ADVERTISEMENT

ಒಂಚೂರು

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ವಿಶಾಲ ಮೃಗಾಲಯ
ವಿಶಾಲ ಮೃಗಾಲಯ   
ಮನೆ ಮದ್ದು
18ನೇ ಶತಮಾನದಲ್ಲಿ ಸಾಗರದ ಪ್ರಯಾಣಿಕರನ್ನು ‘ಸ್ಕರ್ವಿ’ ಎಂಬ ಕಾಯಿಲೆ ಬಾಧಿಸಿತು. ವಿಟಮಿನ್ ‘ಸಿ’ ಕೊರತೆಯಿಂದ ಬಂದ ರೋಗ ಇದು. ಬ್ರಿಟಿಷ್ ನಾವಿಕ ಕ್ಯಾಪ್ಟನ್ ಜೇಮ್ಸ್ ಕುಕ್ ಮಾತ್ರ ಈ ಕಾಯಿಲೆ ಹತ್ತಿರಕ್ಕೂ ಸುಳಿಯದಂತೆ ನೋಡಿಕೊಂಡ. ಅವನು ಪ್ರಯಾಣದ ಉದ್ದಕ್ಕೂ ‘ಸಾರ್ಕ್ರಾಟ್‌’ ಎಂಬ ಕೋಸಿನಿಂದ ತಯಾರಿಸಿದ ಖಾದ್ಯಗಳನ್ನು ಸೇವಿಸುತ್ತಿದ್ದ. ಅದನ್ನು ತಿಂದರೆ ‘ಸ್ಕರ್ವಿ’ ರೋಗ ಬಾರದು ಎಂದು ಅವನು ಕಂಡುಕೊಂಡಿದ್ದ. ಸಹ ಪ್ರಯಾಣಿಕರಿಗೂ ಅದನ್ನೇ ತಿನ್ನುವಂತೆ ಸೂಚಿಸುತ್ತಿದ್ದ. 
 
**
ವಿಶಾಲ ಮೃಗಾಲಯ
ಒಂದೇ ಸೂರಿನಡಿ ಹೆಚ್ಚು ಪ್ರಾಣಿಗಳನ್ನು ನೋಡಬೇಕೆಂದರೆ ಬರ್ಲಿನ್‌ಗೆ ತೆರಳಬೇಕು. ಸುಮಾರು 1,400 ಪ್ರಭೇದಗಳ 15,000ಕ್ಕೂ ಹೆಚ್ಚು ಪ್ರಾಣಿಗಳು ಅಲ್ಲಿ ಕಾಣಸಿಗುತ್ತವೆ. ಈ ಜೈವಿಕ ಉದ್ಯಾನ ಪ್ರಾರಂಭವಾದದ್ದು 1844ರಲ್ಲಿ. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಅದು ನಾಶವಾಯಿತು. 4000 ಪ್ರಾಣಿಗಳಲ್ಲಿ ನೂರಕ್ಕೂ ಕಡಿಮೆ ಮಾತ್ರ ಬದುಕುಳಿದವು.
 
ಯುದ್ಧದ ವೇಳೆ ಒಕ್ಕೂಟ ರಾಷ್ಟ್ರಗಳು ಹಾಕಿದ ಮೊದಲ ಬಾಂಬ್‌ನಿಂದ ಅಲ್ಲಿದ್ದ ಏಕೈಕ ಆನೆ ಕೂಡ ಅಸುನೀಗಿತ್ತು. ಈಗ ಪ್ರಾಣಿಸಂಗ್ರಹಾಲಯದಲ್ಲಿ 500ಕ್ಕೂ ಹೆಚ್ಚು ಬಗೆಯ ಪಕ್ಷಿಗಳು, ದೊಡ್ಡ ಪಾಂಡಾಗಳು ಇವೆ. 
 
**
ಒರಾಂಗುಟನ್ ಮರಿಯ ಭಾವಗಳು
ಮಕ್ಕಳಂತೆ ಒರಾಂಗುಟನ್ ಮರಿ ಕೂಡ ಹಸಿವಾದರೆ ಅಳುತ್ತದೆ. ನೋವಾದರೆ ಕೊರಗುತ್ತದೆ. ಖುಷಿಯಾದರೆ ಅಮ್ಮನ ಎದುರು ಬಿಂದಾಸ್ ನಗುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.