ADVERTISEMENT

ಗ್ರಾಮಸಿರಿ- ದೇಸಿ ಭತ್ತದ ಕ್ಯಾಲೆಂಡರ್

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 19:30 IST
Last Updated 10 ಏಪ್ರಿಲ್ 2017, 19:30 IST
ಗ್ರಾಮಸಿರಿ- ದೇಸಿ ಭತ್ತದ ಕ್ಯಾಲೆಂಡರ್
ಗ್ರಾಮಸಿರಿ- ದೇಸಿ ಭತ್ತದ ಕ್ಯಾಲೆಂಡರ್   

ಜಗತ್ತಿನ ಅರ್ಧ ಭಾಗದ ಜನರ ಊಟದ ತಟ್ಟೆ ತುಂಬುವ ಅನ್ನದ ಹಿಂದೆ ವಿಶಿಷ್ಟ ಕೃಷಿ ಸಂಸ್ಕೃತಿ ಇದೆ. ಭಾರತದಲ್ಲಿದ್ದ ಭತ್ತದ ಲಕ್ಷಾಂತರ ದೇಸಿ ತಳಿಗಳು ಗುಣ, ಪೌಷ್ಟಿಕಾಂಶದಲ್ಲಿ ಒಂದಕ್ಕಿಂತ ಒಂದು ಮಿಗಿಲಾಗಿದ್ದವು. ಅಧಿಕ ಇಳುವರಿ ತಳಿಗಳಿಂದಾಗಿ ಸಾಂಪ್ರದಾಯಿಕ ತಳಿಗಳು ಕಣ್ಮರೆಯಾದವು. ಉಳಿದ ತಳಿಗಳನ್ನಾದರೂ ಸಂರಕ್ಷಿಸುವ ಉದ್ದೇಶದಿಂದ ‘ಭತ್ತ ಉಳಿಸಿ ಆಂದೋಲನ ಒಂದು ದಶಕದಿಂದಲೂ ನಡೆಸಿದ ಪ್ರಯತ್ನ ಫಲ ನೀಡಿದೆ. ದೇಸಿ ತಳಿ ಸಂರಕ್ಷಣೆ ಈಗ ಸದ್ದಿಲ್ಲದೇ ನಡೆಯುತ್ತಿದೆ. ಈ ಚಟುವಟಿಕೆಗಳ ಮಾಹಿತಿಯನ್ನು ‘ಗ್ರಾಮಸಿರಿ ಭತ್ತದ ಕ್ಯಾಲೆಂಡರ್‌ನಲ್ಲಿ ಕೊಡಲಾಗಿದೆ.

ದೇಸಿ ಭತ್ತದ ಇತಿಹಾಸದಿಂದ ಹಿಡಿದು ಸೇವನೆವರೆಗೆ ಆರು ವಿಷಯ ಆಯ್ದು ಈ ಕ್ಯಾಲೆಂಡರ್ ರೂಪಿಸಲಾಗಿದೆ. ಯುಗಾದಿಯಿಂದ ಯುಗಾದಿವರೆಗೆ ಇರುವ ಕ್ಯಾಲೆಂಡರ್‌ನಲ್ಲಿ ದೇಸಿ ಅಕ್ಕಿಗಳು, ರೈತ ವಿಜ್ಞಾನಿಗಳು, ಕನ್ನಡ ನಾಡಿನ ಅಕ್ಕಿಗಳ ವಿವರಗಳಿವೆ. ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಕೆಂಪಕ್ಕಿ ಪಾಕವಿಧಾನ, ಅಪರೂಪವಾಗಿರುವ ಕಪ್ಪಕ್ಕಿ ಇತಿಹಾಸದ ಜತೆಗೆ ಅಕ್ಕಿ ಹಾಗೂ ಸಿರಿಧಾನ್ಯ ಮಿಶ್ರ ಮಾಡಿ ಸೇವಿಸಿದರೆ ಸಿಗುವ ಪ್ರಯೋಜನ ವಿವರಿಸಲಾಗಿದೆ.

ಮತ್ತೊಂದು ವಿಶಿಷ್ಟ ವಿಧಾನವೆನಿಸಿದ ಮೊಳಕೆ ತರಿಸಿದ ಅಕ್ಕಿ ಕುತೂಹಲದ ಲೋಕವೊಂದನ್ನು ಪರಿಚಯಿಸುತ್ತದೆ. ಮಳೆ ನಕ್ಷತ್ರಗಳ ಉಲ್ಲೇಖವೂ ಇದೆ.

ADVERTISEMENT

ಹನ್ನೆರಡು ಪುಟಗಳ ವರ್ಣರಂಜಿತ ಕ್ಯಾಲೆಂಡರ್ ಬೆಲೆ ₹100 (ಅಂಚೆ ವೆಚ್ಚ ಸೇರಿ).

ವಿವರಗಳಿಗೆ ಸಂಪರ್ಕಿಸಿ: ಸಹಜ ಸಮೃದ್ಧ, ನಂ. 38, ಮೊದಲ ಮಹಡಿ, 1ನೇ ಕ್ರಾಸ್, ಆದಿ ಪಂಪ ರಸ್ತೆ, ವಿ.ವಿ. ಮೊಹಲ್ಲಾ, ಮೈಸೂರು-570002
ಮೊ: 9535149520.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.