ADVERTISEMENT

ಇರುವೆಯ ನಗು

ರಾಧೇಶ ತೋಳ್ಪಾಡಿ ಎಸ್.
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST
ಇರುವೆಯ ನಗು
ಇರುವೆಯ ನಗು   

ನಗುವೋ ನಗು ಇರುವೆಗೆ

ಆನೆ ಕಂಡ ರೀತಿಗೆ!

ಗುಡ್ಡ ಮೈ

ADVERTISEMENT

ಸೊಂಡಿಲ ಕೈ

ಪಿಳಿ ಪಿಳಿ ನೋಡಲು ಐ!

ಮತ್ತೆ ಮರುಗಳಿಗೆಗೆ

ಯಾಕೋ ಅನಿಸಿತಿರುವೆಗೆ:

‘ನಕ್ಕೆನಲ್ಲ, ಛೆ!

ತಪ್ಪು ಮಾಡಿ–ದೆ!

ನನಗೆ ತಾನೆ ಏನು ಗೊತ್ತು

ಆನೆ ಕಷ್ಟ ಆನೆಗೆ!’

ಕಂಬ ಕಾಲು ಎತ್ತಿ ಎತ್ತಿ

ನಡೆಯುತಿತ್ತು ಆನೆಯು

ಪರಿವೆ ಇಲ್ಲ

ಅರಿವೇ ಇಲ್ಲ‌

ಮನದೊಳೇನು ಬೇನೆಯೋ!

‘ಉಗ್ರ ಸಿಂಹ

ಹಸಿದ ತೋಳ

ಹೊಂಚು ಹಾಕುತಿರುವವೋ?

ಶಕುನಿ ಶನಿ

ಕಳ್ಳ ನರಿ

ಮಸೆದು ಕಾದು ಕುಳಿತವೋ?’

‘ನಕ್ಕೆನಲ್ಲ, ಛೇ!

ತಿಳಿದು ನೋಡ–ದೆ!’

ದುಃಖ ಉಕ್ಕಿ ಇರುವೆಗೆ

ಬಿತ್ತು ಆನೆ ಕಾಲಿಗೆ!

‘ಕ್ಷಮಿಸು ಅಣ್ಣ

ನಿಜಕೂ ನೀನು

ಗೆಳೆಯ ನನ್ನ ಪಾಲಿಗೆ

ರಾಜ, ನಮ್ಮ ಕಾಡಿಗೆ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.