ADVERTISEMENT

ವಿನೂತನ ಹೋಂಡಾ ಆಕ್ಟಿವಾ 5ಜಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST
‘ಆಕ್ಟಿವಾ 5ಜಿ’
‘ಆಕ್ಟಿವಾ 5ಜಿ’   

ಹೋಂಡಾ, ಐದನೇ ತಲೆಮಾರಿನ ‘ಆಕ್ಟಿವಾ 5ಜಿ’ ಸ್ಕೂಟರ್ ಬಿಡುಗಡೆಗೊಳಿಸಿದೆ. ಹೆಸರೇ ಹೇಳುವಂತೆ, ಇದು ಐದನೇ ತಲೆಮಾರಿನ ಸ್ಕೂಟರ್. ಅಂದರೆ ಹಿಂದಿನ ಸ್ಕೂಟರ್‌ಗಳ ಅತಿ ಪರಿಷ್ಕೃತ ವಾಹನ ಎನ್ನಬಹುದು.

ಹಾಗಾದರೆ ಇದರಲ್ಲಿ ಪರಿಷ್ಕೃತಗೊಂಡಿರುವ ಅಂಶಗಳಾವುವು? ಹೋಂಡಾ ತನ್ನ ಎಸ್‌ಟಿಡಿ ಅವತರಣಿಕೆ ಹಾಗೂ ಡಿಎಲ್‌ಎಕ್ಸ್ ಅವತರಣಿಕೆಗಳನ್ನು ಈ ಮಾದರಿಯಲ್ಲಿ ಹೊರತಂದಿದೆ. ಎಸ್‌ಟಿಡಿಗೆ ₹ 52,460 ಹಾಗೂ ಡಿಎಲ್‌ಎಕ್ಸ್ ಆವೃತ್ತಿಗೆ
₹ 54,325 (ಎಕ್ಸ್‌ ಶೋರೂಂ, ದೆಹಲಿ) ಬೆಲೆಯನ್ನು ನಿಗದಿಗೊಳಿಸಿದೆ. ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಕ್ರೋಮ್ ಸ್ಟೈಲಿಂಗ್ ಇನ್‌ಸರ್ಟ್ ಇವೆ. ಎರಡೂ ಅವತರಣಿಕೆಯಲ್ಲಿವೆ.

ಡಿಎಲ್‌ಎಕ್ಸ್‌ನಲ್ಲಿ ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಇದ್ದು, ಅದಕ್ಕೆ ಇಕೊ ಮತ್ತು ಸರ್ವೀಸ್ ಡ್ಯೂ ಇಂಡಿಕೇಟರ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಚಿಕ್ಕ ಬ್ಯಾಗ್‌ಗಳನ್ನು ಇಟ್ಟುಕೊಳ್ಳಲು ಫ್ರಂಟ್ ಹುಕ್‌ಗಳನ್ನು ನೀಡಲಾಗಿದೆ. ರಕ್ಷಣೆಗೆ ಮೆಟಲ್ ಮಫ್ಲರ್ ಪ್ರೊಟೆಕ್ಟರ್ ಇದೆ. ಸೀಟ್ ತೆರೆಯುವ ಸ್ವಿಚ್ ಅನುಕೂಲವೂ ಇದೆ.

ADVERTISEMENT

ತಾಂತ್ರಿಕವಾಗಿ ಅಷ್ಟೇನೂ ಬದಲಾವಣೆಯಾಗಿಲ್ಲ. 109ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್, 7,500 ಆರ್‌ಪಿಎಂನಲ್ಲಿ 8ಎಚ್‌ಪಿ ಹಾಗೂ 5,500ಆರ್‌ಪಿಎಂನಲ್ಲಿ 9 ಎನ್‌ಎಂ ಟಾರ್ಕ್ ಶಕ್ತಿ ಉತ್ಪಾದಿಸುತ್ತದೆ.

***
ಈ ಎರ್ಟಿಗಾದಲ್ಲಿ ಏನೇನಿದೆ?‌
ಮಾರುತಿ, ಇದೇ ಆಗಸ್ಟ್‌ನಲ್ಲಿ ಹೊಸ ಎರ್ಟಿಗಾ ಎಂಪಿವಿ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯನ್ನು ರೂಪಿಸುತ್ತಿದೆ.

ಸದ್ಯಕ್ಕೆ 2012ರಿಂದಲೂ ಈ ಮಾದರಿ ಮಾರುಕಟ್ಟೆಯಲ್ಲಿದೆ. 2015ರಲ್ಲಿ ಸ್ವಲ್ಪ ಮಟ್ಟಿಗೆ ಪರಿಷ್ಕೃತಗೊಂಡಿದ್ದ ಈ ವಾಹನ ಇದೀಗ ಸಾಕಷ್ಟು ಬದಲಾವಣೆಗಳೊಂದಿಗೆ ಹೊರಬರುವ ನಿರೀಕ್ಷೆಯಿದೆ. ಇದರ ಪ್ರಾಯೋಗಿಕ ಪರೀಕ್ಷೆಗಳೂ ನಡೆಯುತ್ತಿವೆ.

ಈ ಎಂಪಿವಿ ಹಿಂದಿನ ಮಾದರಿಗಿಂತ ಹೆಚ್ಚು ಉದ್ದ, ಅಗಲವಿದೆ. ಹಿಂದಿನ ಓವರ್ ಹ್ಯಾಂಗ್ ಉದ್ದವಿದ್ದು, ಮೂರನೆ ಸಾಲಿನ ಸೀಟಿನವರಿಗೆ ಹೆಚ್ಚಿನ ಜಾಗ ಸಿಗಬೇಕೆಂದು ಹೀಗೆ ವಿನ್ಯಾಸಗೊಳಿಸಲಾಗಿದೆ.

ಕಾರಿನ ಇಂಟೀರಿಯರ್ ವಿಷಯಕ್ಕೆ ಗ್ರಾಹಕರು ಸಾಕಷ್ಟು ಮಹತ್ವ ನೀಡುತ್ತಿರುವುದು ಹಾಗೂ ಸ್ಪರ್ಧೆ ಹೆಚ್ಚಿರುವುದು ಎಂಪಿವಿ ಅಳತೆಯನ್ನು ಹಿಗ್ಗಿಸಲು ಇರುವ ಪ್ರಮುಖ ಕಾರಣ.

1.4 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ ಇದೆ. ಸದ್ಯಕ್ಕೆ 1.5 ಲೀಟರ್ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುವ ಆಲೋಚನೆ ನಡೆದಿದೆ. ಈ ಎಂಪಿವಿಯ ಇತರೆ ತಾಂತ್ರಿಕ ವಿಷಯಗಳು ಹಾಗೂ ಬೆಲೆಯ ಕುರಿತು ಕಂಪನಿ ಅಧಿಕೃತ ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.