ADVERTISEMENT

ವಿಜ್ಞಾನ ವಿಸ್ಮಯದ ಕೆಲವು ಪ್ರಶ್ನೆಗಳು

ಎನ್.ವಾಸುದೇವ್
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST
ವಿಜ್ಞಾನ ವಿಸ್ಮಯದ ಕೆಲವು ಪ್ರಶ್ನೆಗಳು
ವಿಜ್ಞಾನ ವಿಸ್ಮಯದ ಕೆಲವು ಪ್ರಶ್ನೆಗಳು   

1. ಅರಳಿ ನಿಂತಿರುವ ಸುಂದರ, ಸುಪ್ರಸಿದ್ಧ ಕುಸುಮಗಳ ಗುಚ್ಚವೊಂದು ಚಿತ್ರ-1ರಲ್ಲಿದೆ. ಈ ಹೂಗಳ ಬಗೆ ಯಾವುದೆಂದು ಗುರುತಿಸಬಲ್ಲಿರಾ ?
ಅ. ಲಿಲ್ಲೀ
ಬ. ಆರ್ಕಿಡ್
ಕ. ಟ್ಯೂಲಿಪ್
ಡ. ಮಲ್ಲಿಗೆ
ಇ. ಸುಗಂಧ ರಾಜ

2. ಇಡೀ ಜಗತ್ತಿನಲ್ಲಿ ಏಷ್ಯಾ ಖಂಡಕ್ಕೆ ಸೀಮಿತವಾದ ವಾಸ್ತವ್ಯ ಪಡೆದಿರುವ ‘ವಾನರ’ ವಿಧವೊಂದು ಚಿತ್ರ-2ರಲ್ಲಿದೆ.
ಅ. ಈ ವಾನರ ಯಾವುದು ?
ಬ. ಇದರ ಯಾವ ಪ್ರಭೇದವನ್ನು ಭಾರತದಲ್ಲಿ ಕಾಣಬಹುದು ?
ಕ. ಏಷ್ಯಾ ಖಂಡದಲ್ಲಿ ಮಾತ್ರವೇ ಕಾಣಬಹುದಾದ ಮತ್ತೊಂದು ವಾನರ ವಿಧ ಯಾವುದು ?

3. ಬೃಹತ್ ಕ್ಷುದ್ರ ಗ್ರಹವೊಂದು ಧರೆಗೆ ಅಪ್ಪಳಿಸಿದಾಗ ಸಂಭವಿಸಿದ ಮಹಾ ಪ್ರಳಯವೊಂದು ಆಗ ಭೂಮಿಯಲ್ಲಿ ಕಿಕ್ಕಿರಿದಿದ್ದ ಎಲ್ಲ ‘ಡೈನೋಸಾರ್’ಗಳನ್ನೂ ನಿರ್ನಾಮ ಮಾಡಿದ್ದು ಗೊತ್ತಲ್ಲ? ಆ ಘಟನೆ ನಡೆದದ್ದು ಈಗ್ಗೆ ಎಷ್ಟು ವರ್ಷ ಹಿಂದೆ ಗೊತ್ತೇ?
ಅ. 15 ದಶಲಕ್ಷ ವರ್ಷ ಹಿಂದೆ
ಬ. 48 ದಶಲಕ್ಷ ವರ್ಷ ಹಿಂದೆ
ಕ. 65 ದಶಲಕ್ಷ ವರ್ಷ ಹಿಂದೆ
ಡ. 135 ದಶಲಕ್ಷ ವರ್ಷ ಹಿಂದೆ

ADVERTISEMENT

4. ತನ್ನ ವರ್ಣಮಯ ಗರಿ-ರೆಕ್ಕೆಗಳನ್ನು ಪ್ರದರ್ಶಿಸುತ್ತಿರುವ ಪ್ರಸಿದ್ಧ ಹಕ್ಕಿ ‘ಸನ್ ಬಿಟರ್ನ್’ ಚಿತ್ರ-4ರಲ್ಲಿದೆ. ಈ ಹಕ್ಕಿಯ ನೈಸರ್ಗಿಕ ನೆಲೆ ದಕ್ಷಿಣ ಅಮೆರಿಕ ಖಂಡ. ಹಾಗಾದರೆ ಈ ಕೆಳಗೆ ಪಟ್ಟಿ ಮಾಡಿರುವ ಹಕ್ಕಿಗಳನ್ನೂ ಅವುಗಳ ನೈಸರ್ಗಿಕ ನೆಲೆಯಾಗಿರುವ ಭೂ ಖಂಡಗಳನ್ನೂ ಸರಿಹೊಂದಿಸಿ:
1. ಗೋಲ್ಡನ್ ಪ್ಲೋವರ್ ಅ. ಏಷ್ಯಾ
2. ಎಮು ಬ. ದಕ್ಷಿಣ ಅಮೆರಿಕ
3. ಬಾಲ್ಡ್ ಈಗಲ್ ಕ. ಆಸ್ಟ್ರೇಲಿಯಾ
4. ಮಕಾ ಡ. ಅಂಟಾರ್ಕ್ಟಿಕಾ
5. ಎಂಪರರ್ ಪೆಂಗ್ವಿನ್ ಇ. ಯೂರೋಪ್
6. ನವಿಲು ಈ. ಉತ್ತರ ಅಮೆರಿಕ

5. ನಿರಭ್ರ ಆಕಾಶದಲ್ಲಿ ಅತ್ಯಂತ ಸ್ಪಷ್ಟವಾಗಿ ಗೋಚರಿಸುವ ಅತ್ಯಂತ ಪರಿಚಿತ ನಕ್ಷತ್ರ ಪುಂಜ ‘ಮಹಾ ವ್ಯಾಧ’ (ಓರಿಯಾನ್) ಚಿತ್ರ-5ರಲ್ಲಿದೆ. ಇಲ್ಲಿ ಹೆಸರಿಸಿರುವ ಉಜ್ವಲ ನಕ್ಷತ್ರಗಳಲ್ಲಿ ಯಾವುವು ಈ ನಕ್ಷತ್ರ ಪುಂಜದಲ್ಲಿವೆ?
ಅ. ಪೊಲಾರಿಸ್
ಬ. ರೀಗಲ್
ಕ. ಸಿರಿಯಸ್
ಡ. ಆಲ್ಡೆಬ್ರಾನ್
ಇ. ಕ್ಯಾಪೆಲ್ಲ
ಈ. ಬೀಟಲ್ ಗೀಸ್

6. ಪ್ರಸ್ತುತ ಭೂಮಿಯನ್ನು ಪರಿಭ್ರಮಿಸುತ್ತ ಆಕಾಶದಲ್ಲಿ ಕ್ರಿಯಾಶೀಲವಾಗಿರುವ ಅದ್ಭುತ ವಾಹನ ‘ಇಂಟರ್ ನ್ಯಾಶನಲ್ ಸ್ಪೇಸ್ ಸ್ಟೇಶನ್’ ಚಿತ್ರ-6ರಲ್ಲಿದೆ. ಇದು ಈ ಕೆಳಗಿನ ಯಾವ ಬಗೆಯ ನಿರ್ಮಿತಿಯಾಗಿದೆ?
ಅ. ವ್ಯೋಮ ದೂರದರ್ಶಕ
ಬ. ವ್ಯೋಮ ಮಾನವ ವಸಾಹತು
ಕ. ಕೃತಕ ಉಪಗ್ರಹ
ಡ. ವ್ಯೋಮ ನೌಕೆ

7. ಕಡಲಿನ ಉಗ್ರ ಬೇಟೆಗಾರರಾದ ‘ಶಾರ್ಕ್’ಗಳ ಒಂದು ವಿಶಿಷ್ಟ ವಿಧ ಚಿತ್ರ-7ರಲ್ಲಿದೆ. ಯಾವುದು ಈ ಶಾರ್ಕ್?
ಅ. ಟೈಗರ್ ಶಾರ್ಕ್
ಬ. ವ್ಹೇಲ್ ಶಾರ್ಕ್
ಕ. ವೈಟ್ ಟಿಪ್ ಶಾರ್ಕ್
ಡ. ದಿ ಗ್ರೇಟ್ ವೈಟ್ ಶಾರ್ಕ್

8. ‘ಹಂಸ ಗೀತೆ’, ‘ಹಂಸ ಕ್ಷೀರ ನ್ಯಾಯ’ ಇತ್ಯಾದಿ ಮಿಥ್ಯಾ ಕಲ್ಪನೆಗಳಲ್ಲೂ, ‘ಹಂಸ ಧ್ವನಿ’, ‘ಹಂಸ ನಾದ’ ಇತ್ಯಾದಿ ಸಂಗೀತ ರಾಗಗಳಲ್ಲೂ ಬೆರೆತಿರುವ ಹೆಸರಿನ ಪ್ರಸಿದ್ಧ ಪಕ್ಷಿ ‘ಹಂಸ’ ಚಿತ್ರ-8ರಲ್ಲಿದೆ. ಹಂಸಗಳಲ್ಲಿ ಎಷ್ಟು ಪ್ರಭೇದಗಳಿವೆ ಗೊತ್ತೇ ?
ಅ. ನಾಲ್ಕು
ಬ. ಆರು
ಕ. ಒಂಬತ್ತು
ಡ. ಹದಿಮೂರು

9. ಚಿತ್ರ-9ರಲ್ಲಿರುವ ಮತ್ಸ್ಯವನ್ನು ಗಮನಿಸಿ. ರೂಪಾನ್ವಯ ಹೆಸರನ್ನೇ ಹೊಂದಿರುವ ಈ ಮೀನು ಯಾವುದು, ಗುರುತಿಸಿ:
ಅ. ಬಲೂನು ಮೀನು
ಬ. ಜೀಬ್ರಾ ಮೀನು
ಕ. ಮುಳ್ಳು ಹಂದಿ ಮೀನು
ಡ. ಚಿಟ್ಟೆ ಮೀನು

10. ಭೂ ಖಂಡವೊಂದರ ಬೇಸಿಗೆಯ ನಡು ಹಗಲಿನ ದೃಶ್ಯವೊಂದು ಚಿತ್ರ-10ರಲ್ಲಿದೆ. ಈ ದೃಶ್ಯವನ್ನು ಸೂಕ್ಷ್ಮವಾಗಿ ಗಮನಿಸಿ. ಇದು ಯಾವ ಭೂ ಖಂಡವೆಂದು ಪತ್ತೆ ಮಾಡಿ:

ಅ. ಆಸ್ಟ್ರೇಲಿಯಾ
ಬ. ಉತ್ತರ ಅಮೆರಿಕ
ಕ. ಯೂರೋಪ್
ಡ. ಅಂಟಾರ್ಕ್ಟಿಕಾ

11. ಮೃದ್ವಂಗಿ ನಿರ್ಮಿತ ಕಡಲ ಚಿಪ್ಪೊಂದು ಚಿತ್ರ-11ರಲ್ಲಿದೆ. ಮೃದ್ವಂಗಿ ಚಿಪ್ಪುಗಳಲ್ಲಿನ ಪ್ರಧಾನ ದ್ರವ್ಯ ಇವುಗಳಲ್ಲಿ ಯಾವುದು?

ಅ. ಕ್ಯಾಲ್ಷಿಯಂ ಕಾರ್ಬನೇಟ್
ಬ. ಕ್ಯಾಲ್ಶಿಯಂ ಬೈ ಕಾರ್ಬನೇಟ್
ಕ. ಸೋಡಿಯಂ ಕ್ಲೋರೈಡ್
ಡ. ಸೋಡಿಯಂ ಸಲ್ಫೇಟ್

12. ಇತ್ತೀಚೆಗೆ ಪತ್ತೆಯಾದ ಪೂರ್ವ ಮಾನವ ಪ್ರಭೇದವೊಂದರ ಮುಖ ರಚನೆ ಚಿತ್ರ-12ರಲ್ಲಿದೆ. ಈ ಪ್ರಖ್ಯಾತ ಪ್ರಭೇದವನ್ನು ಗುರುತಿಸಬಲ್ಲಿರಾ?

ಅ. ಹೋಮೋ ಇರೆಕ್ಟಸ್
ಬ. ಹೋಮೋ ಸೇಪಿಯನ್
ಕ. ಹೋಮೋ ನಾಲೆಡಿ
ಡ. ಹೋಮೋ ಎರ್ಗಾಸ್ಟರ್

13. ವೃಷ್ಟಿವನವಾಸಿಯಾದ, ತುಂಬ ವಿಶಿಷ್ಟವಾದ ಒಂದು ಪ್ರಸಿದ್ಧ ಪ್ರಾಣಿ ‘ಸ್ಲಾತ್’ ಚಿತ್ರ-13ರಲ್ಲಿದೆ. ಈ ಪ್ರಾಣಿಯ ವಿಶಿಷ್ಟ ವಿಶ್ವದಾಖಲೆ ಇವುಗಳಲ್ಲಿ ಯಾವುದು?

ಅ. ಅತ್ಯಂತ ಮಂದ ಚಲನೆಯ ಪ್ರಾಣಿ
ಬ. ಅತ್ಯಂತ ವೇಗ ನಡೆಯ ಪ್ರಾಣಿ
ಕ. ಅತ್ಯಂತ ಮಂದ ಚಲನೆಯ ಸ್ತನಿ
ಡ. ಅತ್ಯಂತ ವೇಗ ಚಲನೆಯ ಸ್ತನಿ

14. ತೆಂಗಿನ ಮರದ ಸಸಿಯೊಂದು ಚಿತ್ರ-14ರಲ್ಲಿದೆ. ಇಲ್ಲಿ ಹೆಸರಿಸಿರುವ ಸಸ್ಯಗಳಲ್ಲಿ ಯಾವುದು ತೆಂಗಿನ ಮರದ ಸಂಬಂಧಿ ಅಲ್ಲ? ನಿಮ್ಮ ತೀರ್ಮಾನಕ್ಕೆ ಆಧಾರ ಏನು?

ಅ. ಅಡಿಕೆ ಮರ
ಬ. ಖರ್ಜೂರದ ಮರ
ಕ. ತಾಳೆ ಮರ
ಡ. ಆಲಿವ್ ಮರ

*
ಉತ್ತರಗಳು:

1. ಬ. ಆರ್ಕಿಡ್

2. ಅ. ಗಿಬ್ಬನ್ ; ಬ. ಹೂಲಾಕ್ ಗಿಬ್ಬನ್ ; ಕ. ಒರಾಂಗೊಟಾನ್

3. ಕ. 65 ದಶಲಕ್ಷ ವರ್ಷ ಹಿಂದೆ

4. 1.ಇ ; 2. ಕ ; 3. ಈ ; 4. ಬ ; 5. ಡ ; 6. ಅ

5. ಬ. ರೀಗಲ್ ಮತ್ತು ಡ. ಆಲ್ಡಬ್ರಾನ್

6. ಕ. ಕೃತಕ ಉಪಗ್ರಹ

7. ಡ. ದಿ ಗ್ರೇಟ್ ವೈಟ್ ಶಾರ್ಕ್

8. ಬ. ಆರು ಪ್ರಭೇದಗಳು

9. ಕ. ಮುಳ್ಳು ಹಂದಿ ಮೀನು

10. ಡ. ಅಂಟಾರ್ಕ್ಟಿಕಾ

11. ಅ. ಕ್ಯಾಲ್ಷಿಯಂ ಕಾರ್ಬನೇಟ್

12. ಕ. ಹೋಮೋ ನಾಲೆಡಿ

13. ಕ. ಅತ್ಯಂತ ಮಂದ ಚಲನೆಯ ಸ್ತನಿ

14. ಡ. ಆಲಿವ್ ಮರ. ಇದು ‘ತಾಳೆ ಸಸ್ಯ’ ಅಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.