ADVERTISEMENT

ಆಹಾರ ಸಂಸ್ಕರಣೆಗೆ ಶೇ9.5 ಬಡ್ಡಿ ಸಾಲ

ನಬಾರ್ಡ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:30 IST
Last Updated 29 ಅಕ್ಟೋಬರ್ 2014, 19:30 IST

ನವದೆಹಲಿ(ಪಿಟಿಐ): ಗ್ರಾಮೀಣಾಭಿ ವೃದ್ಧಿ ಮತ್ತು ಕೃಷಿ ಕ್ಷೇತ್ರದ ಪ್ರಗತಿಗಾಗಿ ಸಾಲ ವಿತರಿಸುವ ಬ್ಯಾಂಕಿಂಗ್‌ ಸಂಸ್ಥೆ ಯಾದ ನಬಾರ್ಡ್‌, ಆಹಾರ ಸಂಸ್ಕರಣಾ ಉದ್ಯಮಕ್ಕೆ ಶೇ 9.5ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸು ವುದಾಗಿ ಪ್ರಕಟಿಸಿದೆ.

ಪ್ರಸಕ್ತ ಹಣಕಾಸು ವರ್ಷದ ಮುಂಗ ಡಪತ್ರದಲ್ಲಿ ಕೇಂದ್ರ ಸರ್ಕಾರ ₨2000 ಕೋಟಿಗಳನ್ನು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ  (ನಬಾರ್ಡ್‌) ನೀಡಿದೆ. ಈ ಹಣದಲ್ಲಿ ಹೆಚ್ಚಿನಂಶವನ್ನು ಆಹಾರ ಸಂಸ್ಕ ರಣಾ ಉದ್ಯಮ ಕ್ಷೇತ್ರಕ್ಕೆ ಸಾಲವಾಗಿ ನೀಡಲು ನಬಾರ್ಡ್‌ ಮುಂದಾಗಿದೆ.

ಕೇಂದ್ರದ ಆಹಾರ ಸಂಸ್ಕರಣಾ ಸಚಿವಾಲಯದ ಅಧಿಕಾರಿಗಳು ನಬಾರ್ಡ್‌ನ ಮುಖ್ಯ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಕೇಂದ್ರ ಸರ್ಕಾರ ಒದಗಿಸಿರುವ ₨2000 ಕೋಟಿಯಲ್ಲಿ ಆಹಾರ ಸಂಸ್ಕರಣಾ ಉದ್ಯಮಕ್ಕೆ ಶೇ 9.5ರಷ್ಟು ಬಡ್ಡಿದರದಲ್ಲಿ ಸಾಲ ವಿತರಿಸುವ ಕುರಿತು ಚರ್ಚಿಸಿದರು.

ಮೆಗಾ ಫುಡ್‌ಪಾರ್ಕ್‌ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರದ ಆಹಾರ ಸಂಸ್ಕರಣಾ ಸಚಿವಾಲಯಕ್ಕೆ ಒಟ್ಟು 72 ಪ್ರಸ್ತಾವನೆಗಳು ಬಂದಿವೆ. ತುಮಕೂರು ಜಿಲ್ಲೆಯ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಮೆಗಾ ಫುಡ್‌ಪಾರ್ಕ್‌ ಸೇರಿದಂತೆ 42 ಯೋಜನೆಗಳಿಗೆ ಸಚಿವಾಲಯ ಅನುಮೋದನೆ ನೀಡಿದೆ.

ಅದಾನಿ ಗ್ರೂಪ್‌, ಐಟಿಸಿ, ಫ್ಯೂಚರ್‌ ಗ್ರೂಪ್‌ ಸೇರಿದಂತೆ ವಿವಿಧ ಸಂಸ್ಥೆಗಳ 17  ಮೆಗಾ ಫುಡ್‌ಪಾರ್ಕ್‌ ಯೋಜನೆಗಳಿಗೆ ಮುಂದಿನ ಎರಡು ಮೂರು ತಿಂಗಳಲ್ಲಿ ಸಚಿವಾಲು ಒಪ್ಪಿಗೆ ನೀಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.