ADVERTISEMENT

ಸಮೃದ್ಧ ಹಲಸು ಫಸಲಿಗೆ...

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಸಮೃದ್ಧ ಹಲಸು ಫಸಲಿಗೆ...
ಸಮೃದ್ಧ ಹಲಸು ಫಸಲಿಗೆ...   

ತೇವಾಂಶವುಳ್ಳ ಉಷ್ಣವಲಯ ಹಾಗೂ ಆಳವಾದ ಕೆಂಪುಗೋಡು ಮಣ್ಣು ಮತ್ತು ಮರಳು ಮಿಶ್ರಿತ ಫಲವತ್ತಾದ ಮಣ್ಣು ಅತ್ಯುತ್ತಮ. ಜೂನ್-ಜುಲೈ ತಿಂಗಳುಗಳು ನಾಟಿಗೆ ಸೂಕ್ತ.

ಕಸಿ ಗಿಡಗಳನ್ನು ತಯಾರಿಸಿ ನೆಟ್ಟರೆ ಉತ್ತಮ. ಪಾಲಿಥೀನ್ ಚೀಲಗಳಲ್ಲಿ ಗೊಬ್ಬರ ಮಿಶ್ರಣ ತುಂಬಿ, ಬೀಜ ಬಿತ್ತನೆ ಮಾಡಿಯೂ ಸಸಿ ಬೆಳೆಸಿ ನೆಡಲು ಬಳಸಬಹುದು. ನೆಡಲು ಒಂದು ವರ್ಷದ ಸಸಿ ಉತ್ತಮ.

ಚೆನ್ನಾಗಿ ಉಳುಮೆ ಮಾಡಿದ ಭೂಮಿಯಲ್ಲಿ ಒಂದು ಘನ ಮೀಟರ್ ಅಳತೆಯ ಗುಣಿಗಳನ್ನು 10/10 ಮೀಟರ್ ಅಂತರದಲ್ಲಿ ತೆಗೆಯಬೇಕು. ಅದಕ್ಕೆ ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರವನ್ನು ಸಮಪ್ರಮಾಣದಲ್ಲಿ ಬೆರೆಸಿ ತುಂಬಬೇಕು. ಸಸಿ/ಕಸಿ ಗಿಡಗಳನ್ನು ಗುಣಿಗಳ ಮಧ್ಯಭಾಗದಲ್ಲಿ ನಾಟಿ ಮಾಡಿ ಕೋಲಿನ ಆಸರೆ ಒದಗಿಸಬೇಕು.

ADVERTISEMENT

ಚೆನ್ನಾಗಿ ಉಳುಮೆ ಮಾಡಿದ ಭೂಮಿಯಲ್ಲಿ ಒಂದು ಘನ ಮೀಟರ್ ಅಳತೆಯ ಗುಣಿಗಳನ್ನು 10/10 ಮೀಟರ್ ಅಂತರದಲ್ಲಿ ತೆಗೆಯಬೇಕು. ಅದಕ್ಕೆ ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರವನ್ನು ಸಮಪ್ರಮಾಣದಲ್ಲಿ ಬೆರೆಸಿ ತುಂಬಬೇಕು. ಸಸಿ/ಕಸಿ ಗಿಡಗಳನ್ನು ಗುಣಿಗಳ ಮಧ್ಯಭಾಗದಲ್ಲಿ ನಾಟಿ ಮಾಡಿ ಕೋಲಿನ ಆಸರೆ ಒದಗಿಸಬೇಕು.

ಬೇಸಿಗೆಯಲ್ಲಿ ಪ್ರತಿ 12-15 ದಿನಗಳಿಗೊಮ್ಮೆ ನೀರು ಒದಗಿಸಬೇಕು. ಕಸಿ ಗಿಡಗಳ ಕಾಂಡದಲ್ಲಿ ಬೇರು ಸಸಿಯ ಮೇಲೆ ಮೂಡುವ ಚಿಗುರನ್ನು ಚಿವುಟುತ್ತಿರಬೇಕು. ನೆಲಮಟ್ಟದಿಂದ 1 ಮೀಟರ್ ಎತ್ತರದವರೆಗೆ ಕಾಂಡದಲ್ಲಿ ಮೂಡುವ ಪಕ್ಕ ರೆಂಬೆಗಳನ್ನು ಸವರಬೇಕು.

ಕಸಿ ಗಿಡಗಳು ನಾಟಿ ಮಾಡಿದ 4 ವರ್ಷದ ನಂತರ ಹಣ್ಣು ಕೊಡಲು ಆರಂಭಿಸುತ್ತದೆ. ಸಿಂಗಪುರ ತಳಿ ನಾಟಿ ಮಾಡಿದ ಎರಡೂವರೆ ವರ್ಷಗಳಲ್ಲಿ ಫಲ ನೀಡುತ್ತದೆ.

ಗಂಡು ಮತ್ತು ಹೆಣ್ಣು ಹೂವಿನ ತೆನೆಗಳು ಒಂದೇ ಮರದಲ್ಲಿ ಬೇರೆ ಬೇರೆಯಾಗಿರುತ್ತವೆ. ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೂವು ತೆನೆಗಳನ್ನು ಬಿಡುತ್ತವೆ. ಗಾಳಿ ಮತ್ತು ಕೀಟಗಳ ನೆರವಿನಿಂದ ಪರಾಗಸ್ಪರ್ಶವುಂಟಾಗುತ್ತದೆ.

ಪ್ರತಿ ವರ್ಷ, ಪ್ರತಿ ಗಿಡಕ್ಕೆ 50-250 ಹಣ್ಣು ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.