ADVERTISEMENT

ಒಂಚೂರು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2017, 19:30 IST
Last Updated 5 ಮಾರ್ಚ್ 2017, 19:30 IST
ಒಂಚೂರು
ಒಂಚೂರು   

ಹಿಮಕರಡಿಯ ಅಸಲಿ ಬಣ್ಣ
ಹಿಮಕರಡಿ ನೋಡಲು ಬೆಳ್ಳಗಿರುತ್ತವೆ. ಆದರೆ, ಅದು ಅವುಗಳ ಅಸಲಿ ಬಣ್ಣವಲ್ಲ. ಅವುಗಳ ತುಪ್ಪಟ ಬಣ್ಣರಹಿತ. ಪ್ರತಿ ರೋಮದಲ್ಲಿ ಗಾಳಿ ತುಂಬಿದ ಕೊಳವೆ ಇದ್ದು, ಅದು ಬೆಳಕಿನ ಕಿರಣಗಳನ್ನು ಪ್ರತಿಫಲಿಸುತ್ತದೆ. ಇದರಿಂದಾಗಿ ಅದು ಬೆಳ್ಳಗೆ ಕಾಣುವುದು. ಅದರ ಸಹಜ ಬಣ್ಣಕ್ಕೆ ಹೊರತಾದ ದೇಹದ ಭಾಗವೆಂದರೆ ಮೂಗು. ಅದರ ಬಣ್ಣ ಮಾತ್ರ ಕಪ್ಪು.

**

ವೆನಿಜುವೆಲಾದ ಕೇಬಲ್ ಕಾರ್ವೆ

ADVERTISEMENT


ನಿಜುವೆಲಾದ ಸಿಯೆರಾ ನೇವಡಾದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದಲ್ಲಿ ಸಾಗುವ ಕೇಬಲ್ ಕಾರ್ ಇದೆ. ಮೆರಿಡಾ ನಗರಿಯಲ್ಲಿ ಅದನ್ನು ಕಾಣಬಹುದು. 1,577 ಮೀಟರ್ ಎತ್ತರದಲ್ಲಿ ಬರಿನಾಸ್ಟ್‌ನಲ್ಲಿ ಅದು ಹೊರಡುತ್ತದೆ. 4765 ಮೀಟರ್ ಎತ್ತರದ ಪಿಕೊ ಎಸ್ಪೆಜೊವರೆಗೆ ಸಂಚರಿಸುತ್ತದೆ. 12.5 ಕಿ.ಮೀ. ದೂರದ ಪಯಣವಿದು. ಸಿಯೆರಾ ನೇವಡಾ ರಾಷ್ಟ್ರೀಯ ಉದ್ಯಾನದ ಪಕ್ಷಿನೋಟ ಇದರಿಂದ ಸಾಧ್ಯವಾಗಿದೆ. ಬುಡದಿಂದ ಮೇಲಿನವರೆಗೆ 90 ನಿಮಿಷಗಳ ಕಾಲದ ಪ್ರಯಾಣವಿದು.

ಕೇಬಲ್ ಕಾರ್‌ಗಳು ಫ್ರಾನ್ಸ್‌ನಲ್ಲಿ ತಯಾರಾಗುತ್ತಿದ್ದ 1960ರ ಕಾಲದಲ್ಲಿ ಈ ಯೋಜನೆ ಜಾರಿಗೆ ಬಂದದ್ದು. ಟೆಲಿಫೆರಿಕೊ ಎಂಬ ಕೇಬಲ್ ಕಾರ್ ಇಲ್ಲಿ ಸಂಚರಿಸುತ್ತದೆ. ಪ್ರತಿ ಕೇಬಲ್ ಕಾರ್‌ನಲ್ಲಿ 36 ಪ್ರಯಾಣಿಕರು ಕೂರಬಹುದು. ಪ್ರತಿ ಗಂಟೆಗೆ 5 ಕಿ.ಮೀ. ವೇಗದಲ್ಲಿ ಅದು ಸಂಚರಿಸುತ್ತದೆ.   v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.