ADVERTISEMENT

ತೊಗರಿ ಬೆಳೆಯ ಇಳುವರಿಗೆ..

ಎಣಿಕೆ ಗಳಿಕೆ-22

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
ತೊಗರಿ ಬೆಳೆಯ ಇಳುವರಿಗೆ..
ತೊಗರಿ ಬೆಳೆಯ ಇಳುವರಿಗೆ..   

ಉತ್ತಮ ಇಳುವರಿಗೆ
*
 ಬಿತ್ತನೆಗಿಂತ 2-3 ವಾರ ಮೊದಲು  ಭೂಮಿಗೆ ಕೊಟ್ಟಿಗೆ ಮತ್ತು ಇತರ ಗೊಬ್ಬರಗಳನ್ನು 15–20 ಸೆಂ.ಮೀ ಆಳ ಉಳುಮೆ ಮಾಡಿ ನೀಡಬೇಕು

ರೋಗಕ್ಕೆ ಮದ್ದು
ಬಂಜೆರೋಗ, ಬಿಳಿ ನೊಣರೋಗ, ಕಾಯಿಕೊರಕ ರೋಗಗಳು ಬಾರದಿರಲು ಬೆಳೆಯಲ್ಲಿ ಕಳೆ ಇರದಂತೆ ನೋಡಿಕೊಳ್ಳಬೇಕು. ಬಿತ್ತನೆಗೆ ಬೀಜೋಪಚಾರ ಮಾಡಿದ ಬೀಜಗಳನ್ನು ಬಳಸಬೇಕು. ಕಾಯಿಕೊರಕ ರೋಗ ಬಾಧಿಸದಿರಲು ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡಬೇಕು.

ರೋಗದ ಲಕ್ಷಣ ಕಂಡುಬಂದರೆ ಬೇವಿನ ಬೀಜದ ಕಷಾಯ ಸಿಂಪಡಿಸಬೇಕು. ಬೂದಿ ರೋಗ ಹೆಚ್ಚಾದರೆ 2–3ಗ್ರಾಂ ಗಂಧಕದ ಪುಡಿಯನ್ನು ಸಿಂಪಡಿಸಬಹುದು. ಸೊರಗು ರೋಗ ಹೆಚ್ಚು ಕಂಡುಬರುವ ಪ್ರದೇಶಗಳಲ್ಲಿ ಪರ್ಯಾಯ ಬೆಳೆಯಾಗಿ ತಂಬಾಕು ಬೆಳೆದರೆ ರೋಗ ನಿಯಂತ್ರಣಕ್ಕೆ ಬರುತ್ತದೆ


ಬೀಜೋಪಚಾರ
*
ಒಮ್ಮೆ ಕೊಯ್ಲು ಮಾಡಿದ ನಂತರ ಅದೇ ಬೀಜವನ್ನು ಪುನಃ ಬಿತ್ತಬಹುದಾಗಿದೆ. ಬಿತ್ತುವ ಮೊದಲು ಬೀಜ ಹದ ಮಾಡಬೇಕು. ತೊಗರಿಯ ಕಾಳುಗಳನ್ನು 3–4 ಗಂಟೆ ನೀರಿನಲ್ಲಿ ನೆನೆಸಿ ರಾತ್ರಿ ಆರಲು ಬಿಟ್ಟು ಮರುದಿನ ಬಿತ್ತಬೇಕು.

ಮಣ್ಣು: ಆಳವಾದ ಕಪ್ಪು ಮಣ್ಣು ಸೂಕ್ತ. ಗೋಡು ಮಣ್ಣಲ್ಲೂ ಬೆಳೆಯುತ್ತದೆ. ಆದರೆ ಅತಿ ಆಮ್ಲೀಯತೆ ಇರುವ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ. ಮಣ್ಣಿನಲ್ಲಿ ಆಮ್ಲೀಯತೆ ಹೆಚ್ಚಾಗಿದ್ದರೆ ಅದಕ್ಕೆ ಸುಣ್ಣ ಸೇರಿಸಿ ರಸಸಾರ ಸರಿಪಡಿಸಬಹುದು.

ADVERTISEMENT

ತೊಗರಿಗೆ ಉಷ್ಣ ಪ್ರದೇಶ ಹೆಚ್ಚು ಸೂಕ್ತ. ಹೆಚ್ಚು ಮಳೆ ಅಥವಾ ಇಬ್ಬನಿ  ಬೀಳುವ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ. ಭೂಮಿಯಲ್ಲಿ ಬಸಿಯುವಿಕೆ ಸಾಮರ್ಥ್ಯವೂ ಚೆನ್ನಾಗಿರಬೇಕು. ಹೂವು ಬಿಡುವ ಸಮಯದಲ್ಲಿ ಪ್ರಖರ ಸೂರ್ಯನ ಬೆಳಕು ಇದ್ದರೆ ಉತ್ತಮ.
ಹೂವು–ಕಾಯಿ ಬಿಡುವಾಗ ನೀರಿನ ತೇವಾಂಶ  ಹೆಚ್ಚಾದರೆ ಶಿಲೀಂಧ್ರ ಹುಟ್ಟಿಕೊಳ್ಳುತ್ತದೆ.

ಕಟಾವು
ಶೇ 75–80ರಷ್ಟು ಕಾಯಿಗಳು ಕಂದುಬಣ್ಣಕ್ಕೆ ತಿರುಗಿದಾಗ ಕಟಾವು ಮಾಡಬೇಕು. ಕಟಾವು ಮಾಡುವುದು ತಡವಾದರೆ ಬೀಜಗಳು ಬಲಿತು ಸಿಡಿದು ಬೀಳುತ್ತವೆ. ಕಟಾವಿನ ನಂತರ ಬೀಜಗಳನ್ನು 6 ರಿಂದ8 ದಿನಗಳ ಕಾಲ ತೇವಾಂಶ ಹೋಗುವವರೆಗೂ ಒಣಗಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.