ADVERTISEMENT

ವಿಜ್ಞಾನ ಪರಿಚಯದ ಕೆಲವು ಪ್ರಶ್ನೆಗಳು

ಎನ್.ವಾಸುದೇವ್
Published 1 ಏಪ್ರಿಲ್ 2017, 19:30 IST
Last Updated 1 ಏಪ್ರಿಲ್ 2017, 19:30 IST
ವಿಜ್ಞಾನ ಪರಿಚಯದ ಕೆಲವು ಪ್ರಶ್ನೆಗಳು
ವಿಜ್ಞಾನ ಪರಿಚಯದ ಕೆಲವು ಪ್ರಶ್ನೆಗಳು   

1. ಆಕಾಶದಲ್ಲಿ ತೇಲುವ ಮೋಡಗಳದು ನಾನಾ ವಿಧ (ಚಿತ್ರ 1,2). ಸ್ವರೂಪದಲ್ಲಿ, ಉನ್ನತಿಯಲ್ಲಿ, ತೇವಾಂಶ ಸಂಗ್ರಹದಲ್ಲಿ... ಪ್ರತಿಯೊಂದರಲ್ಲೂ ಅವು ಭಿನ್ನ ಭಿನ್ನ. ಅದಕ್ಕನುಗುಣವಾಗಿ ಅವುಗಳ ಹೆಸರುಗಳು ಕೂಡ. ಕಪ್ಪಾಗಿ ಕವಿದು, ಕೆಳಮಟ್ಟಕ್ಕೇ ಇಳಿದು ಮಿಂಚು – ಗುಡುಗುಗಳೊಡನೆ  ಭಾರೀ ಮಳೆ ಸುರಿಸುವ ಮೋಡ ವಿಧ ಇವುಗಳಲ್ಲಿ ಯಾವುದು?
ಅ. ಸಿರ್ರಸ್
ಬ. ಆಲ್ಟೊ ಕ್ಯುಮುಲಸ್
ಕ. ಕ್ಯುಮುಲೋ ನಿಂಬಸ್
ಡ. ನಿಂಬೋ ಸ್ಟ್ರಾಟಸ್

2. ಎಲ್ಲೆಲ್ಲೂ ನೆಲಸಿರುವ, ಬರಿಗಣ್ಣಿಗೆ ಗೋಚರವೇ ಆಗದಷ್ಟು ಸೂಕ್ಷ್ಮ ಶರೀರದ, ಅನಾರೋಗ್ಯಕಾರಕವೂ ಆದ ದೂಳು ಹುಳ (ಡಸ್ಟ್ ಮೈಟ್)) ಚಿತ್ರ–3 ರಲ್ಲಿದೆ. ಜೈವಿಕವಾಗಿ, ವೈಜ್ಞಾನಿಕವಾಗಿ ಈ ಕೆಳಗೆ ಹೆಸರಿಸಿರುವ ಯಾವ ಜೀವಿಗೆ ಡಸ್ಟ್ ಮೈಟ್ ಅತ್ಯಂತ ಹತ್ತಿರದ ಸಂಬಂಧಿ?
ಅ. ಜೇಡ
ಬ. ಬೆಳ್ಳಿ ಮೀನು
ಕ. ತಲೆ ಹೇನು
ಡ. ಜಿರಳೆ

3. ನಮ್ಮ ಸೂರ್ಯನಂತಹ ಸಾಮಾನ್ಯ ನಕ್ಷತ್ರವೊಂದರ ಬದುಕಿನ ಅಂತಿಮ ಹಂತವಾದ ‘ಗ್ರಹೀಯ ನೀಹಾರಿಕೆ’ಯೊಂದರ ದೃಶ್ಯ ಚಿತ್ರ –4 ರಲ್ಲಿದೆ. ಗ್ರಹೀಯ ನೀಹಾರಿಕೆಗಳ ಕೇಂದ್ರ ಭಾಗದಲ್ಲಿ ಉಳಿವ ಸಾಂದ್ರ ಉಜ್ವಲ ಅವಶೇಷದ ಹೆಸರೇನು?
ಅ. ಕಪ್ಪು ರಂಧ್ರ
ಬ. ನ್ಯೂಟ್ರಾನ್ ತಾರೆ
ಕ.  ಕಂದು ಕುಬ್ಜ
ಡ. ಶ್ವೇತ ಕುಬ್ಜ

4. ಈಜಿಪ್ಟ್‌ನಲ್ಲಿರುವ ವಿಶ್ವಪ್ರಸಿದ್ಧ ಪಿರಮಿಡ್ ತ್ರಯ ಚಿತ್ರ 5ರಲ್ಲಿವೆ. ಈ ಮೂರರಲ್ಲೂ ಅತ್ಯಂತ ಬೃಹದಾಕಾರದ್ದಾದ ‘ದಿ ಗ್ರೇಟ್ ಪಿರಮಿಡ್’ನ ಎತ್ತರ ಇವುಗಳಲ್ಲಿ ಯಾವುದಕ್ಕೆ ಸಮೀಪ?
ಅ. 615 ಅಡಿ
ಬ. 537 ಅಡಿ
ಕ. 455 ಅಡಿ
ಡ. 398 ಅಡಿ

5. ಚಿತ್ರ–6 ರಲ್ಲಿರುವ ಸುಂದರ ನೈಸರ್ಗಿಕ ಸೃಷ್ಟಿಯನ್ನು ಗಮನಿಸಿ. ಇದೇನು ಗುರುತಿಸಬಲ್ಲಿರಾ?
ಅ. ಅರಳಿರುವ ಹೂಗಳು
ಬ. ಅಣಬೆ
ಕ. ಲೈಕೆನ್ (ಕಲ್ಲು ಹೂವು)
ಡ. ಕೀಟ ಮೊಟ್ಟೆ

6. ಸರ್ವ ವಿಧ ‘ಅಗ್ನಿ ಶಿಲೆ’ಗಳಲ್ಲೂ ಇದ್ದೇ ಇರುವ ಒಂದು ಪ್ರಧಾನ ಖನಿಜ ಚಿತ್ರ 7 ರಲ್ಲಿದೆ. ಈ ಖನಿಜವನ್ನು ಕೆಳಗಿನ ಪಟ್ಟಿಯಲ್ಲಿ ಪತ್ತೆ ಮಾಡಿ:
ಅ. ಕ್ವಾರ್ಟ್ಞ್
ಬ. ಅಭ್ರಕ
ಕ. ಪೈರಾಕ್ಸೀನ್
ಡ. ಫೆಲ್ಡ್‌ಸ್ಟಾರ್

7. ಚಿತ್ರ– 8 ರಲ್ಲಿರುವ ವಿಶಿಷ್ಟ ವಿಖ್ಯಾತ ಮಂಗವನ್ನು ನೋಡಿ. ‘ಹುಲ್ಲನ್ನು ಆಹಾರವಾಗಿ ತಿನ್ನುವ ಏಕೈಕ ಮಂಗ ಪ್ರಭೇದ’ ಎಂದೇ ವಿಶಿಷ್ಟವಗಿರುವ ಈ ಮಂಗ ಯಾವುದು?
ಅ. ಬಬೂನ್
ಬ. ಮ್ಯಾಂಡ್ರಿಲ್
ಕ. ಲಂಗೂರ್
ಡ. ಮೆಕಾಕ್

8. ‘ನಮ್ಮ ಸೌರವ್ಯೂಹದ್ದೇ ಒಂದು ಗ್ರಹ ಮತ್ತು ಅದರ ಮೇಲೆ ನಿಂತರೆ ಕಾಣುವ ಸೂರ್ಯ’ ಇಂಥದ್ದೊಂದು ದೃಶ್ಯ ಚಿತ್ರ–9ರಲ್ಲಿದೆ.
ಅ. ಈ ಗ್ರಹ ಯಾವುದು?
ಬ. ನಿಮ್ಮ ತೀರ್ಮಾನಕ್ಕೆ ಆಧಾರ ಏನು?

9. ಗುರು ಗ್ರಹದ ಚಂದ್ರ ಪರಿವಾರದ ಎರಡು ಸುಪ್ರಸಿದ್ಧ ಚಂದ್ರರು ಚಿತ್ರ–10 ರಲ್ಲಿವೆ. ಈ ಪ್ರತಿ ಚಂದ್ರದ ಒಂದೊಂದು ಪರಮ ವೈಶಿಷ್ಟ್ಯವನ್ನು ಇಲ್ಲಿ ಸೂಚಿಸಲಾಗಿದೆ. ಅವುಗಳ ನೆರವಿನಿಂದ ಈ ಚಂದ್ರರನ್ನು ಗುರುತಿಸಬಲ್ಲಿರಾ?
ಅ. ಸೌರವ್ಯೂಹದಲ್ಲೇ ಗರಿಷ್ಠ ಸಂಖ್ಯೆಯ ಜೀವಂತ ಜ್ವಾಲಾಮುಖಿಗಳನ್ನು ಹೊಂದಿರುವ ಚಂದ್ರ
ಬ. ಈ ಚಂದ್ರನ ಇಡೀ ಮೇಲ್ಮೈ ಮಂಜುಗೆಡ್ಡೆಯ ಹಾಸಿನಿಂದಲೇ ರೂಪುಗೊಂಡಿದೆ.

10. ಧರೆಯಲ್ಲಿರುವ ಭಾರೀ ಶರೀರದ ‘ಹಾರದ ಹಕ್ಕಿ’ಗಳ ಒಂದು ವಿಧ ಚಿತ್ರ– 11ರಲ್ಲಿದೆ. ಈ ಹಕ್ಕಿ ಗೊತ್ತೇ?
ಅ. ಆಸ್ಟ್ರಿಚ್
ಬ. ಎಮು
ಕ. ರಹಿಯಾ
ಡ. ಕ್ಯಾಸೋವರಿ

11. ಭಾರೀ ಕಣ್ಣುಗಳ ಪ್ರಾಣಿಗಳಲ್ಲೊಂದಾದ ‘ಗೂಬೆ’ ಚಿತ್ರ–12 ರಲ್ಲಿದೆ. ಶರೀರ ಗಾತ್ರಕ್ಕೆ ಹೋಲಿಸಿದರೆ ‘ಅತ್ಯಂತ ದೊಡ್ಡ ಗಾತ್ರದ ಕಣ್ಣುಗಳನ್ನು ಹೊಂದಿರುವ ಪ್ರಾಣಿ’ ಎಂಬ ದಾಖಲೆಯನ್ನು ಸೃಜಿಸಿರುವ ಈ ಪ್ರಾಣಿ ಇವುಗಳಲ್ಲಿ ಯಾವುದು?
ಅ. ಟಾರ್ಸಿಯರ್
ಬ. ಗೆಕೋ
ಕ. ಮರಗಪ್ಪೆ
ಡ. ಸ್ಕ್ವಿಡ್

12. ಪರಮಾಣುವಿನೊಳಗಿನ ಕಣ–ಉಪಕಣಗಳ ಚಲನಾ ಪಥಗಳ ಒಂದು ಚಿತ್ರ ಇಲ್ಲಿದೆ (ಚಿತ್ರ–13). ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಪರಮಾಣು ಕಣ ಅಲ್ಲ?
ಅ. ಮ್ಯೂಯಾನ್
ಬ. ಬೋನಾನ್
ಕ. ಫೋಟಾನ್
ಡ. ಫ್ರಿಯಾನ್
ಇ. ಗ್ರಾವಿಟಾನ್

13. ಚಿತ್ರ –14 ರಲ್ಲಿರುವ ಸುಪ್ರಸಿದ್ಧ ‘ಸಾಗರ ಜೀವಿ’ಯನ್ನು ಗಮನಿಸಿ. ಯಾವುದು ಈ ಜೀವಿ?
ಅ. ಹವಳ
ಬ. ಕ್ರೈನಾಯಿಡ್
ಕ. ಮೃದ್ವಂಗಿ
ಡ. ಸ್ಪಾಂಜ್

14. ದೊಡ್ಡ ಹಲ್ಲಿಯೊಂದನ್ನು ಬೇಟೆಯಾಡಿ ತಂದು ತನ್ನ ಮರಿಗಳಿಗೆ ನೀಡುತ್ತಿರುವ ‘ಡೈನೋಸಾರ್’ ಚಿತ್ರ–15 ರಲ್ಲಿದೆ. ಸುಪ್ರಸಿದ್ಧ ಡೈನೋಸಾರ್‌ಗಳ ಈ ಪಟ್ಟಿಯಲ್ಲಿ ಯಾವುದು ಗುಂಪಿಗೆ ಸೇರಿಲ್ಲ?
ಅ. ಇಗ್ವುನೋಡಾನ್
ಬ. ಡಿಪೋಡೋಕಸ್
ಕ. ಟ್ವಟಾರಾ
ಡ. ಬ್ರಾಂಟೋಸಾರಸ್

ಉತ್ತರಗಳು
1. ಕ. ಕ್ಯುಮುಲೋ ನಿಂಬಸ್
2. ಅ. ಜೇಡ
3. ಡ. ಶ್ವೇತಕುಬ್ಞ
4. ಕ. 455 ಅಡಿ
5. ಬ. ಅಣಬೆ
6. ಡ. ಫೆಲ್ಡ್‌ಸ್ಟಾರ್
7. ಅ. ಬಬೂನ್
8. ಅ. ಬುಧ, ಬ– ಕುಳಿಮಯ ಗ್ರಹನೆಲ ಮತ್ತು ಭಾರೀ ಸೂರ್ಯಗಾತ್ರ
9. ಅ. ಎಡಚಿತ್ರ – ಅಯೋ; ಬ–ಬಲಚಿತ್ರ– ಯೂರೋಪಾ
10. ಬ. ಎಮು
11. ಡ. ಸ್ಕ್ವಿಡ್
12. ಡ. ಫ್ರಿಯಾನ್
13. ಸ್ವಾಂಜ್
14. ಕ. ಟ್ವಟರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT