ADVERTISEMENT

ಮರಿಗಳ ಹಕ್ಕಿ

ಪುಟಾಣಿ ಪದ್ಯಗಳು

ಆರ್.ವಿಜಯರಾಘವನ್
Published 24 ಸೆಪ್ಟೆಂಬರ್ 2016, 19:30 IST
Last Updated 24 ಸೆಪ್ಟೆಂಬರ್ 2016, 19:30 IST
ಚಿತ್ರಗಳು: ಶಶಿಧರ ಹಳೇಮನಿ
ಚಿತ್ರಗಳು: ಶಶಿಧರ ಹಳೇಮನಿ   

ಮರದ ಮೇಲೆ ಗೂಡುಕಟ್ಟಿ ಏನು ಮಾಡ್ತು ಹಕ್ಕಿ
ಮೊಟ್ಟೆಇಟ್ಟು ಮರಿ ಮಾಡಿಸ್ತು ಚಿಲಿಚಿಲಿ ಮರಿಗಳ ಹಕ್ಕಿ

ಅಜ್ಜಿ ಹೊರಟಳು ಸವ್ವಾರಿ

ಬುಟ್ಟೀಲಿ ಕೂತು ಪೊರಕೆ ಹಿಡಿದು ಆಕಾಶ್ದತ್ತ ಅಜ್ಜಿ
ಅಜ್ಜೀ ಅಜ್ಜೀ ಅಜ್ಜೀ ಎಲ್ಲಿಗೆ ನಿನ್ನ ಸವ್ವಾರಿ
ಚಂದ್ರನ ಮನೇಲಿ ಕಸವಂತೆ ತುಂಬಾ ಗುಡಿಸ್ಬೇಕು ಮರಿ

ADVERTISEMENT

ಅಜ್ಜೀಅಜ್ಜೀ ನಾನೂ ಬರ್ಲಾ ಸಹಾಯ ಮಾಡಕ್ಕೆ
ಅಜ್ಜಿ ಅಂತಾಳೆ ನೋ ನೋ ವೆರಿವೆರಿ ಸಾರಿ
ಅಜ್ಜಿ ಹೊರಟಳು ಸವ್ವಾರಿ, ಒಬ್ಬಳೆ ಬುಟ್ಟಿಯನೇರಿ

********

ಗುಡ್ಡದ ಬುಡದ ಮರ

ಗುಡ್ಡದ ಬುಡದ ಮರದ ಕೊಂಬೆಗೆ ತೊಟ್ಟಿಲನೊಂದ ಕಟ್ಟಿದೆ
ಅದರಲಿ ಪಾಪುವ ಎತ್ಕೊಂಡೋಗಿ ತಣ್ಣಗೆ ಮಲಗಿಸಿದೆ
ಗಾಳಿ ಬಂದಿತು ಸುಯ್ಯನೆ ಹಾರಿ ವಾಪಸು ಮರದ ಬಳಿ
ಲಾಲಿ ಲಾಲಿ ಸುವ್ವಿ ಲಾಲಿ ತೊಟ್ಟಲ ತೂಗಿದೆ

*****

ಕ್ವಾಕ್‌ಕ್ವಾಕ್
ಬಾತುಕೋಳಿ ಬಾತುಕೋಳಿ ಆಡಕ್ ಬಾರೆ ಅಂದೆ
ಬರಾಕಿಲ್ಲ ಬರಾಕಿಲ್ಲ ಅಂತಾಳೆ ಕ್ವಾಕ್‌ಕ್ವಾಕ್‌ಕ್ವಾಕ್ಬೇ
ಡ ಬಾತು ಠೂ ಬಿಡ್ತೀವಿ ಅಂತ ಅಂದರೆ
ಬಿಟ್ಕಳಿ ನಂಗೇನು ಅಂತಾಳವಳು ಕ್ವಾಕ್‌ಕ್ವಾಕ್‌ಕ್ವಾಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.