ಬೆಂಗಳೂರು: ಅಮೆರಿಕದ ತಂತ್ರಜ್ಞಾನ ದೈತ್ಯ ಸಂಸ್ಥೆ ಆ್ಯಪಲ್ ಇಂಕ್, ತನ್ನ ಬಹು ಜನಪ್ರಿಯ 4 ಇಂಚು ಪರದೆಯ ‘ಐಫೋನ್ ಎಸ್ಇ’ಗಳ ಆರಂಭಿಕ ತಯಾರಿಕೆಗೆ ಬೆಂಗಳೂರು ಘಟಕದಲ್ಲಿ ಚಾಲನೆ ನೀಡಿದೆ.
ಸಣ್ಣ ಪ್ರಮಾಣದಲ್ಲಿ ತಯಾರಿಕೆ ಆರಂಭಿಸಲಾಗಿದೆ. ಈ ತಿಂಗಳಲ್ಲಿ ದೇಶಿ ಮಾರುಕಟ್ಟೆಗೆ ಮೊಬೈಲ್ ಬಿಡುಗಡೆ ಮಾಡುವುದಾಗಿ ಸಂಸ್ಥೆ ತಿಳಿಸಿದೆ.
ನಗರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಈ ತಯಾರಿಕಾ ಘಟಕ ಅಸ್ತಿತ್ವಕ್ಕೆ ಬರಲಿದೆ ಎಂದು ರಾಜ್ಯ ಸರ್ಕಾರ ಫೆಬ್ರುವರಿಯಲ್ಲಿ ತಿಳಿಸಿತ್ತು. ಆ್ಯಪಲ್ ಸಂಸ್ಥೆ ಪರವಾಗಿ ತೈವಾನಿನ ವಿಸ್ಟ್ರನ್ ಈ ಫೋನ್ ತಯಾರಿಸಲಿದೆ. ಸ್ಥಳೀಯವಾಗಿಯೇ ತಯಾರಿಸುವ ಫೋನ್ಗಳು ಅಗ್ಗವಾಗಿರಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.