ADVERTISEMENT

ಪ್ರಪಂಚ ಪರಿಚಯದ ಕೆಲವು ಪ್ರಶ್ನೆಗಳು

ಎನ್.ವಾಸುದೇವ್
Published 16 ಜೂನ್ 2018, 11:17 IST
Last Updated 16 ಜೂನ್ 2018, 11:17 IST
ಪ್ರಪಂಚ ಪರಿಚಯದ ಕೆಲವು ಪ್ರಶ್ನೆಗಳು
ಪ್ರಪಂಚ ಪರಿಚಯದ ಕೆಲವು ಪ್ರಶ್ನೆಗಳು   

1. ಧಾರಾಳ ಮಳೆಯ ಕೃಪೆಯಲ್ಲಿ ದಟ್ಟೈಸಿರುವ ‘ವೃಷ್ಟಿ ವನ’ದ ಒಂದು ದೃಶ್ಯ ಚಿತ್ರ-1ರಲ್ಲಿದೆ. ಈ ಕೆಳಗೆ ಪಟ್ಟಿ ಮಾಡಿರುವ ನಮ್ಮ ದೇಶದ ಯಾವ ರಾಜ್ಯಗಳಲ್ಲಿ ವೃಷ್ಟಿವನಗಳಿವೆ?
ಅ. ಕರ್ನಾಟಕ ಬ. ತಮಿಳುನಾಡು ಕ. ಮೇಘಾಲಯ →ಡ. ಮಣಿಪುರ ಇ. ಮಧ್ಯಪ್ರದೇಶ →ಈ. ಅಸ್ಸಾಂ ಉ. ಗುಜರಾತ್ →ಟ. ಅರುಣಾಚಲ ಪ್ರದೇಶ

2. ‘ರಾಜ ಲೋಹ’ಗಳಲ್ಲೊಂದಾದ ಬೆಳ್ಳಿಯ ನೈಸರ್ಗಿಕ ಗಟ್ಟಿಯೊಂದು ಚಿತ್ರ-2ರಲ್ಲಿದೆ. ಜಗತ್ತಿನಲ್ಲಿ ಪ್ರಸ್ತುತ ಬೆಳ್ಳಿಯನ್ನು ಗರಿಷ್ಠ ಪ್ರಮಾಣದಲ್ಲಿ ಭೂಮಿಯಿಂದ ಹೊರತೆಗೆಯುತ್ತಿರುವ ದೇಶ ಯಾವುದು?
ಅ. ರಷ್ಯಾ ಬ. ಚೀನಾ ಕ. ಮೆಕ್ಸಿಕೊ ಡ. ಪೆರು ಇ. ಯು.ಎಸ್.ಎ

3. ಚಿತ್ರ -3ರಲ್ಲಿರುವ ವಿಸ್ಮಯಕರ ಶರೀರದ ಸಾಗರ ಜೀವಿಯನ್ನು ಗಮನಿಸಿ. ಈ ಪ್ರಾಣಿ ಯಾವುದೆಂದು ಗುರುತಿಸಬಲ್ಲಿರಾ?
ಅ. ಜೂ ಪ್ಲಾಂಕ್ಟನ್ ಬ. ಕ್ರಿಲ್ ಕ. ನಾಟಿಲಸ್ ಡ. ಜೆಲ್ಲಿ ಮೀನು

ADVERTISEMENT

4. ಈಜಿಪ್ಟ್ ದೇಶದಲ್ಲಿರುವ ವಿಶ್ವ ವಿಖ್ಯಾತ ‘ಗೋರಿ ಪಿರಮಿಡ್’ಗಳು ಚಿತ್ರ-4ರಲ್ಲಿವೆ. ಪರಮ ವಿಸ್ಮಯದ ಈ ಪ್ರಾಚೀನ ಕಟ್ಟಡಗಳು ನಿರ್ಮಾಣಗೊಂಡು ಸುಮಾರು ಎಷ್ಟು ವರ್ಷಗಳಾಗಿವೆ?
ಅ. 3,000 ವರ್ಷ ಬ. 4,500 ವರ್ಷ ಕ. 6,000 ವರ್ಷ ಡ. 10,000 ವರ್ಷ

5. ಪುರಾತನ ಕಾಲದ್ದೇ ಆದ, ಮಧ್ಯ ಅಮೆರಿಕದ ಪ್ರಾಚೀನ ನಾಗರಿಕತೆಗಳ ಜನ ನಿರ್ಮಿಸಿದ, ವಿಶಿಷ್ಟ ವಿನ್ಯಾಸದ, ಲಕ್ಷಾಂತರ ಸಂಖ್ಯೆಯಲ್ಲಿರುವ ಪಿರಮಿಡ್‌ಗಳಲ್ಲೊಂದು ಚಿತ್ರ -5ರಲ್ಲಿದೆ. ಇಂಥ ಪಿರಮಿಡ್‌ಗಳು ಈ ಕೆಳಗಿನ ಯಾವ ರಾಷ್ಟ್ರಗಳಲ್ಲಿವೆ?
ಅ. ಬ್ರೆಜಿಲ್ →ಬ. ಹಾಂಡುರಾಸ್ ಕ. ಬೆಲೀಜ್ ಡ. ಕೊಲಂಬಿಯಾ ಇ. ಮೆಕ್ಸಿಕೊ ಈ. ಅರ್ಜೆಂಟೀನಾ ಉ. ಗ್ವಾಟೆಮಾಲಾ

6. ಅಂದಾಜು ಐದು ಸಾವಿರ ವರ್ಷಗಳ ಹಿಂದೆ, ಆ ಕಾಲದ ಪ್ರಾಚೀನ ಜನರಿಂದ ರಚಿಸಲ್ಪಟ್ಟ ಬೃಹತ್ ಬಂಡೆಗಳ ಒಂದು ನಿಗೂಢ ಜೋಡಣೆ ಚಿತ್ರ-6ರಲ್ಲಿದೆ:

ಅ. ಈ ವಿಶ್ವ ಪ್ರಸಿದ್ಧ ನಿರ್ಮಿತಿಯ ಹೆಸರೇನು?

ಬ. ಇದನ್ನು ಯಾವ ದೇಶದಲ್ಲಿ ಪ್ರತ್ಯಕ್ಷ ನೋಡಬಹುದು?

7. ಅತ್ಯಂತ ವಿಶಿಷ್ಟ ರೂಪದ, ಬೃಹದಾಕಾರದ ಸಾಗರ ಸಂಶೋಧನಾ ನೌಕೆಯೊಂದು ಚಿತ್ರ -7ರಲ್ಲಿದೆ. ಈ ಹಡಗು ಯಾವ ಸಾಗರ ಪ್ರಾಣಿಯನ್ನು ಹೋಲುವಂತೆ ನಿರ್ಮಾಣಗೊಂಡಿದೆ - ಗುರುತಿಸಬಲ್ಲಿರಾ?
ಅ. ಶಾರ್ಕ್ ಬ. ತಿಮಿಂಗಿಲ ಕ. ಮಾಂಟಾ ರೇ ಡ. ಡಾಲ್ಫಿನ್

8. ಭಾರೀ ಕಾಂಡದ, ಬಹು ಎತ್ತರದ, ಬೃಹದಾಕಾರದ, ವಿಚಿತ್ರ ರೂಪದ ವೃಕ್ಷ ಸಮೂಹವೊಂದು ಚಿತ್ರ -8ರಲ್ಲಿದೆ. ಈ ಸುಪ್ರಸಿದ್ಧ ವೃಕ್ಷ ಯಾವುದು?
ಅ. ಹೊನ್ನೆ ಮರ ಬ. ನೀಲಗಿರಿ ವೃಕ್ಷ ಕ. ತೇಗದ ಮರ ಡ. ಬಾವೋಬಾಬ್ ವೃಕ್ಷ ಇ. ರೆಡ್ ವುಡ್ ಮರ

9. ಕಳ್ಳ ಬೇಟೆಗಾರರು ಅಡವಿಯಿಂದ ಕದ್ದು ತಂದಿರುವ ಹಕ್ಕಿ ಮರಿಗಳ ಗುಂಪೊಂದು ಚಿತ್ರ -9ರಲ್ಲಿದೆ. ಗಿಣಿಗಳ ಗುಂಪಿಗೆ ಸೇರಿದ ಈ ಹಕ್ಕಿಗಳು ಯಾವುವೆಂದು ಪತ್ತೆ ಹಚ್ಚಿ:
ಅ. ಪ್ಯಾರಾಕೀಟ್ →ಬ. ಲೋರಿಕೀಟ್ ಕ. ಕೊಕ್ಯಾಟೋ ಡ. ಮಕಾ ಇ. ಲವ್ ಬರ್ಡ್ಸ್

10. ಜಗತ್ತಿನ ಅತ್ಯುಗ್ರ ಬಿಸಿ ಮರುಭೂಮಿಗಳಲ್ಲೊಂದಾದ ಅಟಕಾಮಾ ಮರುಭೂಮಿಯ ಒಂದು ದೃಶ್ಯ ಚಿತ್ರ -10ರಲ್ಲಿದೆ. ಧರೆಯ ಅತ್ಯಂತ ಶುಷ್ಕ ಮರುಭೂಮಿ ಎಂಬ ದಾಖಲೆಯ ಈ ಮರುಭೂಮಿ -
ಅ. ಯಾವ ಭೂಖಂಡದಲ್ಲಿದೆ? ಬ. ಯಾವ ಪರ್ವತ ಪಂಕ್ತಿಗೆ ಹೊಂದಿ ಹರಡಿದೆ? ಕ. ಯಾವ ಮಹಾ ಸಾಗರದ ಅಂಚಿನಲ್ಲಿದೆ?

11. ಸುಪ್ರಸಿದ್ಧ ಭಾರೀ ಬೆಕ್ಕು ಹುಲಿ ಚಿತ್ರ -11ರಲ್ಲಿದೆ. ನೈಸರ್ಗಿಕವಾಗಿ ಅಡವಿಗಳಲ್ಲಿ ಬದುಕುತ್ತಿರುವ ಎಲ್ಲ ಹುಲಿಗಳ ಈಗಿನ ಒಟ್ಟು ಸಂಖ್ಯೆ ಇವುಗಳಲ್ಲಿ ಯಾವುದಕ್ಕೆ ಅತ್ಯಂತ ಸಮೀಪ?
ಅ. 2,500 ಬ. 4,000 ಕ. 5,700 ಡ. 6,800 ಇ. 7,500

12. ಬಹು ವರ್ಣಗಳನ್ನು ಪ್ರದರ್ಶಿಸುವ, ಜನಪ್ರಿಯ, ಹೆಸರಾಂತ ರತ್ನ ‘ಓಪಾಲ್’ ಚಿತ್ರ -12ರಲ್ಲಿದೆ:

ಅ. ವಜ್ರದಲ್ಲಿ ಇಂಗಾಲ ಇರುವಂತೆ ಓಪಾಲ್‌ನಲ್ಲಿ ಪ್ರಧಾನವಾಗಿರುವ ಖನಿಜ ಯಾವುದು?

ಬ. ಈ ರತ್ನವನ್ನು ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುತ್ತಿರುವ ರಾಷ್ಟ್ರ ಯಾವುದು?

13. ಬೇಟೆಗಾರ ಹಕ್ಕಿಗಳ ಒಂದು ಬಗೆ ಚಿತ್ರ-13ರಲ್ಲಿದೆ. ವಿಶೇಷವಾಗಿ ಕಡಲಲ್ಲಿ ಮೀನು ಹಿಡಿವ ಈ ಬೇಟೆಗಾರ ಹಕ್ಕಿ ಇವುಗಳಲ್ಲಿ ಯಾವುದು?
ಅ. ವಲ್ಚರ್ ಬ. ಫಾಲ್ಕನ್  ಕ. ಗಿಡುಗ ಡ. ಕಾಂಡರ್ ಇ. ಆಸ್ಪ್ರೇ

14. ಭಯಂಕರ ಕಾಳ್ಗಿಚ್ಚಿನ ದೃಶ್ಯವೊಂದು ಚಿತ್ರ-14ರಲ್ಲಿದೆ. ಕಾಡು ಕಿಚ್ಚುಗಳಿಗೆ ಮೂಲವಾಗುವ ಅತ್ಯಂತ ಪ್ರಮುಖ ನೈಸರ್ಗಿಕ ಕಾರಣ ಇವುಗಳಲ್ಲಿ ಯಾವುದು?
ಅ. ಮಿಂಚು ಬ. ಜ್ವಾಲಾಮುಖಿ ಸ್ಫೋಟ ಕ. ಬೇಸಿಗೆಯ ಸುಡು ಬಿಸಿಲು ಡ. ಉಲ್ಕಾ ಪಾತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.