ADVERTISEMENT

ಹುಚ್ಚುತನ

ಮಕ್ಕಳ ಕವನ

ರಾಘವೇಂದ್ರ ಈ ಹೊರಬೈಲು
Published 7 ಜುಲೈ 2018, 12:51 IST
Last Updated 7 ಜುಲೈ 2018, 12:51 IST
   

ನಮ್ಮೂರಲೊಂದು ನಾಯಿ

ಮುದ್ದಾದ ಪೆದ್ದು ನಾಯಿ

ನಾಯಿಗೊಂದು ಬಾಲ?

ADVERTISEMENT

ನಾಯಿ ನೆಟ್ಟಗುದ್ದಗೆ

ಬಾಲ?

ಅಂಕು ಡೊಂಕು ಕೊಂಕು.

ನಡೆವಾಗ ನಾಯಿ

ಬಾಲದ ನೃತ್ಯ

ಐನಾತಿ ಪಡ್ಡೆ ನಾನು

ಸೊಟ್ಟಗಿರುವುದ ನೆಟ್ಟಗಾಗಿಸೋ ಹುಂಬತನ

ಬಾಲವನ್ನು ಬಿಡುವುದೇನು?

ನೆಟ್ಟನೆ ದಬ್ಬೆ ಹುಡುಕಿದುದಾಯ್ತು

ದಾರ ಹೊಸೆದು ಮುಗಿಸಿದುದಾಯ್ತು

ಕುಂಯ್ಕುಂಯ್ ನುಡಿವ

ನಾಯಿಯ ಹಿಡಿದು

ಬಾಲಕೆ ನೆಟ್ಟನೆ ದಬ್ಬೆಯ ಕಟ್ಟಿ

ಗೆದ್ದೆನು ನಾನು ಎನ್ನುತ ಬೀಗಿ

ಊರಲಿ ಬಿಮ್ಮನೆ ನಡೆಯುತಲಿರಲು

ಎದುರಲಿ ನಾಯಿಯು ಬರುತಿರಲು

ಡೊಂಕು ಬಾಲವು ನರ್ತಿಸುತಿರಲು

ಕಟ್ಟಿದ ದಾರವು ಬಿಚ್ಚಿತ್ತು

ಬಾಲವು ಸೊಟ್ಟನೆ ಕುಣಿತಿತ್ತು

ನೆಟ್ಟಗಾಗಿಸೋ ಹುಚ್ಚು ಬಿಟ್ಟಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.