ADVERTISEMENT

ಸೌತೆ ಸಮೃದ್ಧ ಬೆಳೆಗೆ

ಎಣಿಕೆ ಗಳಿಕೆ– 29

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2016, 19:30 IST
Last Updated 21 ನವೆಂಬರ್ 2016, 19:30 IST
ಗ್ರಾಫಿಕ್ಸ್: ವಿಜಯ
ಗ್ರಾಫಿಕ್ಸ್: ವಿಜಯ   

1) ಸೌತೆಕಾಯಿ ಉಷ್ಣವಲಯದ ಬೆಳೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಉತ್ತಮ ಫಸಲು ಬರುತ್ತದೆ. ಅದರಲ್ಲೂ ಮಳೆಗಾಲ ತುಂಬಾ ಉತ್ತಮ ಫಸಲು ಲಭ್ಯ. ಬಿಸಿಲು-ಬೆಳಕು ಹೆಚ್ಚಿಗೆ ಇದ್ದಲ್ಲಿ ಗಂಡು ಹೂಗಳ ಉತ್ಪತ್ತಿ ಜಾಸ್ತಿ.

2) ಜನವರಿ-ಫೆಬ್ರುವರಿ ಕೃಷಿಗೆ ಸೂಕ್ತ ಕಾಲ. ಜೂನ್-ಜುಲೈನಲ್ಲೂ ಬಿತ್ತಬಹುದು.

3) ತಳಿಗಳು: ಜಪಾನೀಸ್ ಲಾಂಗ್‌ಗ್ರೀನ್, ಸ್ಟೇಟ್, ಚೈನಾ, ಪೋಯಿನ್ಸೆಟ್ಟಿ , ಮಂಗಳೂರು ಸೌತೆ ಮತ್ತು ಧಾರವಾಡದ ಸೌತೆ.

ADVERTISEMENT

4) ಕಾಲುವೆಗಳಲ್ಲಿ 75 ರಿಂದ 90 ಸೆಂ.ಮೀಟರ್‌ಗೆ ಒಂದರಂತೆ ದಿಬ್ಬಗಳನ್ನು ಮಾಡಿ ತಲಾ 3-4 ಬೀಜ ಬಿತ್ತಬೇಕು. ಬಿತ್ತುವ ಆಳ ಒಂದು ಸೆಂ.ಮೀ. ಹೆಕ್ಟೇರಿಗೆ 2.5 ಕಿ.ಗ್ರಾಂ ಬೀಜ ಬೇಕಾಗುತ್ತವೆ. ನಾಲ್ಕೈದು ದಿನಗಳಲ್ಲಿ ಮೊಳೆಯುತ್ತವೆ.

5) ಹೆಕ್ಟೇರಿಗೆ 25-30 ಟನ್ ತಿಪ್ಪೆಗೊಬ್ಬರ ನೀಡಬೇಕು. ನಾಲ್ಕೈದು ದಿನಗಳ ಅಂತರದಲ್ಲಿ ನೀರು ಕೊಟ್ಟರೆ ಸಾಕು6     ಸೌತೆ ಬಳ್ಳಿಗಳ  ಬೇರು ಸಮೂಹ ಹೆಚ್ಚು ಆಳಕ್ಕೆ ಇಳಿದಿರುವುದಿಲ್ಲ. ಹಾಗಾಗಿ ಅಂತರ ಬೇಸಾಯವು ಹಗುರವಾಗಿರಬೇಕು.

7) ಬಳ್ಳಿಗಳಿಗೆ ಆಸರೆ ಒದಗಿಸಿದರೆ ಫಸಲು ಅಧಿಕಗೊಳ್ಳುವುದರ ಜೊತೆಗೆ ಅದರ ಗುಣಮಟ್ಟ ಉತ್ತಮವಿರುತ್ತದೆ. ಬಳ್ಳಿಗಳ ಬುಡದಲ್ಲಿ ಮುಳ್ಳು ಕಂಟಿಗಳನ್ನು ಚುಚ್ಚಿ ನಿಲ್ಲಿಸಬಹುದು ಅಥವಾ ಉದ್ದಕ್ಕೆ ತಂತಿಯನ್ನು ಎಳೆದು, ಅದಕ್ಕೆ ಹಬ್ಬಿಸಬಹುದು.

8) ಬಿತ್ತನೆ ಮಾಡಿದ  45-60 ದಿನಗಳಲ್ಲಿ ಕೊಯ್ಲು ಪ್ರಾರಂಭವಾಗುತ್ತದೆ. ಬೆಳೆ ಅವಧಿಯಲ್ಲಿ ಸುಮಾರು 3-4 ಕೊಯ್ಲುಗಳಿರುತ್ತವೆ. ಹೆಕ್ಟೇರಿಗೆ 15 ರಿಂದ 20 ಟನ್ ಇಳುವರಿ ಸಾಧ್ಯ. ಕಾಯಿಗಳು ಬೇಗ ಕೆಡುತ್ತವೆ. ಸಾಧಾರಣ ಪರಿಸ್ಥಿತಿಗಳಲ್ಲಿ ಅವುಗಳನ್ನು 3-4 ದಿನಗಳವರೆಗೆ ಹಾಗೆಯೇ ಇಡಬಹುದು. ಶೀತಲಮಳಿಗೆಗಳಲ್ಲಿ ಜೋಪಾನ ಮಾಡಿದರೆ ಇನ್ನೂ ಹೆಚ್ಚು ಕಾಲ ಚೆನ್ನಾಗಿರಬಲ್ಲವು.

ಕೀಟ ಮತ್ತು ರೋಗಗಳು
ಕೆಂಪು ದುಂಬಿ ರೋಗ ತಡೆಗೆ 10 ಲೀಟರ್ ನೀರಿಗೆ 20 ಗ್ರಾಂ ಸೆವನ್ ಕ್ರಿಮಿನಾಶಕ ಬೆರೆಸಿ ವಾರಕ್ಕೊಮ್ಮೆ ಎರಡು ಸಾರಿ ಸಿಂಪಡಿಸಬೇಕು. ಕತ್ತರಿ ಹುಳು ಹತೋಟಿಗೆ 10 ಲೀಟರ್ ನೀರಿಗೆ 20 ಗ್ರಾಂ ಫ್ಯೂರಡಾನ್ ಹರಳುಗಳನ್ನು ಬೆರೆಸಿ ದ್ರಾವಣ ಸಿಂಪಡಿಸಬೇಕು. ಹಣ್ಣಿನ ನೊಣ ಹತೋಟಿಗೆ 10 ಲೀಟರ್‌ ನೀರಿಗೆ 10  ಮಿ.ಲೀ. ಫೆಂಥಿಯಾನ್ ಮತ್ತು 100 ಗ್ರಾಂ ಬೆಲ್ಲ ಇಲ್ಲವೇ ಸಕ್ಕರೆ ಬೆರೆಸಿ ಬೆಳೆ ಮೇಲೆ ಸಿಂಪಡಿಸಬೇಕು. ಬಾಡುವ ರೋಗ, ಚಿಬ್ಬು ರೋಗಗಳ ತಡೆಗೆ ಕ್ಯಾಪ್ಟಫಾಲ್ ದ್ರಾವಣ ಸಿಂಪಡಿಸುವುದು ಲಾಭದಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.