಯ ಕುಂಡದಲ್ಲಿ ಇದನ್ನೇ ಮುಂದುವರಿಸಿ. ಮೇಲಿನ ಕುಂಡದಲ್ಲಿ ತುಂಬುತ್ತಿದ್ದಂತೆಯೇ ಅದರ ಭಾರದಿಂದ ಕೆಳಗಿರುವ ಕುಂಡದ ತ್ಯಾಜ್ಯಗಳು ಒತ್ತಡದಿಂದ ಕೆಳಕ್ಕೆ ಹೋಗುತ್ತಾ ಬರುತ್ತದೆ. ಹೀಗೆ ಮೂರೂ ಕುಂಡಗಳನ್ನು  ಪುನರಾವರ್ತಿಸುತ್ತಾ ಹೋಗಿ.

30–40  ದಿನಗಳಲ್ಲಿಯೇ ಅತ್ಯುತ್ತಮ  ಸಾವಯವಯುಕ್ತ ಗೊಬ್ಬರ ತಯಾರಾಗುತ್ತದೆ. ಇದನ್ನು ಯಾವುದೇ ಗಿಡಗಳಿಗೆ ಹಾಕಬಹುದು.

ಗೊಬ್ಬರ ತಯಾರಿ ಮಾಡುವ ವಿಡಿಯೊ ನೋಡಲು ಲಿಂಕ್‌: goo.gl/zHur4c

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.